ಬಸ್​-ಕಾರು ಮುಖಾಮುಖಿ ಡಿಕ್ಕಿ! ಭೀಕರ ಅಪಘಾತದಲ್ಲಿ 5 ವೈದ್ಯಕೀಯ ವಿದ್ಯಾರ್ಥಿಗಳು ದುರ್ಮರಣ

ವಿಜಯವಾಣಿ - 2024-12-03T100109.366
Published on

ಕೇರಳ: ತಡರಾತ್ರಿ ರಾಜ್ಯ ಸಾರಿಗೆ ಬಸ್‌ಗೆ ಕಾರು ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಪ್ರಥಮ ವರ್ಷದ ಐವರು ವೈದ್ಯಕೀಯ ವಿದ್ಯಾರ್ಥಿಗಳು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಕೇರಳದ ಅಲಪುಝಾ ಜಿಲ್ಲೆಯಲ್ಲಿ ಸಂಭವಿಸಿದೆ.

ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟ ವಿದ್ಯಾರ್ಥಿಗಳನ್ನು ಲಕ್ಷದ್ವೀಪ್‌ನ ದೇವಾನಂದನ್, ಮುಹಮ್ಮದ್ ಇಬ್ರಾಹಿಂ, ಆಯುಷ್ ಶಾಜಿ, ಶ್ರೀದೀಪ್ ವಲ್ಸನ್ ಮತ್ತು ಮುಹಮ್ಮದ್ ಜಬ್ಬಾರ್ ಎಂದು ಗುರುತಿಸಲಾಗಿದೆ. ಮೃತರೆಲ್ಲರೂ ಅಲಪ್ಪುಳದ ಟಿಡಿ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳು ಎಂದು ವರದಿಯಾಗಿದೆ.

ಫೆಂಗಲ್ ಚಂಡಮಾರುತದಿಂದ ರಾಜ್ಯದಲ್ಲಿ ಭಾರೀ ಮಳೆಯಾಗುತ್ತಿದೆ. ಇದರ ನಡುವೆಯೂ ಪ್ರಯಾಣಿಸುತ್ತಿದ್ದ ಕಾರು ಕಲರ್ಕೋಡ್ ಪ್ರದೇಶದಲ್ಲಿ ರಾತ್ರಿ ಸುಮಾರು 10 ಗಂಟೆ ಅಪಘಾತಕ್ಕೀಡಾಗಿದೆ. ರಭಸವಾಗಿ ಡಿಕ್ಕಿಯಾದ ಪರಿಣಾಮ ಕಾರು ಸಂಪೂರ್ಣವಾಗಿ ಜಖಂಗೊಂಡಿದ್ದು, ಮೃತಪಟ್ಟ ಪ್ರಯಾಣಿಕರನ್ನು ಕಾರಿನಿಂದ ಹೊರತರಲು ರಕ್ಷಣಾ ತಂಡಗಳು ಡೋರ್​ಗಳನ್ನು ಕಟರ್​ನಿಂದ ಕತ್ತರಿಸಿದ್ದಾರೆ.

ಈ ವೇಳೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಬಸ್​ನಲ್ಲಿದ್ದ ಕೆಲವು ಪ್ರಯಾಣಿಕರನ್ನು ಹೆಚ್ಚಿನ ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಯಿತು. ಅಪಘಾತದಿಂದಾಗಿ ಬಸ್ ಕೂಡ ನಜ್ಜುಗುಜ್ಜಾಗಿದ್ದು, ಮಕ್ಕಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net