'ಡೀಸೆಲ್ ಪರೋಟಾ' ನೀವು ಎಂದಾದರೂ ತಿಂದಿದ್ದೀರಾ? ಟೇಸ್ಟ್​ ಮಾಡೋದು ಇರಲಿ ನೋಡಲು ಕಷ್ಟವಾಗುತ್ತದೆ...

Chandigarh Dhaba Under Fire After Video Of Diesel Paratha Goes Viral
Published on

ನವದೆಹಲಿ: ಅನೇಕ ಜನರು ಬೆಳಗಿನ ಉಪಹಾರ ಮತ್ತು ರಾತ್ರಿ ಊಟಕ್ಕೆ ಚಪಾತಿ ಮತ್ತು ಪರೋಟಾಗಳನ್ನು ಸಾಮಾನ್ಯವಾಗಿ ಎಲ್ಲರೂ ತಿನ್ನುತ್ತಾರೆ. ಪರೋಟಾಗಳನ್ನು ಬೆಣ್ಣೆ, ತುಪ್ಪ ಮತ್ತು ಎಣ್ಣೆಯಿಂದ ಹುರಿಯಲಾಗುತ್ತದೆ. ಆದರೆ ಸೋಷಿಯಲ್ ಮೀಡಿಯಾದಲ್ಲಿ ವ್ಯಕ್ತಿಯೊಬ್ಬ ಮಾಡಿರುವ ಡೀಸೆಲ್ ಪರೋಟಾವೊಂದು ನೆಟ್ಟಿಗರನ್ನು ಬೆಚ್ಚಿ ಬೀಳಿಸುತ್ತಿದೆ.

ವೀಡಿಯೋದಲ್ಲಿ, ಮೊದಲು ಢಾಬಾದಲ್ಲಿ ಕೆಲಸ ಮಾಡುವ ಕುಕ್ ಮಾಸ್ಟರ್ ಮೊದಲು ಹಿಟ್ಟನ್ನು ತೇವಗೊಳಿಸಿ ರೊಟ್ಟಿ ಮಾಡಿ.. ಅದಕ್ಕೆ ಬೇಯಿಸಿದ ಆಲೂಗಡ್ಡೆ ಹಾಕಿ. ಬಳಿಕ ಆಲೂ ಪರೋಟಾವನ್ನು ಮೆಲ್ಲನೆ ಒತ್ತುತ್ತಾನೆ. ಅದನ್ನು ತವಾ ಮೇಲೆ ಇರಿಸಿ ಮತ್ತು ಎರಡೂ ಬದಿಗಳನ್ನು ಕೊಂಚ ಬಿಸಿ ಮಾಡುತ್ತಾನೆ. ಕೊನೆಗೆ ತವಾ ಮೇಲೆ ಬೆಯುತ್ತಿದ್ದ ಪರೋಟಾಗೆ ತುಪ್ಪದ ಬದಲು ಡೀಸೆಲ್ ಸುರಿದರು.

ಡೀಸೆಲ್ ಮಿಕ್ಸ್ ಎಂದು ಹೇಳಿ ಇಡೀ ಪರೋಟವನ್ನು ಡೀಸೆಲ್ ನಲ್ಲಿ ಅದ್ದಿ ಚೆನ್ನಾಗಿ ಬೇಯಿಸಿದರು. ವಾಹನಗಳಲ್ಲಿ ಬಳಸುವ ಡೀಸೆಲ್ ನಿಂದ ಪರೋಟಾ ತಯಾರಿಸುವ ವಿಡಿಯೋ ನೋಡಿದ ಗ್ರಾಹಕರು ಬೆಚ್ಚಿಬಿದ್ದಿದ್ದಾರೆ.

ಈ ವಿಡಿಯೋವನ್ನು ನೆಬ್ಯುಲಾ ವರ್ಲ್ಡ್ ಎಂಬ 'ಎಕ್ಸ್' ಖಾತೆಯಲ್ಲಿ ಪೋಸ್ಟ್ ಮಾಡಲಾಗಿದ್ದು, ಅದು ವೈರಲ್ ಆಗಿದೆ. ಈ ಭಯಾನಕ ವೀಡಿಯೊ ಈಗಾಗಲೇ ನಾಲ್ಕು ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ. ವಿಡಿಯೋ ನೋಡಿದ ಹಲವರು ವಿಭಿನ್ನವಾಗಿ ಪ್ರತಿಕ್ರಿಯಿಸಿದ್ದಾರೆ. ಹೀಗೆ ಪರೋಟಾ ತಿಂದರೆ ಕ್ಯಾನ್ಸರ್ ಬರುವುದು ಖಚಿತ ಎಂದು ನೆಟಿಜನ್ ಕಮೆಂಟ್ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net