

ಬೆಂಗಳೂರು: ಉದ್ಯಮಿ ಗೋವಿಂದಬಾಬು ಪೂಜಾರಿಗೆ ಬೈಂದೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಕೋಟ್ಯಂತರ ರೂಪಾಯಿ ಪಡೆದು ವಂಚಿಸಿದ್ದಾರೆ ಎಂಬ ಆರೋಪದ ಮೇಲೆ ಬಂಧನಕ್ಕೆ ಒಳಗಾಗಿರುವ ಪ್ರಮುಖ ಆರೋಪಿ ಚೈತ್ರಾ ಕುಂದಾಪುರಳ ವರ್ತನೆ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ತಲೆನೋವಾಗಿದೆ.
ಚೈತ್ರಾ ನೀಡಿರುವ ಹೇಳಿಕೆ ಪೊಲೀಸರಿಗೆ ತಲೆನೋವು ತಂದಿದೆ. ಚೈತ್ರಾ ಸಿಸಿಬಿ ಕಚೇರಿ ಮುಂದೆಯೇ ಇಂದಿರಾ ಕ್ಯಾಂಟೀನ್ ವಿಚಾರವನ್ನು ಪ್ರಸ್ತಾಪ ಮಾಡಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸರ್ಕಾರ ಸಾಕಷ್ಟು ಮುಜುರಕ್ಕೆ ಒಳಗಾಗಿದೆ ಎಂದು ತಿಳಿದುಬಂದಿದೆ.
ಇಂದಿರಾ ಕ್ಯಾಂಟೀನ್ ವಿಚಾರ ಪ್ರಸ್ತಾಪ ಮಾಡಿರುವುದರಿಂದ ಜನರಲ್ಲಿ ಬೇರೆ ರೀತಿಯಾಗಿ ಅಭಿಪ್ರಾಯ ಸೃಷ್ಟಿಯಾಗುತ್ತದೆ ಎಂಬುದು ಸರ್ಕಾರಕ್ಕೆ ಟೆನ್ಶನ್ ಆಗಿದೆ. ಆರೋಪಿಯನ್ನು ಮಾಧ್ಯಮದ ಮುಂದೆ ಮಾತನಾಡಲು ಬಿಟ್ಟಿದಕ್ಕೆ ಅಧಿಕಾರಿಗಳಿಗೆ ಸರ್ಕಾರ ಕ್ಲಾಸ್ ತೆಗೆದುಕೊಂಡಿದೆ.
ನಿಮ್ಮಿಂದ ಓರ್ವ ಆರೋಪಿಯನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಆಗುವುದಿಲ್ಲವಾ ಎಂದು ಕಮೀಷನರ್, ಡಿಸಿಪಿ ಹಾಗೂ ಎಪಿಸಿಗೆ ಸಿಎಂ, ಡಿಸಿಎಂ ಸೇರಿದಂತೆ ಅನೇಕ ಸಚಿವರು ಕರೆ ಮಾಡಿ ತರಾಟೆಗೆ ತೆಗೆದುಕೊಂಡಿದ್ದಾರೆ. ಯಾವ ರೀತಿಯಾಗಿ ತನಿಖೆ ಮಾಡುತ್ತಿದ್ದೀರಿ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಇದೀಗ ಪೊಲೀಸರಿಗೆ ಚೈತ್ರಾ ದೊಡ್ಡ ತಲೆ ನೋವಾಗಿದ್ದಾಳೆ.
ತನಿಖೆ ಚುರುಕುಗೊಳಿಸಿರುವ ಸಿಸಿಬಿ ಪೊಲೀಸರು ಈಗಾಗಲೇ ವಿಜಯನಗರ ಜಿಲ್ಲೆಯ ಹಾಲಶ್ರೀ ಮಠವನ್ನು ತಲುಪಿದ್ದು, ಜನತೆಯಲ್ಲಿ ಸ್ವಾಮೀಜಿಯನ್ನು ಕರೆದುಕೊಂಡು ಹೋಗಲಾಗಿದೆ. ಇದರ ನಡುವೆ ಇಂದು ವಿಚಾರಣೆ ಹಾಜರಾಗುವಂತೆ ಸಿಸಿಬಿ ಪೊಲೀಸರಿಂದ ಹಲವರಿಗೆ ನೋಟಿಸ್ ನೀಡಲಾಗಿದೆ. ತಿಪ್ಪೇಸ್ವಾಮಿ, ಲಕ್ಷ್ಮಣ ಮತ್ತು ಪ್ರಣವ್ ಪ್ರಸಾಸ್ಗೆ ನೋಟಿಸ್ ಕಳುಹಿಸಲಾಗಿದೆ. ಇವರೆಲ್ಲರು ಹಾಲಶ್ರೀಗೆ ಆಪ್ತರಾಗಿದ್ದರು. ಚೈತ್ರಾ ಆಪ್ತ ಮಂಜು ಎಂಬಾತನಿಗೂ ನೋಟಿಸ್ ನೀಡಲಾಗಿದೆ. ಎಲ್ಲರಿಗೂ ಇಂದು ಬೆಳಗ್ಗೆ ಹನ್ನೊಂದು ಗಂಟೆ ಸಮಯಕ್ಕೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ನಲ್ಲಿ ತಿಳಿಸಲಾಗಿದೆ.