ಮದ್ಯದ ಬೆಲೆ ಹೆಚ್ಚಾದರೆ ಮದ್ಯಪ್ರಿಯರು ಬೇಸರ ಆಗ್ತಾರೆಂದು ಯಾರು ಹೇಳಿದ್ದು? ಅಬಕಾರಿ ಸಚಿವ ಪ್ರಶ್ನೆ

R B Timmapura
Published on

ಬಾಗಲಕೋಟೆ: ರಾಜ್ಯದಲ್ಲಿ ಅಗ್ಗದ ಸಾರಾಯಿ ಜಾರಿಗೆ ತರುವ ಹಾಗೂ ಹೊಸ ಮದ್ಯದ ಅಂಗಡಿ ತೆರೆಯುವ ಪ್ರಸ್ತಾಪ ಸರ್ಕಾರದ ಮುಂದಿಲ್ಲ ಎಂದು ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಹೇಳಿದರು. ಇದನ್ನೂ ಓದಿ: ನಮ್ಮ ಸರ್ಕಾರ ವಿದ್ಯುತ್ ದರ ಹೆಚ್ಚಿಸಿಲ್ಲ; ಮಾಜಿ ಸಿಎಂ ಬೊಮ್ಮಾಯಿ ಸ್ಪಷ್ಟನೆ

ಪಕ್ಷದ ಕಚೇರಿಯಲ್ಲಿ ಸನ್ಮಾನದ ಬಳಿಕ ಮಾತನಾಡುತ್ತಾ, ಗ್ಯಾರಂಟಿ ಯೋಜನೆಗಳ ಹೊರೆ ತಗ್ಗಿಸಲು ಅಬಕಾರಿ ಸುಂಕ ಹೆಚ್ಚಿಸಿಲ್ಲ. ಬೆಲೆ ಏರಿಕೆ ಮಾಡುವ ಸಂದರ್ಭದಲ್ಲಿ ತಿಳಿಸುತ್ತೇವೆ. ಅಬಕಾರಿ ಇಲಾಖೆಯಿಂದ ಹೆಚ್ಚು ಆದಾಯ ಬರುವ ನಿರೀಕ್ಷೆ ಇಟ್ಟುಕೊಳ್ಳೋಣ. ಮುಂದಿನ ದಿನಗಳಲ್ಲಿ ಅಬಕಾರಿ ಇಲಾಖೆಯ ಆಡಳಿತದಲ್ಲಿ ಬದಲಾವಣೆ ತರುತ್ತೇವೆ. ರಾಜ್ಯದಲ್ಲಿ ವಿಶೇಷವಾಗಿ ಡ್ರಗ್ಸ್, ಗಾಂಜಾ ಚಟುವಟಿಕೆಗಳನ್ನು ನಿಯಂತ್ರಣ ಮಾಡಲು ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದರು.

ಜಿಎಸ್​ಟಿ ಜಾರಿಗೆ ಬಂದ ಬಳಿಕ ಆದಾಯ ಸಂಗ್ರಹಕ್ಕೆ ಎರಡು, ಮೂರು ಇಲಾಖೆ ಬಿಟ್ಟರೆ ಬೇರೆ ಇಲಾಖೆ ಇಲ್ಲ. ಹೀಗಾಗಿ ಅನಿವಾರ್ಯವಾಗಿ ನಮ್ಮ ಖಾತೆ ಬಗ್ಗೆ ಹೆಚ್ಚು ಚರ್ಚೆಯಾಗುವುದು ಸಹಜ ಎನ್ನುತ್ತಾ, ಯಾವುದೇ ಯೋಜನೆ ತಂದರೂ ಹಣಕಾಸು ಹೊಂದಿಸಲು ಅಬಕಾರಿ ಕಡೆಗೆ ನೋಡ್ತಾರೆ ಎನ್ನುವ ವಿಚಾರಕ್ಕೆ ಸ್ಪಷ್ಟನೆ ನೀಡಿದರು.

ಹಣಕಾಸಿನ ಎಲ್ಲಾ ಹೊರೆಯನ್ನು ಮದ್ಯಪ್ರಿಯರ ಮೇಲೆ ಹೊರೆಸುತ್ತೀರಾ ಎನ್ನುವ ಪ್ರಶ್ನೆಗೆ ಉತ್ತರಿಸುತ್ತಾ, 'ನೋ... ನೋ... ಹಾಗಾಗಲ್ಲ, ಮದ್ಯದ ಬೆಲೆ ಹೆಚ್ಚಿಸುವ ಬಗ್ಗೆ ಮದ್ಯ ಪ್ರಿಯರು ಬೇಸರ ಆಗ್ತಾರೆ ಅಂತ ನನಗಂತೂ ಯಾರೂ ಬಂದು ಹೇಳಿಲ್ಲ. ನಿಮಗೆ ಯಾರಾದ್ರೂ ಹೇಳಿದ್ರೆ ಆ ಬಗ್ಗೆ ನಾನು ಮಾತಾಡ್ತೇನೆ' ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net