ಸಂತ ಲಾರೆನ್ಸ್ ದೇವಾಲಯದಲ್ಲಿ ಸಂಭ್ರಮ

ಸಂತ ಲಾರೆನ್ಸ್ ದೇವಾಲಯದಲ್ಲಿ ಸಂಭ್ರಮ
Published on

ಸೋಮವಾರಪೇಟೆ: ಅಬ್ಬೂರುಕಟ್ಟೆ ಸಂತ ಲಾರೆನ್ಸ್ ದೇವಾಲಯದಲ್ಲಿ ಮೇರಿ ಮಾತೆಯ ಹುಟ್ಟುಹಬ್ಬವನ್ನು ಸಡಗರ ಸಂಭ್ರಮದಿಂದ ಭಾನುವಾರ ಆಚರಿಸಲಾಯಿತು.

ಗುರುಗಳಾದ ಜಾನ್ ಡಿಕ್ಹುನ್ನ ದಿವ್ಯ ಬಲಿ ಪೂಜೆ ಅರ್ಪಿಸಿ ಆಶೀರ್ವಚನ ನೀಡಿದರು. ಹೊಸ ಬೆಳೆ ಭತ್ತವನ್ನು ಮಂತ್ರಿಸಿ ಭಕ್ತರಿಗೆ ವಿತರಿಸಲಾಯಿತು. ಮಕ್ಕಳಿಗೆ ಕಬ್ಬು ನೀಡಲಾಯಿತು. ಭಕ್ತರು ಕನ್ಯಾ ಮರಿಯಮ್ಮ ಮೂರ್ತಿಗೆ ಪುಷ್ಪಾರ್ಚನೆ ಮಾಡಿ ನಮಿಸಿದರು. ಅನ್ನದಾನ ಏರ್ಪಡಿಸಲಾಗಿತ್ತು. ಪಾಲನ ಸಮಿತಿಯ ಸದಸ್ಯ ಧರ್ಮಗುರು ್ರಾನ್ಸಿಸ್ ಲೋಬೊ, ರಾಯನ್ ೆರ್ನಾಂಡಿಸ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net