

Chanakya Niti: ಆಚಾರ್ಯ ಚಾಣಕ್ಯರು ಮಹಾನ್ ವಿದ್ವಾಂಸ. ಅವರು ಹೇಳಿದ ಹಾದಿಯಲ್ಲಿ ನಡೆದರೆ ಎಂದಿಗೂ ಸೋಲಾಗುವುದಿಲ್ಲ. ಚಾಣಕ್ಯರು ಯಶಸ್ಸು ಹಾಗೂ ಶ್ರೀಮಂತಿಕೆ ನಮ್ಮದಾಗಬೇಕು ಎಂದರೆ ಒಂದಿಷ್ಟು ರಹಸ್ಯಗಳನ್ನು ಪಾಲಿಸಲು ಹೇಳಿದ್ದಾರೆ. ಅಲ್ಲದೆ, ಚಾಣಕ್ಯರು ರಾಜಕೀಯ, ಸಮಾಜ, ಸಂಬಂಧಗಳು ಮತ್ತು ಜೀವನದ ಸೂಕ್ಷ್ಮ ವ್ಯತ್ಯಾಸಗಳನ್ನು ಬಹಳ ಆಳವಾಗಿ ಅರ್ಥಮಾಡಿಕೊಂಡು ವಿವರಿಸಿದ ವಿದ್ವಾಂಸರು ಕೂಡ ಆಗಿದೆ.
ಹೌದು, ಶತಮಾನಗಳ ಹಿಂದೆ ಅವರು ಹೇಳಿದ ವಿಷಯಗಳನ್ನು ಇಂದಿಗೂ ಅಷ್ಟೇ ನಿಖರ ಮತ್ತು ಪರಿಣಾಮಕಾರಿ ಎಂದು ಪರಿಗಣಿಸಲಾಗಿದೆ. ಚಾಣಕ್ಯ ನೀತಿಯಲ್ಲಿ, ಅವರು ಜೀವನವನ್ನು ಉತ್ತಮಗೊಳಿಸುವ ಮಾರ್ಗಗಳನ್ನು ಸೂಚಿಸಿದ್ದಾರೆ. ಹೀಗಾಗಿ ಕೆಲ ಅಭ್ಯಾಸಗಳಿಂದ ಮನುಷ್ಯ ದಾರಿ ತಪ್ಪುತ್ತಾನೆ. ಚಾಣಕ್ಯ ಹೇಳಿದಂತೆ ಈ ಮೂರು ಅಭ್ಯಾಸಗಳು ಮನುಷ್ಯನನ್ನು ಬಡವನ್ನಾಗಿ ಮಾಡುತ್ತದೆ. ಅಲ್ಲದೆ, ಅವರ ಹತ್ತಿರ ಹಣ ಕೂಡ ಉಳಿಯುವುದಿಲ್ಲ ಎಂದು ಹೇಳಿದ್ದಾನೆ. ಏನು ಮೂರು ಅಭ್ಯಾಸಗಳೇನು ಎಂದು ತಿಳಿಯೋಣ.
1.ಕಟು ಮಾತು
ಚಾಣಕ್ಯನ ಪ್ರಕಾರ ಒಬ್ಬ ಮನುಷ್ಯ ಯಾವಾಗಲೂ ತನ್ನ ಮಾತುಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕು. ಇತರರ ಬಗ್ಗೆ ಕಟುವಾದ ಮಾತುಗಳು ಆಡವುದರಿಂದ ಮತ್ತು ಅವಮಾಕರ ಮಾತು ಬಳಸುವುದರಿಂದ ಅವನು ಹಲವು ಸಮಸ್ಯೆ ಎದುರಿಸುತ್ತಾನೆ. ಕಟು ಮಾತುಗಳು ಸಂಬಂಧಗಳನ್ನು ಹಾಳುಮಾಡುವುದಲ್ಲದೆ, ಸ್ನೇಹಿತರನ್ನು ಶತ್ರುಗಳನ್ನಾಗಿ ಮಾಡುತ್ತದೆ. ಅಂತಹ ಭಾಷೆಯನ್ನು ಬಳಸುವ ವ್ಯಕ್ತಿಯು ಸಮಾಜದಲ್ಲಿ ಗೌರವವನ್ನು ಕಳೆದುಕೊಳ್ಳುತ್ತಾನೆ ಮತ್ತು ಅವನ ಕೆಲಸವೂ ಹಾಳಾಗುತ್ತದೆ.
2. ದುಂದು ವೆಚ್ಚ
ಚಾಣಕ್ಯ ನೀತಿ ಹೇಳುವಂತೆ, ಹಣ ವ್ಯರ್ಥ ಮಾಡುವವನು ಎಂದಿಗೂ ಹಣವನ್ನು ಉಳಿಸಿಕೊಳ್ಳುವುದಿಲ್ಲ. ಅನಗತ್ಯ ಖರ್ಚು ಮತ್ತು ಆಡಂಬರ ತೋರುವ ಪ್ರವೃತ್ತಿ ವ್ಯಕ್ತಿಯನ್ನು ಆರ್ಥಿಕ ತೊಂದರೆಗಳತ್ತ ತಳ್ಳುತ್ತದೆ. ತಮ್ಮ ಆದಾಯಕ್ಕಿಂತ ಹೆಚ್ಚು ಖರ್ಚು ಮಾಡುವವರು ಯಾವಾಗಲೂ ಸಾಲದ ಹೊರೆಯನ್ನು ಹೊಂದಿರುತ್ತಾನೆ.
3.ಸೋಮಾರಿತನ
ಸೋಮಾರಿತನವು ಮನುಷ್ಯನ ದೊಡ್ಡ ಶತ್ರು. ಕಠಿಣ ಪರಿಶ್ರಮವನ್ನು ತಪ್ಪಿಸುವ ಮತ್ತು ಪ್ರತಿಯೊಂದು ಕೆಲಸವನ್ನು ಮುಂದೂಡುವ ವ್ಯಕ್ತಿಗೆ ಹಣವು ಉಳಿಯುವುದಿಲ್ಲ ಅಥವಾ ಅವನು ಜೀವನದಲ್ಲಿ ಪ್ರಗತಿ ಸಾಧಿಸಲು ಸಾಧ್ಯವಾಗುವುದಿಲ್ಲ.ಕಠಿಣ ಪರಿಶ್ರಮ ಮತ್ತು ಸಮರ್ಪಣೆಯಿಂದ ತಮ್ಮ ಕೆಲಸವನ್ನು ಮಾಡುವವರು ಎಲ್ಲವನ್ನೂ(ಹಣ, ಗೌರವ ಮತ್ತು ಯಶಸ್ಸು) ಪಡೆಯುತ್ತಾರೆ.(ಏಜೆನ್ಸೀಸ್)