ಮೊಬೈಲ್ ಕಳ್ಳನ ಸೆರೆ; 32 ಫೋನ್ ಜಪ್ತಿ

Mobile Phones
Published on

ಬೆಂಗಳೂರು: ಶೆಡ್‌ಗಳಲ್ಲಿ ಆಯಾಸಗೊಂಡು ನಿದ್ದೆ ಮಾಡುವ ಕಾರ್ಮಿಕರ ಬಳಿ ಮೊಬೈಲ್ ಕಳವು ಮಾಡುತ್ತಿದ್ದ ಆರೋಪಿಯನ್ನು ವೈಟ್ ಫೀಲ್ಠ್ ಪೊಲೀಸರು ಬಂಧಿಸಿದ್ದಾರೆ.

ಕಾಡುಗೋಡಿ ನಿವಾಸಿ ಅಬ್ದುಲ್ ರಜಾಕ್ ಬಂಧಿತ. 4.5 ಲಕ್ಷ ರೂ. ಮೌಲ್ಯದ 32 ಮೊಬೈಲ್‌ಗಳನ್ನು ಜಪ್ತಿ ಮಾಡಲಾಗಿದೆ. ಇತ್ತೀಚಿಗೆ ವೈಟ್‌ಫೀಲ್ಡ್ ಬಳಿಯ ವಿಜಯನಗರ ಮುಖ್ಯರಸ್ತೆಯಲ್ಲಿ ಕಾರ್ ವಾಷ್ ಅಂಗಡಿಯಲ್ಲಿ ಮಲಗಿದ್ದ ಕೆಲಸಗಾರನ ಮೊಬೈಲ್ ಕಳ್ಳತನ ಮಾಡಿದ್ದ. ಈ ಕೇಸಿನ ತನಿಖೆ ಕೈಗೊಂಡಾಗ ರಜಾಕ್ ಬಂಧನಕ್ಕೆ ಒಳಗಾಗಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಿಹಾರದಿಂದ ಹಲವು ವರ್ಷಗಳ ಹಿಂದೆ ಕೂಲಿ ಅರಸಿ ನಗರಕ್ಕೆ ರಜಾಕ್ ಕುಟುಂಬ ವಲಸೆ ಬಂದು ಕಾಡುಗೋಡಿ ಸಮೀಪ ನೆಲೆಸಿದೆ. ಸುಲಭವಾಗಿ ಹಣ ಸಂಪಾದನೆ ಉದ್ದೇಶಕ್ಕೆ ಮೊಬೈಲ್ ಕಳ್ಳತನ ಮಾಡುತ್ತಿದ್ದ. ಕೂಲಿ ಕಾರ್ಮಿಕರೇ ಟಾರ್ಗೆಟ್ ಮಾಡಿದ್ದ ಆರೋಪಿ, ನಿರ್ಮಾಣ ಹಂತದ ಕಟ್ಟಡಗಳು ಹಾಗೂ ರಸ್ತೆ ಕಾಮಗಾರಿ ಬಳಿ ಶೆಡ್‌ಗಳಲ್ಲಿ ಆಯಾಸಗೊಂಡು ವಿಶ್ರಾಂತಿ ಪಡೆಯುತ್ತಿದ್ದಾಗ ಕಾರ್ಮಿಕರ ಮೊಬೈಲ್‌ಗಳನ್ನು ದೋಚುತ್ತಿದ್ದ. ಕದ್ದ ಮೊಬೈಲ್‌ಗಳನ್ನು ಹೊರರಾಜ್ಯಕ್ಕೆ ಅಥವಾ ಕೂಲಿ ಕಾರ್ಮಿಕರಿಗೆ ಕಡಿಮೆ ಬೆಲೆಗೆ ಮಾರುತ್ತಿದ್ದ ಎಂದು ಪೊಲೀಸರು ವಿವರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net