ಉದ್ಯೋಗಿಗಳ ಒತ್ತಡ ನಿವಾರಣೆಗಾಗಿ ವೈ ಬ್ರೇಕ್ (Y Break) ಯೋಗವನ್ನು ಪರಿಚಯಿಸಿದ ಕೇಂದ್ರ

y break
Published on

ದೆಹಲಿ: ಕೇಂದ್ರ ಸರ್ಕಾರವು ತನ್ನ ಉದ್ಯೋಗಿಗಳ ಒತ್ತಡವನ್ನು ನಿವಾರಿಸಲು ಹಾಗೂ ಕೆಲಸದ ಮೇಲಿನ ಏಕಾಗ್ರತೆಯನ್ನು ಹೆಚ್ಚಿಸಲು ವೈ ಬ್ರೇಕ್ ಯೋಗ ಆ್ಯಟ್​​ ಆಫೀಸ್ ಚೇರ್‌ ಎಂಬ ನೂತನ ಪ್ರೋಟೋಕಾಲ್​ನ್ನು ಪರಿಚಯಿಸಲು ಮುಂದಾಗಿದೆ.

ಈ ಕುರಿತು ಆಯುಷ್ ಸಚಿವಾಲಯವು, ಎಲ್ಲಾ ಕೇಂದ್ರ ಸರ್ಕಾರದ ಸಚಿವಾಲಯಗಳು ಮತ್ತು ಇಲಾಖೆಗಳಿಗೆ ಕೆಲಸದ ಸ್ಥಳದಲ್ಲಿ ಉದ್ಯೋಗಿಗಳಿಗೆ ಈ ಹೊಸ ಯೋಗ ಅಭ್ಯಾಸವನ್ನು ಅಳವಡಿಸಿಕೊಳ್ಳಲು ನಿರ್ದೇಶಿಸಿದೆ.

ಇದನ್ನೂ ಓದಿ: ಮದ್ಯದ ಬೆಲೆ ಹೆಚ್ಚಾದರೆ ಮದ್ಯಪ್ರಿಯರು ಬೇಸರ ಆಗ್ತಾರೆಂದು ಯಾರು ಹೇಳಿದ್ದು? ಅಬಕಾರಿ ಸಚಿವ ಪ್ರಶ್ನೆ

ಈ ಪ್ರೋಟೋಕಾಲ್ ಕೆಲವು ಸರಳ ಯೋಗ ಅಭ್ಯಾಸಗಳನ್ನು ಒಳಗೊಂಡಿದೆ, ಇದರಲ್ಲಿ 'ಆಸನಗಳು' (ಭಂಗಿಗಳು), 'ಪ್ರಾಣಾಯಾಮ' (ಉಸಿರಾಟದ ತಂತ್ರಗಳು) ಮತ್ತು 'ಧ್ಯಾನ' (ಧ್ಯಾನ) ಸೇರಿವೆ. ಇದು ವೃತ್ತಿಪರರಿಗೆ ಒತ್ತಡವನ್ನು ನಿವಾರಿಸಲು, ಉತ್ಸಾಹವನ್ನು ಕ್ರೋಢಿಕರಿಸಲು ಮತ್ತು ಗಮನವನ್ನು ಸುಧಾರಿಸುವ ಉದ್ದೇಶದಿಂದ ಇದನ್ನು ಪರಿಚಯಿಸಲಾಗಿದೆ.

ಅಧಿಕಾರಿಗಳು ತಮ್ಮ ಕಚೇರಿಯ ಕುರ್ಚಿಯಲ್ಲಿ ಕುಳಿತುಕೊಂಡು ವೈ-ಬ್ರೇಕ್ ವರ್ಕ್‌ ಪ್ಲೇನ್ ಯೋಗ' ಎಂಬ ಅಲ್ಪಾವಧಿಯ ಯೋಗವನ್ನು ಅಭ್ಯಾಸ ಮಾಡುವ ಮೂಲಕ ಲಾಭ ಪಡೆಯಬಹುದು ಎಂದು ತಿಳಿಸಲಾಗಿದೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net