

ಹೈದರಾಬಾದ್: ಹೈದರಾಬಾದ್‌ನ ಹಫೀಜ್‌ಪೇಟ್‌ನಲ್ಲಿ ಕುಖ್ಯಾತ 'ಚಡ್ಡಿ ಗ್ಯಾಂಗ್' ಖಾಸಗಿ ಶಾಲೆಯೊಂದರಿಂದ 7.85 ಲಕ್ಷ ರೂಪಾಯಿ ಹಣವನ್ನು ದೋಚಿದೆ. ಸೈಬರಾಬಾದ್ ಪೊಲೀಸ್ ಕಮಿಷನರೇಟ್‌ನ ಮಿಯಾಪುರ ಪೊಲೀಸ್ ಠಾಣೆ ವ್ಯಾಪ್ತಿಯ ವರ್ಲ್ಡ್ ಒನ್ ಶಾಲೆಯಲ್ಲಿ ಭಾನುವಾರ ರಾತ್ರಿ ಕಳ್ಳತನ ನಡೆದಿದೆ.
ಹಫೀಜ್‌ಪೇಟೆಯ ವರ್ಲ್ಡ್ ಒನ್ ಖಾಸಗಿ ಶಾಲೆಯಲ್ಲಿ ಶನಿವಾರ (ಮಾರ್ಚ್ 17) ಮಧ್ಯರಾತ್ರಿ ಕೆಲ ದುಷ್ಕರ್ಮಿಗಳು ದರೋಡೆ ನಡೆಸಿದ್ದಾರೆ. ಕಪ್ಪು ಚೆಡ್ಡಿ ಧರಿಸಿ ಮಾರಕಾಯುಧಗಳೊಂದಿಗೆ ಖಾಸಗಿ ಶಾಲೆಗೆ ನುಗ್ಗಿದ ದುಷ್ಕರ್ಮಿಗಳು ಶಾಲಾ ಕಚೇರಿಯ ಕೌಂಟರ್‌ನಲ್ಲಿದ್ದ ಸುಮಾರು 8 ಲಕ್ಷ ನಗದು ದೋಚಿದ್ದಾರೆ. ಕಳ್ಳತನದ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇಬ್ಬರು ಮುಸುಕುಧಾರಿ ಅಪರಾಧಿಗಳು ಒಳ ಉಡುಪು ಮತ್ತು ಕೈಗೆ ಗ್ಲೌಸ್, ಮುಸುಕು ಮಾಸ್ಕ್ ಧರಿಸಿ ಶಾಲೆಗೆ ನುಗ್ಗಿ ಬೆಲೆಬಾಳುವ ವಸ್ತುಗಳಿಗಾಗಿ ಹುಡುಕಾಡಿದ್ದಾರೆ. 8 ಲಕ್ಷ ರೂಪಾಯಿ ಹಣವನ್ನು ದೋಚಿದ್ದಾರೆ. ಕಳ್ಳತನದ ಸಂಪೂರ್ಣ ದೃಶ್ಯ ಸಿಸಿಟಿವಿ ಕ್ಯಾಮೆರಾಗಳಲ್ಲಿ ದಾಖಲಾಗಿದೆ.
ಭಾನುವಾರ ಶಾಲಾ ಆಡಳಿತ ಮಂಡಳಿ ದೂರು ನೀಡಿದ ನಂತರ ಪೊಲೀಸರು ತನಿಖೆ ಕೈಗೊಂಡಿದ್ದಾರೆ.ಕಳೆದ ವರ್ಷ ಆಗಸ್ಟ್‌ನಲ್ಲಿ ಮಾದಾಪುರದ ಗೇಟೆಡ್ ನಲ್ಲಿ 'ಚಡ್ಡಿ ಗ್ಯಾಂಗ್' ಪತ್ತೆಯಾಗಿತ್ತು. ಆಂಧ್ರಪ್ರದೇಶದ ತಿರುಪತಿಯ ಹೊರವಲಯದಲ್ಲೂ ಗ್ಯಾಂಗ್ ಸಕ್ರಿಯವಾಗಿರುವುದು ಕಂಡುಬಂದಿದೆ.
'ಚಡ್ಡಿ ಗ್ಯಾಂಗ್' ಸದಸ್ಯರು ಬೇರೆ ರಾಜ್ಯಗಳಿಂದ ಬಂದವರು ಎಂದು ಪೊಲೀಸರು ಹೇಳಿದ್ದಾರೆ. ಅವರು ಸಾಮಾನ್ಯವಾಗಿ ಪಟ್ಟಣಗಳು ಮತ್ತು ನಗರಗಳ ಹೊರವಲಯದಲ್ಲಿರುವ ಬೀಗ ಹಾಕಿದ ಮನೆಗಳು ಮತ್ತು ವಾಣಿಜ್ಯ ಕಟ್ಟಡಗಳೆ ಇವರ ಟಾರ್ಗೆಟ್ ಆಗಿದೆ. ಶಾಲೆಯ ಆಡಳಿತ ಮಂಡಳಿಯ ದೂರಿನ ಮೇರೆಗೆ ಮಿಯಾಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸಿಸಿ ಕ್ಯಾಮರಾದಲ್ಲಿ ದಾಖಲಾಗಿದ್ದ ದೃಶ್ಯಾವಳಿಗಳನ್ನು ಪೊಲೀಸರಿಗೆ ಸಲ್ಲಿಸಲಾಗಿದೆ. ಸಿಸಿಟಿವಿ ದೃಶ್ಯಾವಳಿ ಆಧರಿಸಿ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.