ನವದೆಹಲಿ: ಯುಎಸ್ಎ-ವೆಸ್ಟ್ ಇಂಡೀಸ್ ಆತಿಥ್ಯದಲ್ಲಿ ನಡೆದ 09ನೇ ಆವೃತ್ತಿಯ ಟಿ20 ವಿಶ್ವಕಪ್ನಲ್ಲಿ ಗೆಲ್ಲುವ ವಿಶ್ವಾಸದೊಂದಿಗೆ ಕಣಕ್ಕಿಳಿದ ಪಾಕಿಸ್ತಾನ ಕ್ರಿಕೆಟ್ ತಂಡವು ಸೂಪರ್ 08 ಹಂತವನ್ನು ಪ್ರವೇಶಿದೆ ಹೊರಬೀಳುವ ಮೂಲಕ ತೀವ್ರ ಟೀಕೆಗೆ ಗುರಿಯಾಗಿತ್ತು. ಇಷ್ಟಾದರೂ ಸುಮ್ಮನಾಗದ ಪಾಕಿಸ್ತಾನದ ಕ್ರಿಕೆಟ್ ತಂಡದ ಮಾಜಿ ಆಟಗಾರರು ಹಾಗೂ ಕೋಚ್ಗಳು ಭಾರತ ಮತ್ತು ತಂಡದ ಆಟಗಾರರ ವಿರುದ್ಧ ಹೇಳಿಕೆಗಳನ್ನು ನೀಡುತ್ತ ಕ್ರೀಡಾಭಿಮಾನಿಗಳ ಆಕ್ರೋಶಕ್ಕೆ ಗುರಿಯಾಗುತ್ತಿದ್ದಾರೆ.
ಇದೀಗ ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ಕೋಚ್ ಟೀಮ್ ಇಂಡಿಯಾ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಕುರಿತು ನೀಡಿರುವ ಹೇಳಿಕೆ ಎಲ್ಲರ ಗಮನ ಸೆಳೆಯುತ್ತಿದೆ. ಭಾರತದ ದೇಶೀಯ ಕ್ರಿಕೆಟ್ ತಂಡಗಳಾದ ಕೇರಳ ಹಾಗೂ ಬರೋಡಾಗೆ ತರಬೇತಿ ನೀಡಿರುವ ಡೇವ್ ವಾಟ್ಮೋರ್ ಹಾರ್ದಿಕ್ ಕುರಿತು ಮಾತನಾಡಿದ್ದು, ಈ ಸುದ್ದಿ ಸಖತ್ ಸದ್ದು ಮಾಡುತ್ತಿದೆ.
ಇದನ್ನೂ ಓದಿ: ಚಾಂಪಿಯನ್ಸ್ ಟ್ರೋಫಿ ಅಡಲು ಭಾರತ ಪಾಕ್ಗೆ ಹೋಗ್ಬೇಕಾ; ಮಾಜಿ ಕ್ರಿಕೆಟಿಗ ಕೊಟ್ಟ ಉತ್ತರ ವೈರಲ್
ಖಾಸಗಿ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಈ ಕುರಿತು ಮಾತನಾಡಿದ ವಾಟ್ಮೋರ್, ನನ್ನ ಪ್ರಕಾರ ರಾಷ್ಟ್ರೀಯ ಕ್ರಿಕೆಟ್ ತಂಡದ ಆರೋಗ್ಯವು ದೇಶೀಯ ವ್ಯವಸ್ಥೆಯ ಪ್ರತಿಬಿಂಬವಾಗಿದೆ. ನಾನು ನೋಡಿದಂತೆ ಭಾರತದಲ್ಲಿ ನಾಲ್ಕು ಗುಂಪುಗಳಾಗಿ ಕ್ರಿಕೆಟ್ ಆಡುವ ಸಾಕಷ್ಟು ತಂಡಗಳಿವೆ. ನಾನು ಹಲವಾರು ವರ್ಷಗಳ ಕಾಲ ಭಾರತದಲ್ಲಿ ಕೆಲಸ ಮಾಡಿದ ಅನುಭವವನ್ನು ಹೊಂದಿದ್ದೇನೆ. ಮೂರು ಮಾದರಿಯ ಕ್ರಿಕೆಟ್ನಲ್ಲಿ ಭಾಗವಹಿಸುವ ತಂಡಗಳು ಉತ್ತಮವಾಗಿದ್ದು, ಐಪಿಎಲ್ನಮತಹ ಟೂರ್ನಿಗಳಿಂದ ಉದಯೋನ್ಮುಖ ಆಟಗಾರರಿಗೆ ಅವಕಾಶ ಸಿಗುತ್ತಿರುವುದು ಖುಷಿಯ ವಿಚಾರವಾಗಿದೆ.
ಟೀಮ್ ಇಂಡಿಯಾದಲ್ಲಿ ವೈಟ್ಬಾಲ್ ಕ್ರಿಕೆಟ್ ಆಡದೆ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆದಿರುವವರಿದ್ದಾರೆ. ಈ ಹಿಂದೆ ನಾನು ಬರೋಡಾ ತಂಡದ ಕೋಚ್ ಆಗಿ ಕೆಲಸ ಮಾಡುತ್ತಿರುವಾಗ ಹಾರ್ದಿಕ್ ಪಾಂಡ್ಯ ಎಂದಿಗೂ ಬರೋಡಾ ಪರ ವೈಟ್ಬಾಲ್ ಕ್ರಿಕೆಟ್ ಆಡಿದ್ದನ್ನು ನಾನು ನೋಡಿಲ್ಲ. ಇದರ ಹೊರತಾಗಿಯೂ ಆತನನ್ನು ಬರೋಡಾದ ಆಲ್ರೌಂಡರ್ ಎಂದು ಜನರು ಕರೆಯುವುದನ್ನು ನೋಡಿದರೆ ನನಗೆ ಮಜಾ ಕೊಡುತ್ತದೆ. ಇತ್ತೀಚಿನ ವರ್ಷಗಳಲ್ಲಿ ರಾಷ್ಟ್ರೀಯ ತಂಡದ ಪಟ ಆಡುವ ಆಟಗಾರರು ದೇಶೀಯ ಟೂರ್ನಿಗಳಲ್ಲಿ ಆಡಬೇಕೆಂದು ಬಿಸಿಸಿಐ ಹೊರಡಿಸುವ ಸೂಚನೆ ಒಳ್ಳೆಯ ನಿರ್ಧಾರವಾಗಿದ್ದು, ಇದನ್ನು ನಾನು ಸ್ವಾಗತಿಸುತ್ತೇನೆ ಎಂದು ಡೇವ್ ವಾಟ್ಮೋರ್ ಹೇಳಿದ್ದಾರೆ.