

ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಹಾಗೂ ಸಹಚರರು ಪರಪ್ಪನ ಅಗ್ರಹಾರ ಸೇರಿದ್ದು, ಆರೋಪಿಗಳು ಜೈಲಿನಲ್ಲಿ ದಿನ ದೂಡುತ್ತಿದ್ದಾರೆ. ಇತ್ತ ಪ್ರಕರಣದ ತನಿಖೆಯನ್ನು ಪೊಲೀಸರು ಮುಂದುವರೆಸಿದ್ದು, ನಿಜಜೀವನದಲ್ಲಿ ಮಾದರಿಯಾಗಬೇಕಿದ್ದ ಸ್ಟಾರ್ನಟನೊಬ್ಬನ ಈ ಕೃತ್ಯ ಪರ-ವಿರೋಧದ ಚರ್ಚೆಗೆ ಆಸ್ಪದ ಮಾಡಿಕೊಟ್ಟಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನಟ-ನಟಿಯರು, ರಾಜಕಾರಣಿಗಳು ಸೇರಿದಂತೆ ವಿವಿಧ ಕ್ಷೇತ್ರದ ಗಣ್ಯರು ಪ್ರತಿಕ್ರಿಯಿಸುತ್ತಿದ್ದು, ಇದೀಗ ಖ್ಯಾತ ಕಾಳಿಕಾಮಾತೆ ಉಪಾಸಕಿಯೊಬ್ಬರು ನೀಡಿರುವ ಹೇಳಿಕೆ ಎಲ್ಲರ ಗಮನ ಸೆಳೆಯುತ್ತಿದೆ. ದರ್ಶನ್ ಜೈಲುಪಾಲಾಗಲು ಇದೊಂದೆ ಕಾರಣ ಎಂದು ಹೇಳಿದ್ದಾರೆ.
ದರ್ಶನ್ ಜೈಲು ಸೇರಿರುವ ಮಾತನಾಡಿರುವ ಖ್ಯಾತ ಕಾಳಿಕಾಮಾತೆ ಉಪಾಸಕಿ ಚಂದಾ ಪಾಂಡೆ, 2018ರಲ್ಲಿ ದರ್ಶನ್ನ ಸ್ನೇಹಿತರೊಬ್ಬರು ನನ್ನ ಬಳಿ ಬಂದು ಆತ ದಸರಾ ಕಾರ್ ರೇಸಿನಲ್ಲಿ ಭಾಗವಹಿಸುತ್ತಿರುವುದಾಗಿ ಹೇಳಿದರು. ಆಗ ನಾನು ಬೇಡ ಕಂಟಕ ಇದೆ ಹೇಗಾದರೂ ಮಾಡಿ ತಪ್ಪಿಸು ಎಂದು ಹೇಳಿದೆ. ಇದಾದ ಸ್ವಲ್ಪ ದಿನಗಳ ಬಳಿಕ ಅಪಘಾತವಾಗಿ ಆಸ್ಪತ್ರೆಗೆ ದಾಖಲಾದ್ರು. ಆ ಬಳಿಕ ಖುದ್ದು ದರ್ಶನ್ ಅವರ ಕರೆ ಮಾಡಿ ನನ್ನನ್ನು ಭೇಟಿಯಾಗುವುದಾಗಿ ಹೇಳಿದರು. ಆ ಬಳಿಕ ಬಂದು ಆಶೀರ್ವಾದ ಪಡೆದ ದರ್ಶನ್ಗೆ ಕೆಲವು ಸಲಹೆಗಳನ್ನು ಆಗಲೇ ನೀಡಿದ್ದೆ. ಕೆಲವು ದೊಡ್ಡ ಗಂಡಾಂತರ ಮುಂದಿದೆ ಎಂದು ಹೇಳಿದ್ದೆ.
ದರ್ಶನ್ ನನ್ನ ಭೇಟಿ ಮಾಡಿದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದವು. ಆ ಫೋಟೋವನ್ನು ಇಟ್ಟುಕೊಂಡು ನಾನು ಪ್ರಚಾರ ಪಡೆಯುತ್ತಿದ್ದೇನೆ ಎಂದು ದರ್ಶನ್ಗೆ ಅನಿಸಿತೋ ಏನೋ ಗೊತ್ತಿಲ್ಲಾ. ಆ ಬಳಿಕ ಅವರು ನನ್ನ ಭೇಟಿಯಾಗಿಲ್ಲ. ದರ್ಶನ್ಗೆ ಎರಡನೇ ಬಾರಿ ಕೈಗೆ ಪೆಟ್ಟಾಯ್ತೋ ಆಗ ನನಗೆ ದರ್ಶನ್ಗಿರುವ ಗಂಡಾಂತರ ನೆನಪಿಗೆ ಬಂತು. ಆದರೆ ನನ್ನ ಸಂಪರ್ಕದಲ್ಲಿ ದರ್ಶನ್ ಇಲ್ಲದ ಕಾರಣ ನಾನು ಅವರಿಗೆ ಏನನ್ನೂ ಹೇಳಲು ಹೋಗಲಿಲ್ಲ.
ನಾನು ಆ ಸಮಯದಲ್ಲಿ ದರ್ಶನ್ಗೆ ಆಡಿದ ಮಾತುಗಳನ್ನು ಅವರು ತಳ್ಳಿಹಾಕಿದಂತೆ ಕಾಣಿಸಿತು. ಮೊದಲ ಭಾರಿ ದರ್ಶನ್ಗೆ ಕೈ ಮುರಿದಾಗ ಶನಿ ಭುಕ್ತಿ ನಡೆಯುತ್ತಿತ್ತು, ಏಳು ವರ್ಷಗಳ ಒಳಗೆ ಮತ್ತೆ ಕೈ ಮುರಿದಿದೆ ಹಾಗಾಗಿ ಮತ್ತೆ ಶನಿಯ ಸಮಸ್ಯೆಯೇ ಅವರನ್ನು ಕಾಡಿದೆ. ಮೂಳೆ ಮುರಿಯುವುದು ಶನಿಯ ಪ್ರಭಾವದ ಮುನ್ಸೂಚನೆ. ಇದರ ಜೊತೆಗೆ ಅವರು ತಲೆಗೆ ವಿಗ್ ಹಾಕಿಸಿದರು. ಇದರಿಂದಾಗಿ ಅವರ ಗ್ರಹಗತಿಯಲ್ಲಿ ಬದಲಾವಣೆ ಆಗಿದೆ. ಏಕೆಂದರೆ ಕೂದಲನ್ನು ಶನಿಯೊಟ್ಟಿಗೆ ಹೋಲಿಸುತ್ತೀವಿ. ಹೀಗಿರುವಾಗ ಅವರು ಕೂದಲು ಶೈಲಿ ಬದಲಾಯಿಸಿಕೊಂಡಿದ್ದು ಸಹ ಗಂಡಾಂತರದ ಮುನ್ಸೂಚನೆ.
ಅವರು ಕೂದಲು ಕಸಿ ಮಾಡಿಸಿರಲಿಲ್ಲವೆಂದರೆ ಈ ಪ್ರಕರಣ ಆಗುತ್ತಿರಲಿಲ್ಲ. ಮುಂದಿನ ದಿನಗಳಲ್ಲಿ ಅವರಿಗೆ ಇನ್ನೂ ಸಾಕಷ್ಟು ಗಂಡಾಂತರ ಬರೋ ಸಾಧ್ಯತೆ ಇದೆ.ವಿಗ್ ಅಥವಾ ಕೂದಲಿಗೂ ಶನಿಗೂ ಸಂಬಂಧ ಇದೆ. ವಿಗ್ ಧರಿಸೋದು ತಪ್ಪು ಅನ್ನೋಲ್ಲ, ಅವರು ಆರ್ಟಿಸ್ಟ್, ಲೈಟ್ ಬೆಳಕಿನಿಂದ ಕೂದಲು ಹೆಚ್ಚಾಗಿ ಉದುರುತ್ತೆ. ಆದರೆ ಅವರ ಜನ್ಮತಃ ಬಂದಿರುವ ಕೇಶವಿನ್ಯಾಸ ಮಾಡಿಸಿಕೊಂಡರೆ ಉತ್ತಮ' ಎಂದು ಖ್ಯಾತ ಕಾಳಿಕಾಮಾತೆ ಉಪಾಸಕಿ ಚಂದಾ ಪಾಂಡೆ ಹೇಳಿದ್ದಾರೆ.