ಸಿ.ಡಿ., ಲಂಚ, ಬ್ಲಾಕ್​ಮೇಲ್​ ಕುರಿತು ನ್ಯಾಯಾಂಗ ತನಿಖೆ ಆಗಲಿ...

BSY
Published on

ಬೆಂಗಳೂರು: ಬಿಎಸ್​ವೈ ನೇತೃತ್ವದ ರಾಜ್ಯ ಸಚಿವ ಸಂಪುಟ ವಿಸ್ತರಣೆ ನಿನ್ನೆಯಷ್ಟೆ ಆಗಿದೆ. ಈ ವೇಳೆ ಭಾರಿ ಸದ್ದು ಮಾಡಿದ್ದ ಸಿ.ಡಿ.- ಬ್ಲಾಕ್​ಮೇಲ್​ ವಿಚಾರ ವಿಪಕ್ಷಕ್ಕೆ ಟೀಕಾಸ್ತ್ರವಾಗಿದ್ದು, ಬಿಜೆಪಿಗೆ ಹಿರಿಸುಮುರಿಸು ತಂದೊಡ್ಡಿದೆ.

ಸಿಡಿ ತೋರಿಸಿ ಬ್ಲಾಕ್​ಮೇಲ್​ ಮಾಡಿದವರು ಮತ್ತು ಲಂಚ ನೀಡಿದವರಿಗೆ ಯಡಿಯೂರಪ್ಪರ ಸಂಪುಟದಲ್ಲಿ ಸ್ಥಾನ ನೀಡಲಾಗಿದೆ ಎಂದು ಬಿಜೆಪಿಯ ಕೆಲ ಮುಖಂಡರು ಆರೋಪ ಮಾಡಿದ್ದಾರೆ. ಈ ಆರೋಪಗಳ ಕುರಿತು ಹೈಕೋರ್ಟ್​​ ಹಾಲಿ ನ್ಯಾಯಮೂರ್ತಿ ನೇತೃತ್ವದಲ್ಲಿ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಆಗ್ರಹಿಸಿದ್ದಾರೆ. ಇದನ್ನೂ ಓದಿರಿ ಪರಸ್ತ್ರೀ ಜತೆ ಮೂರು ಮಕ್ಕಳ ತಂದೆಗೆ ಲವ್ವಿಡವ್ವಿ! ರೆಡ್​ಹ್ಯಾಂಡ್​ ಆಗಿ ಸಿಕ್ಕಿಬಿದ್ದವರ ಕಥೆ ಏನಾಯ್ತು?

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿಕೆಶಿ, ಭ್ರಷ್ಟಾಚಾರ ಮಾಡಿ ಸರ್ಕಾರ ರಚನೆ ಆಗಿದೆ. ಸರ್ಕಾರದಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಅಂತ ಹೇಳ್ತಿದ್ದಾರೆ. ಅವರದ್ದೇ ಪಕ್ಷದವರು ಸಿ.ಡಿ. ಇದೆ ಎನ್ನುತ್ತಿದ್ದಾರೆ. ಯಾವ ಸಿಡಿಯನ್ನು ತೋರಿಸಿ ಸಿಎಂ ಯಡಿಯೂರಪ್ಪ ಅವರನ್ನು ಬೆದರಿಸಲಾಗಿದೆ? ಸಿಡಿಯಲ್ಲಿ ಅಂತಹ ವಿಚಾರ ಏನಿದೆ? ಸಚಿವರಾದವರು ಯಾರಿಗೆ? ಎಷ್ಟು ಲಂಚ ಕೊಟ್ಟಿದ್ದಾರೆ? ಎಂಬುದರ ಕುರಿತು ತನಿಖೆಯಾಗಬೇಕಿದೆ ಎಂದರು.

ಈ ಆರೋಪದ ಬಗ್ಗೆ ಎಸಿಬಿ ಏಕೆ ಸುಮೊಟೋ ಕೇಸ್ ದಾಖಲು ಮಾಡಿಲ್ಲ. ಇಡಿ ಮತ್ತು ಐಟಿ ಕೂಡ ಸುಮ್ಮನಿದೆ. ನಾನು ಕೂಡ ಬಿಜೆಪಿಯನ್ನು ಬ್ಲಾಕ್​ಮೇಲರ್ಸ್ ಪಕ್ಷ ಎಂದು ಕರೆಯುತ್ತೇನೆ. ಈ ವಿಚಾರ ಇಟ್ಕೊಂಡು ರಾಜ್ಯದ ಜನರ ಮುಂದೆ ಹೋಗಬೇಕಿದೆ ಎಂದರು.

ಸುದ್ದಿಗೋಷ್ಠಿ ಆರಂಭದಲ್ಲೇ ನಾಡಿನ ಜನತೆಗೆ ಮಕರ ಸಂಕ್ರಾಂತಿ ಹಬ್ಬದ ಶುಭಾಶಯ ತಿಳಿಸಿದ ಡಿಕೆಶಿ, ನಾಡಿನ ಜನರಿಗೆ ಹೋದ ವರ್ಷ ಬಂದ ಸಂಕಟ ಈಗ ಬರುವುದು ಬೇಡ. ಒಳ್ಳೆಯ ಮಳೆ, ಒಳ್ಳೆಯ ಬೆಳೆ ಬರಲಿ ಅಂತ ದೇವರಲ್ಲಿ ಪ್ರಾರ್ಥನೆ ಮಾಡ್ತಿದ್ದೇನೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net