ಕೈ ಬಿಟ್ಟ ಕ್ಯಾಪ್ಟನ್​; ಎಲ್ಲದಕ್ಕೂ ಸೋನಿಯಾ ಮತ್ತವರ ಇಬ್ಬರು ಮಕ್ಕಳ ವರ್ತನೆಯೇ ಕಾರಣ ಎಂದ ಮಾಜಿ ಸಿಎಂ

Amarinder Singh
Published on

ಪಂಜಾಬ್​: ಕೆಲವು ದಿನಗಳ ಹಿಂದೆ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದಿರುವ ಕ್ಯಾಪ್ಟನ್​ ಅಮರಿಂದರ್ ಸಿಂಗ್ ಇದೀಗ ಕೈ ಬಿಟ್ಟಿದ್ದಾರೆ. ಅರ್ಥಾತ್, ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಅವರು ಈಗ ಕಾಂಗ್ರೆಸ್​ ಪಕ್ಷದ ಸದಸ್ಯತ್ವಕ್ಕೂ ರಾಜೀನಾಮೆ ಕೊಟ್ಟಿದ್ದಾರೆ.

ಕಾಂಗ್ರೆಸ್​​ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಏಳು ಪುಟಗಳ ಸುದೀರ್ಘ ಪತ್ರ ಬರೆದಿರುವ ಅವರು ಎಲ್ಲದಕ್ಕೂ ಸೋನಿಯಾ ಗಾಂಧಿ ವರ್ತನೆಯೇ ಕಾರಣ ಎಂಬುದನ್ನೂ ಹೇಳಿದ್ದಾರೆ.

ನಿಮ್ಮ ಹಾಗೂ ನಿಮ್ಮ ಇಬ್ಬರು ಮಕ್ಕಳ ವರ್ತನೆಯಿಂದ ತೀವ್ರ ಬೇಸರಗೊಂಡು ಈ ನಿರ್ಧಾರಕ್ಕೆ ಬರಬೇಕಾಯಿತು ಎಂದು ಕ್ಯಾಪ್ಟನ್ ತಮ್ಮ ಅಸಮಾಧಾನ ತೋಡಿಕೊಂಡಿದ್ದಾರೆ. 1954ರಿಂದ ನಾನು ಹಾಗೂ ರಾಜೀವ್​ ಗಾಂಧಿ ಶಾಲಾದಿನಗಳಿಂದ ಜೊತೆಗೇ ಇದ್ದ ಕಾರಣ ರಾಹುಲ್​ ಹಾಗೂ ಪ್ರಿಯಾಂಕಾ ಇಬ್ಬರನ್ನೂ ನನ್ನ ಸ್ವಂತ ಮಕ್ಕಳಂತೆ ಪ್ರೀತಿಸುತ್ತಿದ್ದ ಬಗ್ಗೆಯೂ ಅವರು ಹೇಳಿಕೊಂಡಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net