ಬ್ಯಾಂಕ್ ಉದ್ಯೋಗಿಗೂ ವಕ್ಕರಿಸಿದ ಕರೊನಾ!

Covid 19
Published on

ರಾಯಚೂರು: ಕೆನರಾ ಬ್ಯಾಂಕ್​ ಉದ್ಯೋಗಿಯೊಬ್ಬರಿಗೆ ಕರೊನಾ ಪಾಸಿಟಿವ್​ ಬಂದಿದ್ದು, ವಿಷಯ ತಿಳಿದ ಅಧಿಕಾರಿಗಳು ಎಲ್ಲ ಸಿಬ್ಬಂದಿಯನ್ನು ಹೊರ ಕಳಿಸಿ ಬ್ಯಾಂಕ್​ಗೆ ಬೀಗ ಹಾಕಿದರು.

ಮಸ್ಕಿ ಪಟ್ಟಣದ ಕೆನರಾ ಬ್ಯಾಂಕ್​ನ ಉದ್ಯೋಗಿಯಾದ ಕುಷ್ಟಗಿ ತಾಲೂಕಿನ ಕೇಸೂರು ಗ್ರಾಮದ ವ್ಯಕ್ತಿಯಲ್ಲಿ ಕೋವಿಡ್​-19 ಸೋಂಕು ದೃಢಪಟ್ಟಿದೆ. ಮಸ್ಕಿ ಪಟ್ಟಣದಲ್ಲಿ ವಾಸವಿದ್ದ ನೌಕರ ಮೂರು ದಿನದ ಹಿಂದೆ ಸ್ವ ಗ್ರಾಮಕ್ಕೆ ಬಂದಿದ್ದರು. ತೀವ್ರ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸ್ವಯಂಪ್ರೇರಿತವಾಗಿ ಕುಷ್ಟಗಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದಿದ್ದರು. ಆ ವೇಳೆ ಇವರ ಗಂಟಲು ದ್ರವ ಮತ್ತು ರಕ್ತ ಮಾದರಿ ಸಂಗ್ರಹಿಸಲಾಗಿತ್ತು. ವರದಿ ಪಾಸಿಟಿವ್​ ಬಂದಿದೆ.

ನೌಕರನಿಗೆ ಸೋಂಕು ಇರುವುದು ಗೊತ್ತಾಗುತ್ತಿದ್ದಂತೆ ಮಂಗಳವಾರ ಬೆಳಗ್ಗೆ ಸ್ಥಳಕ್ಕೆ ದೌಡಾಯಿಸಿದ ಅಧಿಕಾರಿಗಳು ಸಿಬ್ಬಂದಿಯನ್ನು ಬ್ಯಾಂಕ್​ನಿಂದ ಹೊರ ಕಳುಹಿಸಿ ಬೀಗ ಹಾಕಿದರು. ಕೇಸೂರು ಗ್ರಾಮವನ್ನು ಸೀಲ್ಡೌನ್ ಮಾಡಲಾಗಿದೆ. ನೌಕರನ ಪ್ರಥಮ ಮತ್ತು ದ್ವಿತೀಯ ಸಂಪರ್ಕಿತರ ಹುಡುಕಾಟ ನಡೆದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net