

ದೆಹಲಿ: ದರ ಏರಿಕೆಯಿಂದ ತತ್ತರಿಸಿದ್ದ ಜನತೆಗೆ ಕೇಂದ್ರವು ಶುಭ ಸುದ್ದಿಯೊಂದನ್ನು ನೀಡಿದೆ. ಅಡುಗೆ ಮನೆಯಲ್ಲಿ ಕಂಪನ ಉಂಟು ಮಾಡಿದ್ದ ಅಡುಗೆ ಎಣ್ಣೆ ದರವು ಶೀಘ್ರವೇ ಇಳಿಕೆಯಾಗಲಿದೆ.
ಖಾದ್ಯ ತೈಲಗಳ ಚಿಲ್ಲರೆ ಬೆಲೆ(ಎಂಆರ್ಪಿ) ಇಳಿಕೆ ಕುರಿತು ಚರ್ಚಿಸಲು ಕರೆಯಲಾದ ಎರಡನೇ ಸಭೆಯಲ್ಲಿ ಕೇಂದ್ರವು, ಸಾಲ್ವೆಂಟ್ ಎಕ್ಸ್ಟ್ರಾಕ್ಷನ್ ಅಸೋಸಿಯೇಷನ್ ಆಫ್ ಇಂಡಿಯಾ ಮತ್ತು ಭಾರತೀಯ ತರಕಾರಿ ತೈಲ ಉತ್ಪಾದಕರ ಸಂಘದ ಉದ್ಯಮದ ಪ್ರತಿನಿಧಿಗಳ ಸಭೆಯಲ್ಲಿ ನಿರ್ದೇಶನ ನೀಡಿದೆ.
ಜಾಗತಿಕ ಮಾರುಕಟ್ಟೆಗನುಗುಣವಾಗಿ ಅಡುಗೆ ಎಣ್ಣೆಯ ಎಂಆರ್ಪಿ ದರವನ್ನು ಪ್ರತಿ ಲೀಟರ್ಗೆ 8 ರಿಂದ 12 ರೂ. ಕಡಿಮೆಗೊಳಿಸುವಂತೆ ಕೇಂದ್ರ ಆಹಾರ ಸಚಿವಾಲಯವು ಶುಕ್ರವಾರ ಉದ್ಯಮಗಳಿಗೆ ಸೂಚಿಸಿದೆ.
ಕಳೆದ ಹಲವು ತಿಂಗಳಿನಿಂದ ವಿವಿಧ ಖಾದ್ಯ ತೈಲಗಳ ಬೆಲೆಯು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕುಸಿದಿದ್ದರೂ ಸಹಿತ ದೇಶೀಯ ಮಾರುಕಟ್ಟೆಯಲ್ಲಿನ ಬೆಲೆಗಳು ಕಡಿಮೆಯಾಗುತ್ತಿಲ್ಲ. ಹೀಗಾಗಿ ಅಡುಗೆ ಎಣ್ಣೆ ಬೆಲೆಯನ್ನು ಕಡಿತ ಮಾಡುವಂತೆ ಸೂಚಿಸಿಲಾಗಿದೆ.(ಏಜೆನ್ಸೀಸ್)