ಮೈಸೂರು: ಜಿಲ್ಲೆಯಲ್ಲಿ ತಪಾಮಾನ ದಿನೇ ದಿನೆ ಏರಿಕೆಯಾಗುತ್ತಿದ್ದು, ಮುಂದಿನ ನಾಲ್ಕು ದಿನಗಳಲ್ಲಿ ಜಿಲ್ಲೆಯಲ್ಲಿ ಮೋಡ ಕವಿದ ವಾತಾವರಣ ನಿರ್ಮಾಣಗೊಂಡು ತುಂತುರು ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಜಿಲ್ಲೆಯಲ್ಲಿ ಮಾ.23 ಮತ್ತು 24 ರಂದು 3 ಮಿ.ಮೀ., 26 ರಂದು 2 ಮಿ.ಮೀ. ಮಳೆಯಾಗುವ ಸಾಧ್ಯತೆ ಇದ್ದು, ಮಾ.25 ರಂದು ಮಳೆಯ ಸಾಧ್ಯತೆ ಇಲ್ಲ. ಈ ಅವಧಿಯಲ್ಲಿ ಕನಿಷ್ಠ 21 ಹಾಗೂ ಗರಿಷ್ಠ 33 ರಿಂದ 34 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆಯ ನಾಗನಹಳ್ಳಿಯ ಕೃಷಿ ಹವಾಮಾನ ಕ್ಷೇತ್ರ ವಿಭಾಗದ ಹಿರಿಯ ಅಧೀಕ್ಷಕ ಡಾ.ಸಿ. ರಾಮಚಂದ್ರ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ತಾಲೂಕುವಾರು ವಿವರ: ತಿ.ನರಸೀಪುರ ತಾಲೂಕಿನಲ್ಲಿ ಮಾ.23 ರಂದು 3.3 ಮಿ.ಮೀ., 24 ರಂದು 4 ಮಿ.ಮೀ., 26 ರಂದು 3 ಮಿ.ಮೀ. ಮಳೆಯಾಗುವ ಸಾಧ್ಯತೆ ಇದೆ. ಜಿಲ್ಲೆಯ ಯಾವುದೇ ತಾಲೂಕುಗಳಲ್ಲಿ ಮಾ.25 ರಂದು ಮಳೆ ಸುರಿಯುವ ಮುನ್ಸೂಚನೆ ಇಲ್ಲ. ಪಿರಿಯಾಪಟ್ಟಣ ತಾಲೂಕಿನಲ್ಲಿ ಮಾ.23 ರಂದು 3.2 ಮಿ.ಮೀ., 24 ರಂದು 4.5 ಮಿ.ಮೀ., 26 ರಂದು 1.7 ಮಿ.ಮೀ., ನಂಜನಗೂಡು ತಾಲೂಕಿನಲ್ಲಿ ಮ.23 ರಂದು 4.7 ಮಿ.ಮೀ., 24 ರಂದು 3.8 ಮಿ.ಮೀ., 26 ರಂದು 0.4 ಮಿ.ಮೀ. ಮಳೆಯಾಗುವ ನಿರೀಕ್ಷೆ ಇದೆ.
ಮೈಸೂರು ತಾಲೂಕಿನಲ್ಲಿ ಮಾ.23 ರಂದು 6.1 ಮಿ.ಮೀ., 24 ರಂದು 5.7 ಮಿ.ಮೀ., 26 ರಂದು 2.4 ಮಿ.ಮೀ., ಕೆ.ಆರ್. ನಗರ ತಾಲೂಕಿನಲ್ಲಿ ಮಾ.23 ಮತ್ತು 24 ರಂದು 2.9 ಮಿ.ಮಿ., 26 ರಂದು 1.9 ಮಿ.ಮೀ., ಹುಣಸೂರು ತಾಲೂಕಿನಲ್ಲಿ ಮಾ.23 ರಂದು 2.7 ಮಿ.ಮೀ., 24 ರಂದು 3.6 ಮಿ.ಮೀ., 26 ರಂದು 1.2 ಮಿ.ಮೀ., ಎಚ್.ಡಿ. ಕೋಟೆ ತಾಲೂಕಿನಲ್ಲಿ ಮಾ.23 ರಂದು 2.2 ಮಿ.ಮೀ., 24 ರಂದು 4.2 ಮಿ.ಮೀ., 26 ರಂದು 1.2 ಮಿ.ಮೀ. ಮಳೆ ಸುರಿಯುವ ಸಾಧ್ಯತೆ ಇದೆ.
