ದಯವಿಟ್ಟು ಸಹಕರಿಸಿ.. ಯಾವ ವೈದ್ಯರಿಗೂ ಕರೊನಾ ಚಿಕಿತ್ಸೆ ತಿಳಿದಿಲ್ಲ, ಲಸಿಕೆ-ಔಷಧ ಸಿಕ್ಕಿಲ್ಲ; ಸಿಎಂ ಮನವಿ

Corona Vaccine
Published on

ಜೈಪುರ: 'ಸಾರ್ವಜನಿಕರೇ ದಯವಿಟ್ಟು ಸಹಕರಿಸಿ.. ಕರೊನಾ ಚಿಕಿತ್ಸೆ ಕುರಿತು ಯಾವ ವೈದ್ಯರಿಗೂ ಸರಿಯಾಗಿ ತಿಳಿದಿಲ್ಲ. ಕೋವಿಡ್​-19 ಗುಣಪಡಿಸುವ ಔಷಧ ಅಥವಾ ಬರದಂತೆ ತಡೆಯುವ ಲಸಿಕೆ ಇನ್ನೂ ಯಾರೂ ಕಂಡು ಹಿಡಿದಿಲ್ಲ' ಎಂಬುದಾಗಿ ಮುಖ್ಯಮಂತ್ರಿಯವರು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ತಮ್ಮ ರಾಜ್ಯದ ಜನರಲ್ಲಿ​ ಇಂಥದ್ದೊಂದು ವಿನಂತಿ ಮಾಡಿಕೊಂಡಿದ್ದಾರೆ. ತುಂಬ ಕಂಪನಿಗಳು ಕರೊನಾ ಔಷಧ ಕಂಡುಹಿಡಿಯಲು ಲಕ್ಷಾಂತರ ರೂಪಾಯಿ ಹೂಡಿಕೆ ಮಾಡುತ್ತಿವೆ. ಪ್ರತಿಯೊಬ್ಬರೂ ಮಾಸ್ಕ್​ ಧರಿಸಿ ಓಡಾಡಲು ಆರಂಭಿಸಿದರೆ ಕೋವಿಡ್​ ಸೋಂಕನ್ನು ತಡೆಯಬಹುದು ಎಂದು ರಾಜಸ್ಥಾನದ ಹಲವು ವೈದ್ಯರು ಹೇಳುತ್ತಿದ್ದಾರೆ. ಹೀಗಾಗಿ ಸಾರ್ವಜನಿಕರೆಲ್ಲರೂ ಮಾಸ್ಕ್​ ಧರಿಸಿಯೇ ಓಡಾಡಬೇಕು ಎಂದು ಗೆಹ್ಲೋಟ್​ ಕೋರಿಕೊಂಡಿದ್ದಾರೆ.

ಹಲವು ಸೋಂಕಿತರು ಈಗ ಗುಣವಾಗಿದ್ದಾರೆ. ಆದರೆ ಆ ಬಳಿಕ ಬೇರೆ ಇತರ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಮತ್ತೊಂದೆಡೆ ವೈರಸ್​ ಕೂಡ ತನ್ನ ಸ್ವಭಾವ ಬದಲಿಸುತ್ತಿದೆ. ಹೀಗಾಗಿ ಕೋವಿಡ್ ವಿರುದ್ಧದ ಹೋರಾಟದಲ್ಲಿ ಸಾರ್ವಜನಿಕರು ಸಹಕರಿಸಬೇಕು ಎಂಬುದಾಗಿ ಅವರು ವಿನಂತಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net