ಲಿಂಕ್​ ಕೆನಾಲ್​ ಹೋರಾಟ ಸ್ಥಳಕ್ಕೆ ಸೋಮಣ್ಣ

somanna_Linkcanal
Published on

ತುಮಕೂರು: ಹೇಮಾವತಿ ಎಕ್ಸ್​ಪ್ರೆಸ್​ ಲಿಂಕ್​ ಕೆನಾಲ್​ ಹೋರಾಟ ಸ್ಥಗಿತಗೊಳಿಸುವಂತೆ ಸಿಎಂಗೆ ಪತ್ರ ಬರೆದು ಹೋರಾಟಕ್ಕೆ ಪರೋಕ್ಷ ಬೆಂಬಲ ನೀಡಿದ್ದ ತುಮಕೂರು ಲೋಕಸಭಾ ಸದಸ್ಯರು ಆದ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಜೂ.11 ರಂದು ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ಭೇಟಿ ನೀಡುವ ಮೂಲಕ ಹೋರಾಟಕ್ಕೆ ಮತ್ತಷ್ಟು ಬಲ ತುಂಬಲಿದ್ದಾರೆ.

ಅಂದು ಬೆಳಗ್ಗೆ 10.30ಕ್ಕೆ ಸುಂಕಾಪುರ ಗ್ರಾಮದ ಬಳಿ ಕೈಗೆತ್ತಿಕೊಂಡಿರುವ ಲಿಂಕ್​ ಯೋಜನೆ ಸ್ಥಳಕ್ಕೆ ಭೇಟಿ ನೀಡಲಿದ್ದು ಸ್ಥಳೀಯರ ಅಹವಾಲು ಆಲಿಸಲಿದ್ದಾರೆ. ಜಿಲ್ಲೆಯ ರೈತರಿಗೆ ಅನ್ಯಾಯವಾಗಲಿರುವ ಯೋಜನೆ ಕೈಬಿಡುವಂತೆ ಸಿಎಂಗೆ ಸೋಮಣ್ಣ ಪತ್ರ ಬರೆದಿದ್ದಾರೆ ಅಲ್ಲದೆ, ಹೋರಾಟದಲ್ಲಿ ಭಾಗಿಯಾಗಿದ್ದ ಮಠಾಧೀಶರ ಮೇಲಿನ ಎಫ್ ಐಆರ್​ ರದ್ದುಗೊಳಿಸುವಂತೆ ಸಹ ಪತ್ರ ಬರೆದು ಒತ್ತಾಯಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net