ಸುಶಾಂತ್​ ಸಿಂಗ್​ ಸಾವಿನ ತನಿಖೆಯ ಮುಕ್ತಾಯ ವರದಿ ಕೋರ್ಟ್​ಗೆ ಸಲ್ಲಿಸಿದ CBI; ವರದಿಯಲ್ಲಿರೊದೇನು..?

dk - 2025-03-22T220558.284
Published on

ನವದೆಹಲಿ: ಬಾಲಿವುಡ್​ ನಟ ಸುಶಾಂತ್​ ಸಿಂಗ್​ ರಜಪೂತ್​ ಸಾವಿನ ತನಿಖೆಯ ಮುಕ್ತಾಯದ ವರದಿಯನ್ನು ಕೇಂದ್ರ ತನಿಖಾ ದಳ(CBI)ದ ಅಧಿಕಾರಿಗಳು ಶನಿವಾರ ಕೋರ್ಟ್​ಗೆ ಸಲ್ಲಿಸಿದ್ದಾರೆ ಎಂದು ವರದಿಯಾಗಿದೆ.

ಮುಚ್ಚುವಿಕೆ ಮಾಹಿತಿಯನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ. ಇನ್ನು ಸುಶಾಂತ್​ ಸಿಂಗ್​ ರಜಪೂತ್​ 2020ರ ಜೂನ್​ 14 ರಂದು ಮುಂಬೈನ ಬಾಂದ್ರದಲ್ಲಿರುವ ತಮ್ಮ ಪ್ಲಾಟ್​ನಲ್ಲಿ ನೇಣು ಬೀಗಿದ ಸ್ಥಿತಿಯಲ್ಲಿ ಅವರ ದೇಹ ಪತ್ತೆಯಾಗಿತ್ತು. ನಟ ಸಾವು ಅಭಿಮಾನಿಗಳಿಗೆ ಅಲ್ಲದೆ, ಭಾರತೀಯ ಚಿತ್ರರಂಗಕ್ಕೆ ದಿಗ್ಭ್ರಮೆ ಮೂಡಿಸಿತ್ತು. ಇದು ಹಲವಾರು ಚರ್ಚೆಗಳಿಗೂ ಕಾರಣವಾಯಿತು.ಹೀಗಾಗಿ, ಅವರ ಸಾವಿನ ಬಗ್ಗೆ ಭಾರೀ ಅನುಮಾನಗಳು ಮೂಡಿವೆ ಎಂದು ಹಲವರು ಸಿಬಿಐ ತನಿಖೆಗೆ ಒತ್ತಾಯಿಸಿದ್ದರು.

ವರದಿಯಲ್ಲಿರೊದೇನು..?

ತನಿಖಾ ಸಂಸ್ಥೆಯ ಮುಕ್ತಾಯ ವರದಿಯು ಯಾವುದೇ ರೀತಿಯ ಆಕ್ರಮವಿಲ್ಲ ಆತ್ಮಹತ್ಯೆ ಪ್ರಕರಣ ಎಂದು ಸೂಚಿಸುತ್ತದೆ. ಅಂದರೆ, ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದಲ್ಲಿ ವೈಜ್ಞಾನಿಕ ಪುರಾವೆಗಳು ಯಾವುದೇ ಅಕ್ರಮವನ್ನು ತೋರಿಸಿಲ್ಲ, ಆದ್ದರಿಂದ ಅಂತಿಮವಾಗಿ ಮುಕ್ತಾಯ ವರದಿಯನ್ನು ಸಲ್ಲಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ ಎಂದು ವರದಿ ಉಲ್ಲೇಖಿಸಿದೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net