119 ಕೋಟಿ ರೂ.ವಂಚನೆ: ಬಾಲಿವುಡ್​ ನಿರ್ಮಾಪಕನ ವಿರುದ್ಧ ದೂರು

bunty walia
Published on

ಮುಂಬೈ: 119 ಕೋಟಿ ರೂಪಾಯಿಗೂ ಹೆಚ್ಚು ಹಣ ವಂಚಿಸಿದ ಪ್ರಕರಣದಲ್ಲಿ ಬಾಲಿವುಡ್ ನಿರ್ಮಾಪಕನ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿದೆ.

ಬಾಲಿವುಡ್​ ನಿರ್ಮಾಪಕ ಬಂಟಿ ವಾಲಿಯಾ ಹಾಗೂ ಇತರರ ವಿರುದ್ಧ ವೈಯಕ್ತಿಕ ಖಾತರಿಯ ಮೇಲೆ 2008ರ ಜೂನ್‌ನಲ್ಲಿ ಲಮ್ಹಾ ಎಂಬ ಹಿಂದಿ ಚಲನಚಿತ್ರ ನಿರ್ಮಾಣಕ್ಕಾಗಿ ಫಿಲ್ಮ್ ಫೈನಾನ್ಸಿಂಗ್ ಸ್ಕೀಮ್ ಅಡಿಯಲ್ಲಿ ಐಡಿಬಿಐ ಬ್ಯಾಂಕ್​ 4.95 ಕೋಟಿ ರೂ.ಗಳ ಸಾಲವನ್ನು ಮಂಜೂರು ಮಾಡಿತ್ತು.

ಆದರೆ ಮಾರ್ಚ್ 2009ರಿಂದ ಪ್ರವರ್ತಕರು ಮತ್ತು ಪ್ರದರ್ಶಕರ ನಡುವಿನ ವಿವಾದದ ಕಾರಣದಿಂದ ಚಿತ್ರ ಬಿಡುಗಡೆಗೆ ವಿಳಂಬವಾಗಿದೆ. ನಿರ್ದೇಶಕರು ಸಾಲವನ್ನು ಹಿಂದಿರುಗಿಸಲು ವಿಫಲರಾದ ಹಿನ್ನೆಲೆಯಲ್ಲಿ ಬ್ಯಾಂಕ್‌ನ ದೂರಿನ ಮೇರೆಗೆ ಸಿಬಿಐ ಪ್ರಕರಣ ದಾಖಲಿಸಿಕೊಂಡಿದೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net