ಅಗಸ್ಟಾ ವೆಸ್ಟ್​​ಲ್ಯಾಂಡ್ ಹಗರಣ: ಮಧ್ಯವರ್ತಿ ಕ್ರಿಸ್ಟಿಯನ್ ಮೈಕಲ್​ ಸೇರಿ 14 ಜನರ ವಿರುದ್ಧ ಚಾರ್ಜ್​ಶೀಟ್ ಸಲ್ಲಿಕೆ

AgustaWestland scam
Published on

ನವದೆಹಲಿ: ವಿವಿಐಪಿ ಕಾಪ್ಟರ್ ಅಗಸ್ಟಾ ವೆಸ್ಟ್​ಲ್ಯಾಂಡ್ ಖರೀದಿ ಹಗರಣಕ್ಕೆ ಸಂಬಂಧಿಸಿ ಪ್ರಮುಖ ಮಧ್ಯವರ್ತಿ ಕ್ರಿಸ್ಟಿಯನ್ ಮೈಕಲ್​ ಜೇಮ್ಸ್, ರಾಜೀವ್ ಸಕ್ಸೇನಾ ಮತ್ತು 13 ಇತರರ ವಿರುದ್ಧ ಸೆಂಟ್ರಲ್ ಬ್ಯೂರೋ ಆಫ್ ಇನ್​ವೆಸ್ಟಿಗೇಶನ್​ (ಸಿಬಿಐ) ಶನಿವಾರ ಆರೋಪ ಪಟ್ಟಿ ಸಲ್ಲಿಸಿದೆ.

ಹೊಸ ಪೂರಕ ಆರೋಪ ಪಟ್ಟಿಯಲ್ಲಿ ಬ್ರಿಟಿಷ್​ ಮಧ್ಯವರ್ತಿ ಕ್ರಿಸ್ಟಿಯನ್ ಮೈಕಲ್​ ಪಾತ್ರವನ್ನು ವಿವರಿಸಲಾಗಿದ್ದು, 3,727 ಕೋಟಿ ರೂಪಾಯಿಗಳ ಹಗರಣದಲ್ಲಿ ಭಾರತದ ರಾಜಕಾರಣಿಗಳು ಮತ್ತು ಅಧಿಕಾರಿಗಳಿಗೆ ಲಂಚ ಹೇಗೆ ನೀಡಲಾಗಿತ್ತು ಎಂಬ ವಿವರವಿದೆ. ಇದು ಪೂರಕ ಆರೋಪ ಪಟ್ಟಿಯಾಗಿದ್ದು ರಕ್ಷಣಾ ಸಚಿವಾಲಯದ ಮಾಜಿ ಕಾರ್ಯದರ್ಶಿ ಶಶಿಕಾಂತ್ ಶರ್ಮಾ ಅವರ ಹೆಸರನ್ನು ಉಲ್ಲೇಖಿಸದೆಯೇ ಮತ್ತು ನಾಲ್ವರು ಭಾರತೀಯ ವಾಯುಪಡೆಯ ಅಧಿಕಾರಿಗಳ ವಿವರವನ್ನೂ ಉಲ್ಲೇಖಿಸಲಾಗಿದೆ.

ಇವರ ವಿರುದ್ಧ ವಿಚಾರಣೆಗೆ ಅನುಮತಿ ನೀಡಬೇಕು ಎಂದು ಸಿಬಿಐ ಮಾರ್ಚ್ ತಿಂಗಳಲ್ಲೇ ಅನುಮತಿ ಕೋರಿತ್ತು. ರಕ್ಷಣಾ ಸಚಿವಾಲಯದಿಂದ ಇನ್ನೂ ಅನುಮತಿ ಸಿಕ್ಕಿಲ್ಲ. ಇದುವರೆಗೆ ಸಲ್ಲಿಕೆಯಾದ ಎರಡು ಆರೋಪ ಪಟ್ಟಿಗಳಲ್ಲಿ ಯಾವ ರಾಜಕಾರಣಿಯ ಹೆಸರೂ ಉಲ್ಲೇಖವಾಗಿಲ್ಲ. 2017ರ ಸೆಪ್ಟೆಂಬರ್ ತಿಂಗಳಲ್ಲಿ ಮೊದಲ ಆರೋಪ ಪಟ್ಟಿ ಸಲ್ಲಿಕೆಯಾಗಿತ್ತು. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net