Naga Chaitanya- Sobhita: ಟಾಲಿವುಡ್ ನಟ ನಾಗ ಚೈತನ್ಯ-ಶೋಭಿತಾ ಕೆಲವೇ ಗಂಟೆಗಳಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಅನ್ನಪೂರ್ಣ ಸ್ಟುಡಿಯೋದಲ್ಲಿ ಅವರ ವಿವಾಹ ಸಮಾರಂಭಕ್ಕೆ ವ್ಯವಸ್ಥೆ ಮಾಡಲಾಗುತ್ತಿದೆ. ಬುಧವಾರ (ಡಿಸೆಂಬರ್ 4) ನಾಗ ಚೈತನ್ಯ ಶೋಭಿತಾ ಕೊರಳಿಗೆ ಮೂರು ಗಂಟು ಹಾಕಲಿದ್ದಾರೆ. ಕುಟುಂಬಸ್ಥರು, ಬಂಧುಗಳು, ಆಪ್ತರು, ಚಿತ್ರರಂಗದ ಗಣ್ಯರು ಸೇರಿದಂತೆ 300 ಮಂದಿಗೆ ಆಹ್ವಾನ ನೀಡಲಾಗಿದೆ.
ಮದುವೆ ಪೂರ್ವ ಸಂಭ್ರಮಾಚರಣೆಗಳೂ ಶುರುವಾಗಿವೆ. ಇದಕ್ಕೆ ಸಂಬಂಧಿಸಿದ ಫೋಟೊಗಳೂ ರಾರಾಜಿಸುತ್ತಿವೆ. ಇದನ್ನು ನೋಡಿದ ಚಿತ್ರರಂಗದ ಗಣ್ಯರು, ಅಭಿಮಾನಿಗಳು, ನೆಟ್ಟಿಗರು ಭಾವಿ ಜೋಡಿಗೆ ಅಡ್ವಾನ್ಸ್ ವಿಶ್ ಮಾಡುತ್ತಿದ್ದಾರೆ.
ಈಗ ಸಾಮಾಜಿಕ ಜಾಲತಾಣಗಳಲ್ಲಿ ನಾಗ ಚೈತನ್ಯ ಹಾಗೂ ಶೋಭಿತಾ ವಯಸ್ಸಿನ ಬಗ್ಗೆ ಚರ್ಚೆಯಾಗುತ್ತಿದೆ. 23 ನವೆಂಬರ್ 1986 ರಂದು ಜನಿಸಿದ ನಾಗ ಚೈತನ್ಯ ಇತ್ತೀಚೆಗಷ್ಟೇ 38 ವರ್ಷಕ್ಕೆ ಕಾಲಿಟ್ಟರು. ಸೋಭಿತಾ ಅವರು ಮೇ 31, 1992 ರಂದು ಜನಿಸಿದರು. ಈ ಲೆಕ್ಕಾಚಾರದ ಪ್ರಕಾರ ಆಕೆಗೆ ಸದ್ಯ 32 ವರ್ಷ. ಅಂದರೆ ಈ ದಂಪತಿ ನಡುವೆ ಸುಮಾರು 6 ವರ್ಷಗಳ ಅಂತರವಿದೆ.
ಪ್ರಮುಖ OTT ಕಂಪನಿಯೊಂದು ಆಯೋಜಿಸಿದ್ದ ಪ್ರಚಾರ ಕಾರ್ಯಕ್ರಮದಲ್ಲಿ ನಾಗ ಚೈತನ್ಯ ಮತ್ತು ಸೋಭಿತಾ ಮೊದಲ ಬಾರಿಗೆ ಭೇಟಿಯಾದರು. ಆ ನಂತರ ಇಬ್ಬರ ನಡುವೆ ಸ್ನೇಹ ಶುರುವಾಯಿತು. ಅದು ಕ್ರಮೇಣ ಪ್ರೀತಿಯಾಗಿ ಅರಳಿತು. ಆ ಬಳಿಕ ಹಿರಿಯರ ಅನುಮತಿ ಪಡೆದು ಇದೇ ಮಾರ್ಚ್‌ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಈಗ ಪ್ರೇಮ ಪಕ್ಷಿಗಳು ಮದುವೆ ಆಗುತ್ತಿದ್ದಾರೆ.