

ಆಂಧ್ರಪ್ರದೇಶ: ಹೆದ್ದಾರಿಯ ಬದಿಯಲ್ಲಿ ನಿಂತಿದ್ದ ಲಾರಿಗೆ ಹಿಂಬದಿಯಿಂದ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮಹಿಳೆಯರು ಮತ್ತು ಬಾಲಕ ಸೇರಿದಂತೆ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಇಬ್ಬರಿಗೆ ತೀವ್ರ ಗಾಯಗಳಾಗಿರುವ ಘಟನೆ ಆಂಧ್ರಪ್ರದೇಶದ ಎಲೂರು ಜಿಲ್ಲೆಯ ಲಕ್ಷ್ಮೀನಗರದಲ್ಲಿ ಸಂಭವಿಸಿದೆ.
ಮೃತರನ್ನು ಪಶ್ಚಿಮ ಗೋದಾವರಿ ಜಿಲ್ಲೆಯ ಭೀಮಾವರಂನ ರಾಚಬತ್ತುನಿ ಭಾಗ್ಯಶ್ರೀ (26), ರಚನಿಬತುನಿ ನಾಗನಿತಿನ ಕುಮಾರ್ (2) ಮತ್ತು ಬೊಮ್ಮ ಕಮಲಾದೇವಿ (53) ಎಂದು ಗುರುತಿಸಲಾಗಿದೆ. ಏಲೂರು ಜಿಲ್ಲೆಯ ದ್ವಾರಕಾ ತಿರುಮಲ ಮಂಡಲದಲ್ಲಿ ನಿಂತಿದ್ದ ಲಾರಿಗೆ ಹೈದರಾಬಾದ್‌ನಿಂದ ರಜೋಲ್‌ಗೆ ತೆರೆಳುತ್ತಿದ್ದ ಕಾರು ಡಿಕ್ಕಿ ಹೊಡೆದ ಕಾರಣ ಹೆದ್ದಾರಿಯಲ್ಲಿ ಭೀಕರ ಅಪಘಾತ ಸಂಭವಿಸಿದೆ.
ಅಪಘಾತದಲ್ಲಿ ನಾಗಷಣ್ಮುಕ್ ಹಾಗೂ ಚಾಲಕ ವಂಶಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಘಟನೆ ಬಗ್ಗೆ ಮಾಹಿತಿ ಪಡೆದ ಭೀಮಡೋಳು ಸರ್ಕಲ್ ಇನ್ಸ್ಪೆಕ್ಟರ್ ರವಿಕುಮಾರ್ ಮತ್ತು ಸಬ್ ಇನ್ಸ್ಪೆಕ್ಟರ್ ಸತೀಶ್ ಸ್ಥಳಕ್ಕೆ ಭೇಟಿ ನೀಡಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ,(ಏಜೆನ್ಸೀಸ್).