More

    ಸಿಬಿಐ ಅಧಿಕಾರಿಗಳ ಸೋಗಿನಲ್ಲಿ ಆಭರಣ ಮಳಿಗೆ ದರೋಡೆ; ಖದೀಮರು ಅರೆಸ್ಟ್​

    ನವದೆಹಲಿ: ನಾವು ಪ್ರತಿನಿತ್ಯ ಸಮಾಜದಲ್ಲಿ ನಮ್ಮ ನಡುವೆ ಆಗುತ್ತಿರುವ ಘಟನೆಗಳನ್ನು ನೋಡಿರುತ್ತೇವೆ ಕೇಳಿರುತ್ತೇವೆ.

    ಇದೀಗ ಇದೇ ರೀತಿಯ ಘಟನೆಯೊಂದು ದೆಹಲಿಯಲ್ಲಿ ನಡೆದಿದ್ದು ಖದೀಮರು ಸಿನಿಮೀಯ ಶೈಲಿಯಲ್ಲಿ ಆಭರಣ ಅಂಗಡಿಯನ್ನು ದೋಚಿದ್ದಾರೆ.

    ಸಿನಿಮೀಯ ಶೈಲಿಯಲ್ಲಿ ಕೃತ್ಯ

    ಘಟನೆ ರಾಷ್ಟ್ರ ರಾಜಧಾನಿ ದೆಹಲಿ ಶಾಹದಾರ ಪ್ರದೇಶದಲ್ಲಿ ನಡೆದಿದ್ದು ಖದೀಮರು ಬಾಲಿವುಡ್​ ನಟ ಅಕ್ಷಯ್​ ಕುಮಾರ್ ನಾಯಕನಾಗಿ ನಟಿಸಿರುವ ಸ್ಪೆಷಲ್​26 ಚಿತ್ರದ ಸ್ಪೂರ್ತಿ ಪಡೆದು ಆಭರಣ ಮಳಿಗೆಯನ್ನು ದೋಚಿದ್ದಾರೆ.

    ಸದ್ಯ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದು ಸಂದೀಪ್​ ಭಟ್​ನಗರ್​​(54), ಪವನ್ ಗುಪ್ತಾ(47), ಯೋಗೇಶ್​ ಕುಮಾರ್​(58), ಹಿಮಾಂಶು(35) ಹಾಗು ಓರ್ವ ಮಹಿಳೆಯನ್ನು ಶಂಕಿತರೆಂದು ಗುರುತಿಸಿದ್ದಾರೆ.

    40 ಲಕ್ಷ ರೂಪಾಯಿ ಹಾಗೂ 500 ಗ್ರಾಂ ಚಿನ್ನ ಕಳ್ಳತನ

    ಏಪ್ರಿಲ್​ 17ರಂದು ಶಂಕಿತ ಆರೋಪಿಗಳು ದೆಹಲಿಯ ಶಾಹದಾರ ಪ್ರದೇಶದಲ್ಲಿರುವ ಚಿನ್ನಾಭರಣ ಅಂಗಡಿಗೆ ನುಗ್ಗಿದ ಖದೀಮರು ತಾವು ಸಿಬಿಐ ಅಧಿಕಾರಿಗಳು ಎಂದು ಅಂಗಡಿ ಮಾಲೀಕರ ಬಳಿ ಪರಿಚಯಿಸಿಕೊಂಡಿದ್ದಾರೆ.

    Police

    ಇದನ್ನೂ ಓದಿ: ಸರದಿ ಸಾಲಿನಲ್ಲಿ ನಿಂತು ವಾಪಸ್​ ಆದ ಮತದಾರರು; 8,000 ಸಾವಿರ ಜನರಿಗೆ ಒಂದೇ ಕೇಂದ್ರ!

    ಬಳಿಕ ಇಲ್ಲಿ ಅಕ್ರಮ ವ್ಯವಹಾರ ನಡೆಯುತ್ತಿರುವ ದೂರು ಬಂದಿರುವ ಕುರಿತು ಅಂಗಡಿ ಮಾಲೀಕನಿಗೆ ಬೆದರಿಸಿ ಪ್ರಕರಣ ಹೊರಗೆ ಬಾರದಿರಬೇಕಾದರೆ 1 ಕೋಟಿ ರೂಪಾಯಿ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ.

    ಸಿಬಿಐ ಅಧಿಕಾರಿಗಳು ಎಂದು ನಂಬಿದ ಅಂಗಡಿ ಮಾಲೀಕ ಖದೀಮರ ಜೊತೆ ಚೌಕಾಸಿ ಮಾಡಿದ್ದು ಬಳಿಕ ಆರೋಪಿಗಳು ಸಂತ್ರಸ್ತನಿಂದ 40 ಲಕ್ಷ ರೂಪಾಯಿ ಹಣ ಹಾಗೂ 500 ಗ್ರಾಂ ಚಿನ್ನವನ್ನು ದೋಚಿದ್ದಾರೆ.

    ಎಚ್ಚರಿಕೆ ವಹಿಸಿದ ಖದೀಮರು

    ಒಡವೇ ಹಾಗೂ ಹಣವನ್ನು ದೋಚಿದ ಕದೀಮರು ಬಳಿಕ ಅಂಗಡಿಯಲ್ಲಿ ಅಳವಡಿಸಿ್ದ ಸಿಸಿಟಿವಿ ಕ್ಯಾಮರಾದ ಡಿವಿಆರ್​ಅನ್ನು ಸಹ ತಮ್ಮ ಜೊತೆ ತೆಗೆದುಕೊಂಡು ಹೋಗಿದ್ದಾರೆ.

    ಅಂಗಡಿ ಮಾಲೀಕ ಬಳಿಕ ಎಚ್ಚೆತ್ತು ಪೊಲೀಸರಿಗೆ ದುರು ನೀಡಿದಾಗ ಆರೋಪಿಗಳು ಸಿಬಿಐ ಅಧಿಕಾರಿಗಳಲ್ಲ ಎಂಬ ವಿಚಾರ ಬೆಳಕಿಗೆ ಬಂದಿದ್ದು ಕಾರ್ಯಪ್ರವೃತ್ತರಾಗಿದ್ದಾರೆ.

    ಶಾಹದಾರ ಪ್ರದೇಶದಲ್ಲಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿ ಹಣ ಹಾಗೂ ಚಿನ್ನಾಭರಣವನ್ನು ವಶಕ್ಕೆ ಪಡೆದಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts