More

  T20 WC 2024: ಪಾಕಿಸ್ತಾನದ ಮೈದಾನದಲ್ಲಿ ವಿರಾಟ್ ಏನಾದ್ರು​ ಆಡಿದರೆ… ಶಾಕಿಂಗ್ ಹೇಳಿಕೆ ಕೊಟ್ಟ ಅಜರ್ ಅಲಿ

  ನ್ಯೂಯಾರ್ಕ್​: ನಿನ್ನೆ (ಜೂನ್​ 09) ಇಲ್ಲಿನ ನಸ್ಸೌ ಕೌಂಟಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಭಾರತ ಮತ್ತು ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಪಂದ್ಯದಲ್ಲಿ ಪಾಕ್ ವಿರುದ್ಧ 6 ರನ್​ಗಳ ರೋಚಕ ಗೆಲುವು ಸಾಧಿಸಿದ ಟೀಂ ಇಂಡಿಯಾಗೆ ಎಲ್ಲಿಲ್ಲದ ಮೆಚ್ಚುಗೆ, ಅಭಿನಂದನೆಗಳ ಮಹಾಪೂರವೇ ಹರಿದುಬಂದಿವೆ. ಅದರಲ್ಲೂ ಭಾರತ ಕೊಟ್ಟ 119 ರನ್​ಗಳ ಸಾಧಾರಣ ಗುರಿಯನ್ನು ತಲುಪುವಲ್ಲಿ ಮುಗ್ಗರಿಸಿದ ಪಾಕಿಸ್ತಾನ ತಂಡಕ್ಕೆ ಇದೀಗ ಮತ್ತೊಮ್ಮೆ ಟೀಕೆಗಳು ವ್ಯಕ್ತವಾಗಿವೆ.

  ಇದನ್ನೂ ಓದಿ: 7 ವರ್ಷದ ಪ್ರೀತಿ, 6 ವರ್ಷದ ಯುವ ರಾಜ್​ ದಾಂಪತ್ಯದಲ್ಲಿ ಬಿರುಕು; ದೊಡ್ಮನೆ ಸೊಸೆ ಶ್ರೀದೇವಿ ಹಿನ್ನೆಲೆ ಏನು ಗೊತ್ತಾ?

  ಟಿ20 ವಿಶ್ವಕಪ್​ ಟೂರ್ನಿಯ ಮೊದಲ ಪಂದ್ಯದಲ್ಲೇ ಯುಎಸ್​ಎ ವಿರುದ್ಧ ಸೂಪರ್ ಓವರ್​ನಲ್ಲಿ ಹೀನಾಯವಾಗಿ ಸೋತ ಪಾಕಿಸ್ತಾನ ತಂಡ, ಇದೀಗ ತಮ್ಮ ಎರಡನೇ ಪಂದ್ಯದಲ್ಲಿ ಭಾರತ ವಿರುದ್ಧವೂ ಹೀನಾಯ ಸೋಲು ಅನುಭವಿಸಿದ್ದು, ಕ್ರಿಕೆಟ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಪಾಕ್​ ವಿರುದ್ಧ ಟ್ರೋಲ್, ಮೀಮ್​ ಮಾಡುವ ಮೂಲಕ ಕಾಲೆಳೆಯುತ್ತಿರುವ ಫ್ಯಾನ್ಸ್​ ಒಂದೆಡೆಯಾದರೆ, ಮತ್ತೊಂದೆಡೆ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಅಜರ್ ಅಲಿ ಕೊಟ್ಟ ಹೇಳಿಕೆ ಸದ್ಯ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

  ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ರೋಹಿತ್ ಶರ್ಮಾ ಜತೆಗೆ ಓಪನಿಂಗ್ ಬಂದ ವಿರಾಟ್ ಕೊಹ್ಲಿ, ಕೇವಲ 2 ಎಸೆತಗಳಲ್ಲಿ 4 ರನ್​ ಸಿಡಿಸಿ, ಪೆವಿಲಿಯನ್​ನತ್ತ ಮುಖಮಾಡಿದರು. ಐರ್ಲೆಂಡ್​ ಮತ್ತು ಪಾಕ್​, ಎರಡು ತಂಡಗಳ ವಿರುದ್ಧವೂ ಅಬ್ಬರಿಸದ ವಿರಾಟ್​ಗೆ ಅಭಿಮಾನಿಗಳ ಪ್ರೀತಿ ಮಾತ್ರ ಕಿಂಚಿತ್ತು ಕಡಿಮೆಯಾಗಿಲ್ಲ.

  ಇದನ್ನೂ ಓದಿ: ಬೊಜ್ಜು ಕಡಿಮೆಯಾಗಬೇಕೆಂದರೆ ಈ ಕೆಲಸ ಮಾಡಿ; ಒಂದೇ ತಿಂಗಳಲ್ಲಿ ಸೊಂಟ ತೆಳ್ಳಗಾಗುತ್ತದೆ..

  ಇದೇ ವಿಷಯವನ್ನು ಉಲ್ಲೇಖಿಸಿದ ಪಾಕಿಸ್ತಾನದ ಮಾಜಿ ಆಟಗಾರ ಅಜರ್ ಅಲಿ, “‘ರನ್​ ಮಷಿನ್’ ಏನಾದರೂ ನಮ್ಮ ಲಾಹೋರ್​, ಕರಾಚಿ, ರಾವಲ್​ಪಿಂಡಿ ಅಥವಾ ಮುಲ್ತಾನ್ ಮೈದಾನಗಳಲ್ಲಿ ಕಣಕ್ಕಿಳಿದರೆ, ಸ್ಟೇಡಿಯಂ ತುಂಬ ಹಸಿರು ಜೆರ್ಸಿಯೇ ಕಾಣಿಸುತ್ತದೆ. ಆದ್ರೆ, ಅದರ ಹಿಂದಿರುವ ಹೆಸರು ಮಾತ್ರ ವಿರಾಟ್ ಅವರದ್ದಾಗಿರುತ್ತದೆ. ನಂ.18ರ ಜತೆಗೆ ವಿರಾಟ್ ಕೊಹ್ಲಿ ಹೆಸರು ಕಂಡುಬರುತ್ತದೆ” ಎಂದಿದ್ದಾರೆ,(ಏಜೆನ್ಸೀಸ್).

  ನನ್ನ ಕರಿಯರ್​ ಇಲ್ಲಿಗೆ ಮುಗಿತು… ಪಾಕಿಸ್ತಾನ ವಿರುದ್ಧ ಗೆಲ್ಲುತ್ತಿದ್ದಂತೆ ಭಾವುಕರಾದ ಟೀಂ ಇಂಡಿಯಾದ ಸ್ಟಾರ್​ ಆಟಗಾರ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts