ಈ ಫೋಟೋದಲ್ಲಿರುವ ಅಕ್ಕ-ತಂಗಿಯರ ಪೈಕಿ ಒಬ್ಬರು ಇಂದು ಸ್ಟಾರ್​ ನಟಿ! ಮತ್ತೊಬ್ಬರು?

WhatsApp Image 2024-03-04 at 11.19.12 AM
Published on

ಬೆಂಗಳೂರು: ಸಿನಿಮಾ ಲೋಕವೇ ಒಂದು ರೀತಿ ವಿಶೇಷ ಎಂದೇ ಹೇಳಬಹುದು. ಕಾರಣ, ಈ ವೃತ್ತಿಯಲ್ಲಿ ತೊಡಗುವ ಪ್ರತಿಯೊಬ್ಬರು ತಮ್ಮನ್ನು ತಾವು ಹಲವಾರು ಪಾತ್ರಗಳ ಮೂಲಕ ಜನರಿಗೆ ಪರಿಚಯಿಸಿಕೊಳ್ಳುವ ರೀತಿ ಬಹಳ ಸ್ಪೆಷಲ್​. ಇದು ಆಯಾ ಕಲಾವಿದರಿಗೆ ಎಷ್ಟು ಖುಷಿ ಕೊಡಲಿದೆಯೋ, ನೋಡುಗರಿಗೂ ಅಷ್ಟೇ ಸಂತಸ ನೀಡುತ್ತದೆ. ನಟ-ನಟಿಯರ ನಟನೆಯನ್ನು ದೊಡ್ಡ ಪರದೆಯ ಮೇಲೆ ವೀಕ್ಷಿಸಿ, ಸಿನಿಮಾವನ್ನು ಆನಂದಿಸುವ ಪ್ರೇಕ್ಷಕರು, ಅವರ ಕಲೆ, ಪ್ರತಿಭೆಯನ್ನು ಮೆಚ್ಚಿ ಇಂದು ಬಿಗ್ ಸೂಪರ್​ಸ್ಟಾರ್ ಆಗಿ ಮಿಂಚುವಂತೆ ಮಾಡುತ್ತಾರೆ.

ಕಲಾವಿದರ ಶ್ರಮ, ಹಿನ್ನೆಲೆ ನೋಡಿ ಅವರ ಬೆನ್ನುತಟ್ಟಿ ಪ್ರತಿಹೆಜ್ಜೆಯಲ್ಲೂ ಅವರನ್ನು ಹುರಿದುಂಬಿಸುವ ಸಿನಿಪ್ರೇಕ್ಷಕರು ಹಾಗೂ ಅಭಿಮಾನಿಗಳು, ಅವರ ಬೆಳವಣಿಗೆ ಮತ್ತು ಮುಂದಿನ ದಿನಗಳಲ್ಲಿ ಅವರನ್ನು ಸ್ಟಾರ್​ ನಟರಾಗಿ ಹೊರಹೊಮ್ಮುವಂತೆ ಮಾಡುತ್ತಾರೆ. ಈ ಪೈಕಿ ಇಂದು ಭಾರತೀಯ ಚಿತ್ರರಂಗದ ಪ್ರಮುಖ ಭಾಷೆಯ ನಟರು ಸ್ಟಾರ್​ಗಳಾಗಿ ಮಿಂಚುತ್ತಿದ್ದಾರೆ.

ತಮ್ಮ ನೆಚ್ಚಿನ ನಟ-ನಟಿಯರನ್ನು ಅನುಸರಿಸುವ ಅಭಿಮಾನಿಗಳು, ಅವರ ಮಾತು, ಹಂಚಿಕೊಳ್ಳುವ ವಿಷಯಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚಾಗಿ ಗಮನಿಸುತ್ತಿರುತ್ತಾರೆ. ಅದರಲ್ಲೂ ವಿಶೇಷವಾಗಿ ತಾವು ಪ್ರೀತಿಸುವ ಸೆಲೆಬ್ರಿಟಿಗಳ ಬಾಲ್ಯದ ಫೋಟೋ, ವೈಯಕ್ತಿಕ ಸಂದೇಶಗಳನ್ನು ಕುತೂಹಲದಿಂದ ಶೇರ್ ಮಾಡುವ ಅಭಿಮಾನಿಗಳು, ಮಗುವಿದ್ದಾಗ ಈ ಕಲಾವಿದರು ಎಷ್ಟು ಚೆಂದ ಇದ್ದಾರೆ, ಮುದ್ದು ಮುದ್ದಾಗಿ ಕಾಣಿಸುತ್ತಿದ್ದಾರೆ ಎಂದೆಲ್ಲಾ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

ಇದೇ ರೀತಿಯ ಫೋಟೋವೊಂದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಮತ್ತೊಮ್ಮೆ ವೈರಲ್ ಆಗಿದ್ದು, ಮೇಲ್ಕಂಡ ಫೋಟೋದಲ್ಲಿರುವ ಇಬ್ಬರು ಬಾಲಕಿಯರು ಒಬ್ಬ ಬಹುಭಾಷಾ ನಟನ ಮಕ್ಕಳು. ಚಿತ್ರದಲ್ಲಿ ಕಾಣಿಸುವ ಇಬ್ಬರು ಮಕ್ಕಳಲ್ಲಿ ಒಬ್ಬರು ಇಂದು ಹೆಸರಾಂತ ನಟಿಯಾಗಿ ಮಿಂಚುತ್ತಿದ್ದರೆ, ಮತ್ತೊಬ್ಬರು ಕೂಡ ನಟಿಯಾಗಿ ಒಂದಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಹಾಗಾದ್ರೆ ಯಾರಿವರು? ಯಾವ ಸ್ಟಾರ್ ನಟನ ಮಕ್ಕಳು? ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ.

ಶೃತಿ ಮತ್ತು ಅಕ್ಷರ ಹಾಸನ್ ತಮಿಳು ನಟ, ಬಹುಭಾಷಾ ಕಲಾವಿದ ಕಮಲ್ ಹಾಸನ್ ಅವರ ಪುತ್ರಿಯರು. ಅಕ್ಕ-ತಂಗಿಯರಾದ ಇವರಿಬ್ಬರು ಕಮಲ್ ಅವರ ಮುದ್ದಿನ ಹೆಣ್ಣುಮಕ್ಕಳು. ಇಂದು ತೆಲುಗು, ತಮಿಳು ಚಿತ್ರರಂಗದಲ್ಲಿ ಸ್ಟಾರ್ ನಟಿಯಾಗಿ ಶೃತಿ ಮಿಂಚಿದರೆ, 'ಶಮಿತಾಬ್', 'ವಿವೇಗಮ್', 'ಕದರಮ್ ಕೊಂಡಾನ್' ಸಿನಿಮಾಗಳ ಮೂಲಕ ಅಕ್ಷರ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net