ವಿವೇಕ್ ಒಬೆರಾಯ್ ಪತ್ನಿಗೆ ಡ್ರಗ್ಸ್ ಸಂಕಷ್ಟ; ಸಿಸಿಬಿ ನೋಟಿಸ್​ ನೀಡಿದ್ದರೂ ಪ್ರಿಯಾಂಕಾ ಮೊಂಡುತನ

Vivek Oberoi
Published on

ಬೆಂಗಳೂರು : ದೇಶದ ಶ್ರೀಮಂತ ಕುಟುಂಬದ ಕುಡಿ ಮತ್ತು ಬಾಲಿವುಡ್ ನಟ ವಿವೇಕ್ ಒಬೆರಾಯ್ ಪತ್ನಿ ಪ್ರಿಯಾಂಕ ಆಳ್ವಗೂ ಡ್ರಗ್ಸ್ ಸಂಕಷ್ಟ ಎದುರಾಗಿದೆ. ಸಹೋದರ ಆದಿತ್ಯ ಆಳ್ವ ತಲೆಮರೆಸಿಕೊಳ್ಳಲು ಸಹಾಯ ಮಾಡಿದ ಆರೋಪಕ್ಕೂ ಪ್ರಿಯಾಂಕ ಆಳ್ವ ಗುರಿಯಾಗಿದ್ದಾರೆ.

ಸ್ಯಾಂಡಲ್‌ವುಡ್‌ಗೆ ಡ್ರಗ್ಸ್ ಲಿಂಕ್ ಪ್ರಕರಣ ಸಂಬಂಧ ಗುರುವಾರ ಬೆಳಗ್ಗೆ ಮುಂಬೈನ ಜುಹು ಪ್ರದೇಶದಲ್ಲಿ ಇರುವ ವಿವೇಕ್ ಒಬೆರಾಯ್ ಮನೆ ಮೇಲೆ ಸಿಸಿಬಿ ದಾಳಿ ನಡೆಸಿತ್ತು. ಈ ವೇಳೆ ವಿವೇಕ್ ದಂಪತಿ, ಪೊಲೀಸರೊಂದಿಗೆ ವಾಗ್ವಾದ ನಡೆಸಿ ತನಿಖೆಗೆ ಅಸಹಕಾರ ತೋರಿದ್ದರು. ಕೊನೆಗೆ ಸರ್ಚ್ ವಾರಂಟ್ ತೋರಿಸಿ ಎಚ್ಚರಿಕೆ ಕೊಟ್ಟಾಗ ಪರಿಶೀಲನೆಗೆ ಸಹಕರಿಸಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ನಟಿ ಪ್ರಿಯಾಂಕಾ ಚೋಪ್ರಾರ ‘ಫೇವರಿಟ್​ ಕೋ-ವರ್ಕರ್​’ ಯಾರು ಗೊತ್ತಾ?

ಆನಂತರ ಪೊಲೀಸರು ಚಾಮರಾಜಪೇಟೆ ಸಿಸಿಬಿ ಕಚೇರಿಗೆ ವಿಚಾರಣೆಗೆ ಬರುವಂತೆ ನೋಟಿಸ್ ಜಾರಿ ಮಾಡಲು ಮುಂದಾಗಿದ್ದರು. ನೋಟಿಸ್ ಪ್ರತಿಯನ್ನು ಸ್ವೀಕರಿಸಲು ಪ್ರಿಯಾಂಕ ಆಳ್ವ ನಿರಾಕರಿದ್ದರು. ಈ ಕುರಿತು ಹಿರಿಯ ಅಧಿಕಾರಿಗಳ ಜತೆ ಚರ್ಚೆ ನಡೆಸಿದ ಪೊಲೀಸರು, ಸುಪ್ರಿಂಕೋರ್ಟ್ ಆದೇಶದಂತೆ ಪ್ರಿಯಾಂಕ ಆಳ್ವ ವಾಟ್ಸ್‌ಆ್ಯಪ್‌ಗೆ ನೋಟಿಸ್ ಜಾರಿ ಮಾಡಿದ್ದಾರೆ. ಶುಕ್ರವಾರ ಮಧ್ಯಾಹ್ನ 12 ಗಂಟೆ ಒಳಗಾಗಿ ತನಿಖಾಧಿಕಾರಿಗಳ ಮುಂದೆ ಹಾಜರಾಬೇಕು.ಇಲ್ಲವಾದರೆ, ಕಾನೂನು ಕ್ರಮ ಜರುಗಿಸಬೇಕಾಗುತ್ತದೆ ಎಂದು ಪೊಲೀಸರು ಎಚ್ಚರಿಕೆ ಸಹ ನೀಡಿದ್ದಾರೆ.

ಮುಂಬೈಯಿಂದ ಬರಲು ಸಾಧ್ಯವಾಗುವುದಿಲ್ಲ. ಸಮಯ ಬೇಕೆಂದು ಕೇಳಿದ್ದಾರೆ. ಸಮಯ ನೀಡಲು ನಿರಾಕರಿಸಿರುವ ಪೊಲೀಸರು, ಕಡ್ಡಾಯವಾಗಿ ಬರಬೇಕೆಂದು ಸೂಚನೆ ನೀಡಿದ್ದಾರೆ. ಇದನ್ನೂ ಓದಿ: ಶಿರಾ ಬಿಜೆಪಿ ಅಭ್ಯರ್ಥಿ ರಾಜೇಶ್​ ಗೌಡ 15 ಕೋಟಿ ಒಡೆಯ; ಪತ್ನಿ ಬಳಿ ಎಷ್ಟಿದೆ ಗೊತ್ತಾ ಆಸ್ತಿ?

ಇದೀಗ ಪ್ರಿಯಾಂಕ ಆಳ್ವ, ಚಾಮರಾಜಪೇಟೆ ಸಿಸಿಬಿ ಕಚೇರಿಗೆ ಬರಬೇಕಾಗಿದೆ. ಇಲ್ಲವಾದರೆ, 2ನೇ ನೋಟಿಸ್ ಜಾರಿ ಮಾಡಲಿದ್ದಾರೆ. ಜತೆಗೆ ತನಿಖೆಗೆ ಸಹಕಾರ ನೀಡಿಲ್ಲ ಎಂದು ಕೋರ್ಟ್ ಗಮನಕ್ಕೆ ತಂದು ಶಿಸ್ತು ಕ್ರಮಕ್ಕೂ ಸಿಸಿಬಿ ಪೊಲೀಸರು ಮುಂದಾಗುವ ಸಾಧ್ಯತೆ ಇರುವುದಾಗಿ ತಿಳಿದುಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net