ಕಿರುತೆರೆ ನಟನ ವಿರುದ್ಧ ಕೇಸ್

FIR-2
Published on

ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಖಾಸಗಿ ಕ್ಷಣಗಳ ಪೋಟೋ ಹರಿಬಿಡುವುದಾಗಿ ಸ್ನೇಹಿತೆಗೆ ಬೆದರಿಕೆ ಹಾಕುತ್ತಿದ್ದ ಆರೋಪದ ಮೇಲೆ ಕಿರುತೆರೆ ನಟನ ವಿರುದ್ಧ ಪಶ್ಚಿಮ ವಿಭಾಗ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಟ ವರುಣ್ ಆರಾಧ್ಯ ಮೇಲೆ ಆರೋಪ ಬಂದಿದ್ದು, ಈ ಬಗ್ಗೆ ಆತನ ಗೆಳತಿ ನೀಡಿದ ದೂರಿನ ಮೇರೆಗೆ ಎಫ್‌ಐಆರ್ ದಾಖಲಿಸಿ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ. ವೈಯಕ್ತಿಕ ಕಾರಣಗಳಿಗೆ ತನ್ನಿಂದ ದೂರವಾಗಿದ್ದ ಗೆಳತಿಗೆ ವರುಣ್ ಕಾಟ ಕೊಡುತ್ತಿದ್ದ ಎಂಬ ಆರೋಪಿಸಲಾಗಿದೆ.

ಧಾರವಾಹಿಯಲ್ಲಿ ನಟಿಸುತ್ತಿದ್ದ ವರುಣ್, 2019ರಲ್ಲಿ ಜಾಲತಾಣದಲ್ಲಿ ಸಂತ್ರಸ್ತೆಯನ್ನು ಪರಿಚಯ ಮಾಡಿಕೊಂಡಿದ್ದರು. ಕ್ರಮೇಣ ಚಾಟಿಂಗ್ ನಡೆದು ಇಬ್ಬರಲ್ಲಿ ಆತ್ಮೀಯ ಒಡನಾಟ ಬೆಳೆದಿತ್ತು. ಇತ್ತೀಚೆಗೆ ಇಬ್ಬರು ಪ್ರತ್ಯೇಕವಾಗಿದ್ದರು. ತನ್ನಿಂದ ದೂರವಾದಳು ಎಂಬ ಕಾರಣಕ್ಕೆ ಕೋಪಗೊಂಡ ವರುಣ್, ಸಂತ್ರಸ್ತೆಗೆ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ. ಈ ಬೆದರಿಕೆಗಳಿಂದ ಬೇಸತ್ತು ಪೊಲೀಸರಿಗೆ ಗೆಳತಿ ದೂರು ನೀಡಿದ್ದಾಳೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net