

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇತ್ತೀಚಿನ ದಿನಗಳಲ್ಲಿ ಅಪರಾಧ ಸಂಖ್ಯೆ ಹೆಚ್ಚಾಗುತ್ತಿದ್ದು ಈ ಮಧ್ಯೆ ಹೆಚ್ಚು ಸದ್ದು ಮಾಡುತ್ತಿದೆ.
ಹೊಸ ಪ್ರಕರಣ ಒಂದರಲ್ಲಿ ಕಾರ್ನಲ್ಲಿ ಹೋಗುತ್ತಿದ್ದ ವ್ಯಕ್ತಿ ಒಬ್ಬರನ್ನು ಬೈಕ್ನಲ್ಲಿ ಬಂದ ದುಷ್ಕರ್ಮಿಗಳು ಅಡ್ಡಗಟ್ಟಿ ಹಲ್ಲೆ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ.
ಸದ್ಯ ಸಂತ್ರಸ್ತ ಪ್ರವೀಣ್ ಜಂಗ್ರಾ ಎಂಬುವವರು ಟ್ವಿಟರ್ನಲ್ಲಿ ವಿಡಿಯೋ ಒಂದನ್ನು ಪೋಸ್ಟ್ ಮಾಡಿದ್ದು ಬೈಕಿನಲ್ಲಿ ಬರುವ ದುರ್ಷ್ಕಮಿಗಳು ಕಾರನ್ನು ಅಡ್ಡಗಟ್ಟಿ ಅಮಾನವೀಯವಾಗಿ ಹಲ್ಲೆ ನಡೆಸಿ ಹೊರಟು ಹೋಗುತ್ತಾರೆ.
ಈ ಕುರಿತು ಟ್ವೀಟ್ ಮಾಡಿರುವ ಸಂತ್ರಸ್ತ ಕೆಲ ಕಿಡಿಹೇಡಿಗಳು ನನ್ನ ಕಾರನ್ನು ಅಡ್ಡಗಟ್ಟಿ ನಡುರಸ್ತೆಯಲ್ಲಿ ಥಳಿಸಿದ್ದಾರೆ. ನಂಗ್ಲೋಯ್ ಮೆಟ್ರೋ ನಿಲ್ದಾಣದ ಬಳಿ ಈ ಘಟನೆ ನಡೆದಿದ್ದು ಇತ್ತೀಚಿನ ದಿನಗಳಲ್ಲಿ ದೆಹಲಿಯಲ್ಲಿ ಈ ರೀತಿಯ ಗೂಂಡಾಗಿರಿ ಸಾಮಾನ್ಯವಾಗಿದೆ. ದೆಹಲಿ ಪೊಲೀಸರು ಈ ಬಗ್ಗೆ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಔಟರ್ ಡೆಲ್ಲಿ ಡಿಸಿಪಿ ಹರೇಂದ್ರ ಸಿಂಗ್ ಅವರು ಅದನ್ನು ಮಾಡಿದ್ದರು ನಾವು ಇದನ್ನು ಮಾಡಿದ್ದೆವು(They did this, we did this) ಎಂದು ಟ್ವೀಟ್ ಮಾಡಿ ಆರೋಪಿಗಳನ್ನು ಬಂಧಿಸಿರುವುದಾಗಿ ತಿಳಿಸಿದ್ದಾರೆ.