More

    ಹೊಟ್ಟೆ ಉಬ್ಬರದ ಸಮಸ್ಯೆ ಹೆಚ್ಚಾಗಿದೆಯೇ? ಇದಕ್ಕೆ ಮುಖ್ಯ ಕಾರಣಗಳೇನು? ಈ ಆಹಾರಗಳನ್ನು ತಪ್ಪಿಸಿ…

    ಹೊಟ್ಟೆಯಲ್ಲಿ ಗ್ಯಾಸ್​ ರಚನೆ ಅಥವಾ ಹೊಟ್ಟೆ ಉಬ್ಬರ ಸಾಮಾನ್ಯ ಸಮಸ್ಯೆಯಾಗಿದ್ದರೂ, ಇದು ತೇಗು ಮತ್ತು ವಾಯು ಸಮಸ್ಯೆಗಳಿಗೆ ಕಾರಣವಾಗುವ ಸಾಧ್ಯತೆಗಳಿವೆ. ಇದರಿಂದಾಗಿ ಜೀರ್ಣಕ್ರಿಯೆಗೂ ತೊಂದರೆಯುಂಟಾಗುತ್ತದೆ. ಹೊಟ್ಟೆಯ ಉಬ್ಬರ ಸಾಮಾನ್ಯ ಎನಿಸಿದರೂ ಅದರ ಕಿರಿಕಿರಿ ಮಾತ್ರ ಕೆಲವೊಮ್ಮೆ ತಡೆಯಲಾಗದು. ಹಾಗಾಗಿ ಈ ಗ್ಯಾಸ್ ಸಮಸ್ಯೆಯಿಂದ ಮುಕ್ತಿ ಪಡೆಯುವುದು ತುಂಬಾ ಸುಲಭ ಎನ್ನುತ್ತಾರೆ ಆರೋಗ್ಯ ತಜ್ಞರು.

    ಅನೇಕ ಜನರು ದೇಹದಲ್ಲಿ ಗ್ಯಾಸ್​ ಉತ್ಪಾದಿಸುವಂತಹ ಪ್ರೋಟೀನ್ ಭರಿತ ಆಹಾರವನ್ನು ಹೆಚ್ಚು ಸೇವಿಸುತ್ತಿದ್ದಾರೆ. ಇದರಿಂದ ಹೊಟ್ಟೆಯಲ್ಲಿ ಗ್ಯಾಸ್ ಉಂಟಾಗುತ್ತದೆ. ನೀವು ಆಗಾಗ ಗ್ಯಾಸ್ ಸಮಸ್ಯೆಯಿಂದ ಬಳಲುತ್ತಿದ್ದರೆ ಈ ಕೆಳಗಿನ ಆಹಾರಗಳಿಂದ ದೂರವಿರುವುದು ತುಂಬಾ ಒಳ್ಳೆಯದು ಎನ್ನುತ್ತಾರೆ ಆರೋಗ್ಯ ತಜ್ಞರು.

    ಈ ಆಹಾರಗಳನ್ನು ತಪ್ಪಿಸಿ

    ಬೀನ್ಸ್​: ಬೀನ್ಸ್​ನಲ್ಲಿ ಪ್ರೊಟೀನ್ ಅಧಿಕವಾಗಿದೆ. ಹಾಗಾಗಿ ಇವುಗಳನ್ನು ಪ್ರತಿದಿನ ಸೇವಿಸುವುದರಿಂದ ಹೊಟ್ಟೆಯಲ್ಲಿ ಗ್ಯಾಸ್ ಉಲ್ಬಣಗೊಳ್ಳುವ ಸಾಧ್ಯತೆಗಳಿವೆ ಎನ್ನುತ್ತಾರೆ ಆರೋಗ್ಯ ತಜ್ಞರು. ಬೀನ್ಸ್ ದೊಡ್ಡ ಪ್ರಮಾಣದಲ್ಲಿ ರಾಫಿನೋಸ್ ಎಂಬ ಸಂಕೀರ್ಣ ಸಕ್ಕರೆಯನ್ನು ಹೊಂದಿರುತ್ತದೆ. ಇವು ಕಳಪೆ ಜೀರ್ಣಕ್ರಿಯೆಯನ್ನು ಉತ್ತೇಜಿಸುತ್ತವೆ. ಅಲ್ಲದೆ ಸುಲಭವಾಗಿ ಗ್ಯಾಸ್​ ಉತ್ಪಾದಿಸುತ್ತವೆ. ಹೀಗಾಗಿ ಪ್ರತಿದಿನ ಬೀನ್ಸ್ ಅನ್ನು ರಾತ್ರಿ ನೆನೆಸಿಟ್ಟು ಸಂಪೂರ್ಣವಾಗಿ ಬೇಯಿಸಿ ತಿನ್ನಬೇಕು. ಇದರಿಂದ ದೇಹಕ್ಕೆ ಹಲವಾರು ಪ್ರಯೋಜನಗಳನ್ನು ಪಡೆಯಬಹುದು. ಮುಖ್ಯವಾಗಿ ಗ್ಯಾಸ್ ಸಮಸ್ಯೆಗಳು ಸಹ ತಪ್ಪಿಸಲ್ಪಡುತ್ತವೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.

    ಇದನ್ನೂ ಓದಿ: ನಾರಿಶಕ್ತಿಗೆ ಲೋಕಮತ: ಶೇ.33 ಮಹಿಳಾ ಮೀಸಲು ಮಸೂದೆಗೆ ಲೋಕಸಭೆಯಲ್ಲಿ ಧ್ವನಿಮತದ ಅಂಗೀಕಾರ

    ಡೈರಿ ಉತ್ಪನ್ನಗಳು: ಗ್ಯಾಸ್ ಪೀಡಿತರು ಪ್ರತಿದಿನ ಡೈರಿ ಉತ್ಪನ್ನಗಳನ್ನು ಸೇವಿಸುವುದರಿಂದ ಸಮಸ್ಯೆ ಉಲ್ಬಣಗೊಳ್ಳುವ ಸಾಧ್ಯತೆಗಳಿವೆ. ಇದಲ್ಲದೆ, ಇದರಲ್ಲಿರುವ ಲ್ಯಾಕ್ಟೇಸ್ ಜೀರ್ಣಕಾರಿ ಸಮಸ್ಯೆಗಳನ್ನು ಉಂಟುಮಾಡುವ ಸಾಧ್ಯತೆಗಳನ್ನು ಹೊಂದಿದೆ. ಹಾಗಾಗಿ ಹೊಟ್ಟೆಯ ತೀವ್ರ ಸಮಸ್ಯೆಯಿಂದ ಬಳಲುತ್ತಿರುವವರು ಡೈರಿ ಉತ್ಪನ್ನಗಳಿಂದ ದೂರವಿರುವುದು ತುಂಬಾ ಒಳ್ಳೆಯದು ಎನ್ನುತ್ತಾರೆ ಆರೋಗ್ಯ ತಜ್ಞರು.

    ಗೋಧಿ, ಓಟ್ಸ್​: ಗೋಧಿ ಮತ್ತು ಓಟ್ಸ್​ನಿಂದ ತಯಾರಿಸಿದ ಆಹಾರವನ್ನು ಪ್ರತಿದಿನ ಸೇವಿಸುವುದರಿಂದ ಹೊಟ್ಟೆಯ ಗ್ಯಾಸ್ ಸಮಸ್ಯೆಗೆ ಕಾರಣವಾಗಬಹುದು. ಇವುಗಳಲ್ಲಿ ರಾಫಿನೋಸ್ ಎಂಬ ಅಂಶ ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತದೆ. ಹಾಗಾಗಿ ಇವುಗಳನ್ನು ಪ್ರತಿದಿನ ಸೇವಿಸುವುದರಿಂದ ಹೊಟ್ಟೆಯ ಗ್ಯಾಸ್ ಸಮಸ್ಯೆಗಳು ಹೆಚ್ಚಾಗುವ ಸಾಧ್ಯತೆಗಳಿವೆ.

    ತರಕಾರಿಗಳು: ಎಲೆಕೋಸು, ಹೂಕೋಸು ಮತ್ತು ಕೋಸುಗಡ್ಡೆಯಂತಹ ತರಕಾರಿಗಳನ್ನು ಅತಿಯಾಗಿ ಸೇವಿಸುವುದರಿಂದ ಜೀರ್ಣಕ್ರಿಯೆಯ ಸಮಸ್ಯೆಯೂ ಉಂಟಾಗುತ್ತದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಇದರಿಂದ ಸುಲಭವಾಗಿ ಗ್ಯಾಸ್ ಸಮಸ್ಯೆ ಬರುವ ಸಾಧ್ಯತೆಗಳಿವೆ. ಹಾಗಾಗಿ ಈ ತರಕಾರಿಗಳನ್ನು ಅತಿಯಾಗಿ ಸೇವಿಸದಿರುವುದು ಉತ್ತಮ ಎನ್ನುತ್ತಾರೆ ಆರೋಗ್ಯ ತಜ್ಞರು. (ಏಜೆನ್ಸೀಸ್​)

    ರಹಸ್ಯವಾಗಿ ಮದುವೆಯಾದ್ರಾ ನಟಿ ಸಾಯಿ ಪಲ್ಲವಿ? ವೈರಲ್​ ಫೋಟೋ ಹಿಂದಿನ ಅಸಲಿ ಸಂಗತಿ ಇಲ್ಲಿದೆ…

    ನಾರಿಶಕ್ತಿಗೆ ಲೋಕಮತ: ಶೇ.33 ಮಹಿಳಾ ಮೀಸಲು ಮಸೂದೆಗೆ ಲೋಕಸಭೆಯಲ್ಲಿ ಧ್ವನಿಮತದ ಅಂಗೀಕಾರ

    ರಾಜ್ಯೋತ್ಸವ ರಸಪ್ರಶ್ನೆ - 20

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts