

ವಿಜಯವಾಣಿ ಸುದ್ದಿಜಾಲ ಕಲಬುರಗಿ
ಕೇಂದ್ರದ ನವೀಕರಿಸಬಹುದಾದ ಇಂಧನ ಮೂಲ ಹಾಗೂ ರಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವರಾದ ಭಗವಂತ ಖೂಬಾ ಅವರು, ಚಿಂಚೋಳಿ ತಾಲೂಕಿನ ಪಂಗರಗಾ ಗ್ರಾಮದ ಶ್ರೀ ಪರ್ವತಲಿಂಗ ಪರಮೇಶ್ವರ ಮಹಾರಾಜರಿಗೆ ಭೇಟಿ ಮಾಡಿ, ೯ ವರ್ಷಗಳಲ್ಲಿ ಬೀದರ ಲೋಕಸಭಾ ಕ್ಷೇತ್ರದಲ್ಲಿ ಕೈಗೊಂಡ ಅಭಿವೃದ್ದಿ ಕಾರ್ಯಗಳ ಕಿರು ಹೊತ್ತಿಗೆಯನ್ನು ನೀಡಿ ಆಶೀರ್ವಾದ . ಪಡೆದುಕೊಂಡರು.
ನಂತರ ರೇವಗ್ಗಿ ಗ್ರಾಮದ ಶ್ರೀ ರೆವಣಸಿದ್ದೇಶ್ವರ ದೇವಸ್ಥಾನದಲ್ಲಿ ದೇವರ ದರುಶನ ಪಡೆದುಕೊಂಡು, ಪಲ್ಲಕ್ಕಿ ಉತ್ಸವದಲ್ಲಿ ಪಾಲ್ಗೊಂಡರು.ಬಳಿಕ ಆಳಂದ ಪಟ್ಟಣದಲ್ಲಿ ಮಾಜಿ ಶಾಸಕರಾದ ಸುಭಾಷ ಗುತ್ತೆದಾರರವರನ್ನು ಭೇಟಿ ಮಾಡಿ, ಮಾಜಿ ಶಾಸಕರ ಮನೆಯಲ್ಲಿದ್ದ ಸಹೋದರಿಯಿಂದ ರಾಖಿಯನ್ನು ಕಟ್ಟಿಸಿಕೊಂಡು ಸಹೋದರಿಯವರ ಆಶೀರ್ವಾದ ಪಡೆದುಕೊಂಡು, ಶ್ರೀ ಸುಭಾಷ ಗುತ್ತೆದಾರರವರಿಗೆ ಹಾಗೂ ಮುಖಂಡರಿಗೆ ೯ ವರ್ಷಗಳ ಸಾಧನೆಯ ಪುಸ್ತಕ ನೀಡಿ, ಅಭಿವೃದ್ದಿ ಕಾರ್ಯಗಳ ಕುರಿತು ಚರ್ಚಿಸಿದರು.
ನಂತರ ಅಳಂದ ತಾಲೂಕಿನ ಬಸವನಸಂಗೋಳಗಿ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿರುವ ಶ್ರೀ ಬಸವೇಶ್ವರ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು, ದೇವರ ದರುಶನ ಪಡೆದುಕೊಂಡು, ಭಕ್ತರನ್ನು ಉದ್ದೇಶಿಸಿ ಮಾತನಾಡಿ, ಸ್ವಾತಂತ್ರö್ಯ ಬಂದ ಮೇಲೆ ಬಸವನ ಸಂಗೋಳಗಿ ಗ್ರಾಮಕ್ಕೆ ಬಂದಿರುವ ಮೊದಲ ಸಂಸದ ನಾನಾಗಿದ್ದೇನೆ ಎಂದರು..