ದಶಕಗಳ ಇಡೀ ರಾಜ್ಯವನ್ನೇ ನಡುಗಿಸಿದ್ದ; 13, ಕೊಲೆ, 13 ಅತ್ಯಾಚಾರಗೈದಿದ್ದವನಿಗೆ ಕೊನೆಗೂ ಶಿಕ್ಷೆ

bogeyman
Published on

ಕ್ಯಾಲಿಫೋರ್ನಿಯಾ: ದಶಕಗಳ ಕಾಲ ಹತ್ತಾರು ಕೊಲೆ ಹಾಗೂ ಅತ್ಯಾಚಾರ ನಡೆಸಿದ್ದ ಮಾಜಿ ಪೊಲೀಸ್​ ಅಧಿಕಾರಿಗೆ ಕೊನೆಗೂ ಶಿಕ್ಷೆಯಾಗಿದೆ.

ಜೋಸೆಫ್​ ಜೇಮ್ಸ್​ ಡಿಆಂಜಿಲೋ ತನ್ನ ಕುಕೃತ್ಯಗಳಿಂದ 70 ಹಾಗೂ 80 ದಶಕದಲ್ಲಿ ಇಡೀ ಕ್ಯಾಲಿಫೋರ್ನಿಯಾವನ್ನೇ ನಡುಗಿಸಿದ್ದ. ಸರಣಿ ಅತ್ಯಾಚಾರ ಹಾಗೂ ಕೊಲೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಆದರೆ, ಎಲ್ಲಿಯೂ ಸಿಕ್ಕಿಬಿದ್ದಿರಲಿಲ್ಲ.

ಕೊನೆಗೆ ವಂಶಾವಳಿಗಳನ್ನು ನಿರ್ವಹಿಸುವ ಖಾಸಗಿ ವೆಬ್​ಸೈಟ್​​ಗಳ ನೆರವಿನಿಂದ ಈತನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಅಪರಾಧಿಕ ಕೃತ್ಯಗಳನ್ನು ಒಪ್ಪಿಕೊಂಡಿದ್ದ. ಎರಡು ವರ್ಷಗಳಿಂದ ವಿಚಾರಣೆ ನಡೆಸಿದ ಕೋರ್ಟ್​, ಅಂತಿಮವಾಗಿ ಅಪರಾಧಿಗೆ ಅಜೀವ ಸರೆವಾಸ ವಿಧಿಸಿದೆ.

ಗೋಲ್ಡನ್​ ಸ್ಟೇಟ್​ ಕಿಲ್ಲರ್​ ಎಂದೇ ಖ್ಯಾತನಾಗಿದ್ದ ಡಿಆಂಜಿಲೋನನ್ನು 2018ರ ಏಪ್ರಿಲ್​ನಲ್ಲಿ ಬಂಧಿಸಲಾಗಿತ್ತು. ಈತ 13 ಕೊಲೆ ಹಾಗೂ 13 ಅತ್ಯಾಚಾರ ಹಾಗೂ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದ ಅಪರಾಧಗಳನ್ನು ಮಾಡಿದ್ದಾಗಿ ಒಪ್ಪಿಕೊಂಡಿದ್ದ.

ಇಷ್ಟೊಂದು ಅಪರಾಧಿಕ ಕೃತ್ಯಗಳನ್ನು ಎಸಗಿದ್ದರೂ ಆರೋಪಿ ಪತ್ತೆಯಾಗಿರಲಿಲ್ಲ. ಕೊನೆಗೆ ಅಪರಾಧ ಸ್ಥಳದಲ್ಲಿ ಪತ್ತೆಯಾದ ಡಿಎನ್​ಎ ಕುರುಹುಗಳನ್ನು ಖಾಸಗಿ ವಂಶಾವಳಿ ವೆಬ್​ಸೈಟ್​ಗಳ ನೆರವು ಪಡೆದು ಹೋಲಿಕೆ ಮಾಡಿದಾಗ ಅಪರಾಧಿ ಯಾರು ಎಂಬುದು ಗೊತ್ತಾಗಿತ್ತು.

ಈತನಿಗೆ ಮರಣದಂಡನೆಯನ್ನೇ ವಿಧಿಸಬೇಕಿತ್ತು. ಆದರೆ, ಈತನಿಗೆ 74 ವರ್ಷ ವಯಸ್ಸಾಗಿರುವುದರಿಂದ ಹಾಗೂ ತೆರೆದ ನ್ಯಾಯಾಲಯದಲ್ಲಿ ಹಾಜರಿದ್ದ ಆತನ ಕುಟುಂಬದವ ಭಾವುಕ ಮನವಿಗೆ ಸ್ಪಂದಿಸಿ, ಪೇರೋಲ್​ ನೀಡಲಾಗದ ಅಜೀವ ಸೆರೆವಾಸ ಶಿಕ್ಷೆಗೆ ಇಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net