ಚಂದನ್​-ನಿವೇದಿತಾ ಜಂಟಿ ಸುದ್ದಿಗೋಷ್ಠಿ: ಒಟ್ಟಿಗೆ ಮುಂದುವರೆಯಲು ಸಾಕಷ್ಟು ಪ್ರಯತ್ನಿಸಿದೆವು ಆದರೆ…

Untitled design (87)
Published on

ಬೆಂಗಳೂರು: ನಮ್ಮಿಬ್ಬರ ನಡುವೆ ಹೊಂದಾಣಿಕೆ ಇರಲಿಲ್ಲ. ಆಗಾಗ್ಗೆ ಇಬ್ಬರ ಮಧ್ಯೆ ಜಗಳವಾಗುತ್ತಿತ್ತು. ಹಲವಾರು ಬಾರಿ ಒಟ್ಟಿಗೆ ಇರಲು ಪ್ರಯತ್ನ ಮಾಡಿದೆವು. ಆದರೆ, ಅದು ಆಗಲಿಲ್ಲ. ಈ ಕಾರಣದಿಂದ ನಾವಿಬ್ಬರು ಪರಸ್ಪರ ಒಪ್ಪಿಗೆಯ ಮೇರೆಗೆ ಕಾನೂನಿನ ಚೌಕಟ್ಟಿನಲ್ಲಿ ವಿಚ್ಛೇದನ ಪಡೆದೆವು ಎಂದಿದ್ದಾರೆ.

ಮಾಧ್ಯಮ ತನಕ ಬರುವುದು ಬೇಡ ಎಂದುಕೊಂಡಿದ್ವಿ, ಆದರೆ ಬೇಡದೆ ಇರೋ ವದಂತಿಗಳನ್ನು ಸೃಷ್ಟಿ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡ್ತಿದ್ದಾರೆ ಎಂಬ ಕಾರಣಕ್ಕೆ ಇವತ್ತು ಎಲ್ಲರಿಗೂ ಸ್ಪಷ್ಟನೆ ಕೊಡಲು ಬಂದಿದ್ದೀವಿ ಅಷ್ಟೇ ಎಂದರು.

ನಮ್ಮಿಬ್ಬರ ಜೀವನಶೈಲಿ ಬೇರೆ ಬೇರೆ ರೀತಿಯೇ ಇದೆ. ಇಬ್ಬರು ಪರಸ್ಪರ ಅರ್ಥ ಮಾಡಿಕೊಂಡು, ಹೊಂದಾಣಿಕೆ ಮಾಡಿಕೊಳ್ಳುವುದು ಬಹಳ ಕಷ್ಟವಾಗಿದೆ. ಹಲವು ಬಾರಿ ಪ್ರಯತ್ನ ಮಾಡಿದೆವು ಆದರೆ ಆಗಲಿಲ್ಲ. ಎಷ್ಟೇ ಬಾರಿ ಪ್ರಯತ್ನಿಸಿದ್ರು ಸರಿ ಬರಲಿಲ್ಲ ಅಂತ ಅನ್ನಿಸಿತು. ಅದಕ್ಕೆ ಇಬ್ಬರು ದೃಢ ನಿರ್ಧಾರದಿಂದ ವಿಚ್ಛೇದನ ಪಡೆದುಕೊಂಡಿದ್ದೀವಿ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net