

ನವದೆಹಲಿ: ಕೇಂದ್ರ ಸರ್ಕಾರದ ನೌಕರರು ಹಾಗೂ ಪಿಂಚಣಿದಾರರಿಗೆ ಶೇ. 4 ತುಟ್ಟಿಭತ್ಯೆ (ಡಿ.ಎ) ಏರಿಕೆ ಮಾಡಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಶುಕ್ರವಾರ ನಡೆದ ಕೇಂದ್ರ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಈ ಏರಿಕೆಯಿಂದ ನೌಕರರ ಮಾಸಿಕ ವೇತನ ಕನಿಷ್ಠ -ಠಿ; 720ರಿಂದ ಗರಿಷ್ಠ 10,000ದವರೆಗೆ ಹೆಚ್ಚಳವಾಗಲಿದೆ.
ಹಣದುಬ್ಬರ ಹಾಗೂ ಜೀವನಾವಶ್ಯಕ ವಸ್ತುಗಳ ಬೆಲೆಗಳ ಏರಿಕೆ ಹಿನ್ನೆಲೆಯಲ್ಲಿ ಡಿ.ಎ ಹೆಚ್ಚಿಸಲಾಗಿದ್ದು, ಇದು ಈ ವರ್ಷದ ಜನವರಿಯಿಂದಲೇ ಅನ್ವಯ ವಾಗಲಿದೆ. 48 ಲಕ್ಷ ನೌಕರರು, 65 ಲಕ್ಷ ಪಿಂಚಣಿದಾರರಿಗೆ ಲಾಭವಾಗಲಿದೆ.