ಭಾರತಕ್ಕೆ ತವರಿನ ವಿಶ್ವಕಪ್​ನಲ್ಲಿ ವಿಶ್ವ ನಂ. 1 ತಂಡವಾಗಿ ಆಡುವ ಅವಕಾಶಕ್ಕಾಗಿ ಇದೆ ಸಿಂಪಲ್​ ಟಾಸ್ಕ್​!

indi web
Published on

ಬೆಂಗಳೂರು: ಈಗಾಗಲೆ ಐಸಿಸಿ ಟಿ20 ಮತ್ತು ಟೆಸ್ಟ್​ ರ್ಯಾಂಕಿಂಗ್​ನಲ್ಲಿ ಅಗ್ರಸ್ಥಾನದಲ್ಲಿರುವ ಭಾರತ ತಂಡ ಶುಕ್ರವಾರದಿಂದ ನಡೆಯಲಿರುವ ಪ್ರವಾಸಿ ಆಸ್ಟ್ರೆಲಿಯಾ ವಿರುದ್ಧದ 3 ಪಂದ್ಯಗಳ ಸರಣಿಯಲ್ಲಿ ಗೆದ್ದರೆ, ತವರಿನ ವಿಶ್ವಕಪ್​ಗೆ ಮುನ್ನ ಐಸಿಸಿ ಏಕದಿನ ರ್ಯಾಂಕಿಂಗ್​ನಲ್ಲೂ ನಂ. 1 ಪಟ್ಟಕ್ಕೇರಲಿದೆ.

ಸದ್ಯ ಪಾಕಿಸ್ತಾನ 115 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದರೆ, ಭಾರತ (115) ಕೂಡ ಇಷ್ಟೇ ಅಂಕ ಹೊಂದಿದ್ದರೂ, ದಶಾಂಶ ಲೆಕ್ಕಾಚಾರದಲ್ಲಿ 2ನೇ ಸ್ಥಾನದಲ್ಲಿದೆ. ಆಸ್ಟ್ರೆಲಿಯಾ ತಂಡ (113) ಮೂರನೇ ಸ್ಥಾನದಲ್ಲಿದೆ. ಭಾರತ ತಂಡ ಆಸೀಸ್​ ವಿರುದ್ಧ ಕನಿಷ್ಠ 2-1ರಿಂದ ಸರಣಿ ಗೆದ್ದರೂ, 116 ಅಂಕಗಳೊಂದಿಗೆ ಅಗ್ರಸ್ಥಾನ ಅಲಂಕರಿಸಲಿದೆ. ಇದರಿಂದ ತವರಿನ ವಿಶ್ವಕಪ್​ನಲ್ಲಿ ವಿಶ್ವ ನಂ. 1 ತಂಡವಾಗಿ ಕಣಕ್ಕಿಳಿಯುವ ವಿಶೇಷ ಗೌರವ ಭಾರತ ತಂಡದ್ದಾಗಲಿದೆ.

ಇನ್ನು ಆಸ್ಟ್ರೆಲಿಯಾ ಸರಣಿ 3-0ಯಿಂದ ಕ್ಲೀನ್​ಸ್ವೀಪ್​ ಸಾಧಿಸಿದರಷ್ಟೇ ವಿಶ್ವ ನಂ. 1 ಪಟ್ಟಕ್ಕೇರುವ ಅವಕಾಶ ಹೊಂದಿದೆ. ಆಸೀಸ್​ 2-1ರಿಂದಷ್ಟೇ ಸರಣಿ ಗೆದ್ದರೆ, ಪಾಕಿಸ್ತಾನ ನಂ. 1 ಪಟ್ಟವನ್ನು ರಕ್ಷಿಸಿಕೊಳ್ಳಲಿದೆ.

ಐಸಿಸಿ ರ್ಯಾಂಕಿಂಗ್​ನಲ್ಲಿ ಭಾರತದ ಪ್ರಾಬಲ್ಯ

ಟೆಸ್ಟ್​ ಟೀಮ್​: ನಂ. 1

ಟಿ20 ಟೀಮ್​: ನಂ. 1

ಏಕದಿನ ಟೀಮ್​: ನಂ. 2

ಟೆಸ್ಟ್​ ಬೌಲರ್​: ಆರ್​. ಅಶ್ವಿನ್​ ನಂ. 1

ಏಕದಿನ ಬೌಲರ್​: ಮೊ. ಸಿರಾಜ್​ ನಂ.1

ಟಿ20 ಬ್ಯಾಟರ್​: ಸೂರ್ಯಕುಮಾರ್​ ನಂ. 1

ಟೆಸ್ಟ್​ ಆಲ್ರೌಂಡರ್​: ರವೀಂದ್ರ ಜಡೇಜಾ ನಂ.1

ಏಕದಿನ ಬ್ಯಾಟರ್​: ಶುಭಮಾನ್​ ಗಿಲ್​ ನಂ. 2

ಟೆಸ್ಟ್​ ಆಲ್ರೌಂಡರ್​: ಆರ್​. ಅಶ್ವಿನ್​ ನಂ. 2

ಟಿ20 ಆಲ್ರೌಂಡರ್​: ಹಾರ್ದಿಕ್​ ಪಾಂಡ್ಯ ನಂ. 2

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net