ಅಪಘಾತದಲ್ಲಿ ಸಿಎಆರ್ ಕಾನ್‌ಸ್ಟೆಬಲ್ ಸಾವು

Accident
Published on

ಬೆಂಗಳೂರು: ಮೈಸೂರು ರಸ್ತೆ ನಾಯಂಡಹಳ್ಳಿ ರಿಂಗ್ ರಸ್ತೆಯಲ್ಲಿ ಬೈಕ್‌ನಲ್ಲಿ ಸಿಎಆರ್ ಕಾನ್‌ಸ್ಟೆಬಲ್ ಆಯತಪ್ಪಿ ಪಕ್ಕದಲ್ಲಿ ಸಾಗುತ್ತಿದ್ದ ಗೂಡ್ಸ್ ವಾಹನಕ್ಕೆ ಡಿಕ್ಕಿ ಹೊಡೆದು ಅಸುನೀಗಿದ್ದಾರೆ.

ಅಜಾದ್‌ನಗರದಲ್ಲಿ ಅಣ್ಣನ ಜತೆ ನೆಲೆಸಿದ್ದ ಮನು (27) ಮೃತ ಕಾನ್‌ಸ್ಟೆಬಲ್. ದಾವಣಗೆರೆ ಮೂಲದ ಮನು, ಮೈಸೂರು ರಸ್ತೆ ಸಿಎಆರ್ ಕೇಂದ್ರ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಮಂಗಳವಾರ ಕೆಲಸ ನಿಮಿಕ್ತ ಬೈಕ್‌ನಲ್ಲಿ ನಾಯಂಡಹಳ್ಳಿಗೆ ಹೋಗುತ್ತಿದ್ದರು.

ರಾತ್ರಿ 8.30ರಲ್ಲಿ ರಿಂಗ್ ರಸ್ತೆ ಜಂಕ್ಷನ್‌ನಲ್ಲಿ ಮರಳು ಇದ್ದ ಕಾರಣಕ್ಕೆ ಆಯತಪ್ಪಿ ಪಕ್ಕದಲ್ಲಿಯೇ ಸಾಗುತ್ತಿದ್ದ ಗೂಡ್ಸ್ ವಾಹನಕ್ಕೆ ಡಿಕ್ಕಿ ಹೊಡೆದು ಬಿದ್ದಿದ್ದಾರೆ. ಪರಿಣಾಮ ತಲೆ ಮತ್ತು ದೇಹಕ್ಕೆ ಗಂಭೀರವಾಗಿ ಗಾಯಗೊಂಡಿದ್ದು, ಮನು ಅವರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದರು. ಮಾರ್ಗಮಧ್ಯೆಯೇ ರಕ್ತ ಸ್ರಾವ ಉಂಟಾಗಿ ಅಸುನೀಗಿದ್ದಾರೆ. ಬ್ಯಾಟರಾಯನಪುರ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net