ಸುಧೀರ್​ ಸುರಿ ಹತ್ಯೆಯ ಹೊಣೆ ವಹಿಸಿಕೊಂಡ ಲಖ್ಬೀರ್​ ಸಿಂಗ್​ ಲಾಂಡಾ!

landa
Published on

ಅಮೃತಸರ: ನಿನ್ನೆ (ನ.4) ತಾನೆ ಶಿವಸೇನೆ ನಾಯಕ ಸುಧೀರ್​ ಸುರಿ ಹತ್ಯೆ ಸುದ್ದಿ ಇಡೀ ದೇಶದಲ್ಲೇ ತಲ್ಲಣ ಸೃಷ್ಟಿಸಿತ್ತು. ಹಾಡಹಗಲೇ ನಡೆದ ಹತ್ಯೆಗೆ ಈಗ ಕೆನಡಾ ಮೂಲದ ರೌಡಿ ಲಖ್ಬೀರ್​ ಸಿಂಗ್​ ಲಾಂಡಾ ಹೊಣೆ ವಹಿಸಿಕೊಂಡಿದ್ದಾನೆ!

ಈತ ಸಾಮಾಜಿಕ ತಾಣವೊಂದರಲ್ಲಿ ಹೊಣೆ ಹೊತ್ತುಕೊಂಡಿದ್ದು ಪೋಸ್ಟ್​ನ ಸತ್ಯಾಸತ್ಯತೆಯ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸದ್ಯಕ್ಕೆ ಘಟನೆಗೆ ಸಂಬಂಧಿಸಿದ ಬೆಳವಣಿಗೆಗಳ ಬಗ್ಗೆ ಪೊಲೀಸರು ಯಾವುದೇ ರೀತಿಯ ಮಾಹಿತಿ ನೀಡುತ್ತಿಲ್ಲ.

ಹತ್ಯೆಯ ನಂತರ ಅಮೃತಸರದಲ್ಲಿ ಈಗ ಪರಿಸ್ಥಿತಿ ಸಹಜತೆಗೆ ಮರಳಿದೆ. ಮೃತ ನಾಯಕನ ಮರಣೋತ್ತರ ಪರೀಕ್ಷೆ ನಡೆಸಲು ವೈದ್ಯರ ಮಂಡಳಿಯನ್ನು ನೇಮಿಸಲಾಗಿದ್ದು ಪರೀಕ್ಷೆ ನಡೆಯುವ ಸ್ಥಳಕ್ಕೆ ಭಾರಿ ಪೊಲೀಸ್​ ಸುರಕ್ಷೆಯನ್ನು ನೀಡಲಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net