ಪ್ರಧಾನಿ ಮೋದಿ ವಿರುದ್ಧ ದೂರು ನೀಡಲು ಮುಂದಾದ ಪಾಕ್​ ನಟಿ; ಟಾಂಗ್​ ಕೊಟ್ಟ ದೆಹಲಿ ಪೊಲೀಸರು

Pm Modi Pak Actress
Published on

ನವದೆಹಲಿ: ಭ್ರಷ್ಟಾಚಾರ ಪ್ರಕರಣದಲ್ಲಿ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್​ ಖಾನ್​ ಅವರನ್ನು ಬಂಧಿಸಿರುವ ಬೆನ್ನಲ್ಲೇ ದೇಶಾದ್ಯಂತ ಹಿಂಸಾಚಾರ ಭುಗಿಲೆದ್ದಿದೆ.

ಇನ್ನು ಪಾಕಿಸ್ತಾನದಲ್ಲಿ ನಾಗರೀಕ ಯುದ್ದದಂತಹ ಪರಿಸ್ಥಿತಿ ಹಾಗೂ ಗಲಭೆಗೆ ಪ್ರಧಾನಿ ಮೋದಿ ಅವರನ್ನು ದೂಷಿಸುವ ಮೂಲಕ ಅಲ್ಲಿನ ನಟಿಯೊಬ್ಬರು ಸುದ್ದಿಯಾಗಿದ್ದಾರೆ.

ಪ್ರಧಾನಿ ಮೋದಿ ಕಾರಣ

ಪಾಕಿಸ್ತಾನದ ಖ್ಯಾತ ನಟಿ ಸೆಹರ್​ ಶಿನ್ವಾರಿ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್​ ಖಾನ್​ ಅವರನ್ನು ಬಂಧಿಸಿರುವ ಬೆನ್ನಲ್ಲೇ ದೇಶಾದ್ಯ,ಮತ ಭುಗಿಲೆದ್ದಿರುವ ಹಿಂಸಾಚಾರಕ್ಕೆ ಪ್ರಧಾನಿ ಮೋದಿ ಅವರೇ ಕಾರಣ ಎಂದು ಟ್ವೀಟ್​ ಮಾಡಿದ್ದಾರೆ.

ಪಾಕಿಸ್ತಾನದಲ್ಲಿ ಭಯೋತ್ಪಾದನೆ, ಗಲಭೆ ಹಬ್ಬಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಹಾಗೂ ಬೇಹುಗಾರಿಕಾ ಸಂಸ್ಥೆಯಾದ ರಾ ವಿರುದ್ಧ ನಾನು ದೂರು ನೀಡಬೇಕು. ಯಾರಿಗಾದರೂ ದೆಹಲಿ ಪೊಲೀಸರನ್ನು ಆನ್​ಲೈನ್​ನಲ್ಲಿ ಸಂಪರ್ಕಿಸುವುದು ಹೇಗೆ ಎಂದು ತಿಳಿದಿದೆಯೇ. ಸುಪ್ರೀಂ ಕೋರ್ಟ್​ ನನಗೆ ನ್ಯಾಯ ಕೊಡಿಸುವ ವಿಶ್ವಾಸ ಇದೆ ಎಂದು ನಟಿ ಟ್ವೀಟ್​ ಮಾಡಿದ್ದಾರೆ.

ನಟಿ ಟ್ವೀಟ್​ಗೆ ದೆಹಲಿ ಪೊಲೀಸರ ಟಾಂಗ್

ನಟಿ ಟ್ವೀಟ್​ಗೆ ಪ್ರತಿಕ್ರಿಯಿಸಿರುವ ದೆಹಲಿ ಪೊಲೀಸರು ನಮ್ಮ ಕಾರ್ಯವ್ಯಾಪ್ತಿ ಪಾಕಿಸ್ತಾನಕ್ಕೆ ಒಳಪಡುವುದಿಲ್ಲ. ನಿಮ್ಮ ದೇಶದಲ್ಲಿ ಇಂಟರ್​ನೆಟ್​ ಸೌಲಭ್ಯ ಕಡಿತಗೊಂಡಿದ್ದರೂ ನೀವು ಹೇಗೆ ಟ್ವೀಟ್​ ಮಾಡುತ್ತಿದ್ದೀರಾ ಎಂದು ಪ್ರಶ್ನಿಸುವ ಮೂಲಕ ಟಾಂಗ್​ ಕೊಟ್ಟಿದ್ದಾರೆ.

ಇನ್ನು ಪಾಕಿಸ್ತಾನಿ ನಟಿಯ ಟ್ವೀಟ್​ಗೆ ನೆಟ್ಟಿಗರು ಹೌಹಾರಿದ್ದು ಕುಡಿದ ಮತ್ತಿನಲ್ಲಿ ಈಕೆ ಮೂರ್ಖರ ರೀತಿ ಟ್ವೀಟ್​ ಮಾಡಿದ್ದಾಳೆ ಎಂದು ಕಾಲೆಳೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net