ಏರೇಟರ್​ ಅಳವಡಿಕೆ ಶುಲ್ಕ ವಸೂಲಿ; ಜಲಮಂಡಳಿ ಮಾಹಿತಿ

aerators
Published on

ಬೆಂಗಳೂರು: ಕಳೆದ ಬೇಸಿಗೆ ಅವಧಿಯಲ್ಲಿ ರಾಜಧಾನಿಯಲ್ಲಿ ನೀರಿನ ಸಮಸ್ಯೆ ನಿಭಾಯಿಸುವ ನಿಟ್ಟಿನಲ್ಲಿ ಸಾರ್ವಜನಿಕ ಸ್ಥಳಗಳಲ್ಲಿರುವ ನಲ್ಲಿಗಳಿಗೆ ಜಲಮಂಡಳಿ ಏರೇಟರ್​ಗಳನ್ನು ಅಳವಡಿಕೆ ಮಾಡಿತ್ತು. ಅದರ ಮೊತ್ತವನ್ನು ಪ್ರಸಕ್ತ ತಿಂಗಳಿನ ನೀರಿನ ಬಿಲ್​ನೊಂದಿಗೆ ಸೇರಿಸಿ ವಸೂಲಿ ಮಾಡಲಾಗುತ್ತಿದೆ ಎಂದು ಬೆಂಗಳೂರು ಜಲಮಂಡಳಿ ತಿಳಿಸಿದೆ.

ನಲ್ಲಿಗಳಿಗೆ ಏರೇಟರ್​ ಅಳವಡಿಸುವುದಕ್ಕೆ ಸೂಕ್ತ ಸೂಚನೆ ಹಾಗೂ ಸಾಕಷ್ಟು ಕಾಲಾವಕಾಶ ನೀಡಲಾಗಿದ್ದರೂ ಹಲವಾರು ಕಟ್ಟಡಗಳಲ್ಲಿ ಅಳವಡಿಕೆ ಮಾಡಿರಲಿಲ್ಲ. ನೀರಿನ ಉಳಿತಾಯದ ಮೂಲಕ ಸಮರ್ಪಕ ನೀರು ಸರಬರಾಜು ಮಾಡುವ ಉದ್ದೇಶದಿಂದ ಜಲಮಂಡಳಿ ಅತ್ಯುತ್ತಮ ಗುಣಮಟ್ಟದ ಏರೇಟರ್​ಗಳನ್ನು ಹಲವು ಕಡೆಗಳಲ್ಲಿ ಅಳವಡಿಸಿದೆ.

ಏರೇಟರ್​ ಹಾಗೂ ಅದನ್ನು ಅಳವಡಿಸುವ ಸೇವಾ ಶುಲ್ಕವನ್ನಾಗಿ ಪ್ರತಿ ನಲ್ಲಿಗೂ 50 ರೂ. ನಿಗದಿಗೊಳಿಸಲಾಗಿದೆ. ಗ್ರಾಹಕರಿಗೆ ಯಾವುದೇ ಅನುಮಾನಗಳಿದ್ದಲ್ಲಿ ಸಹಾಯವಾಣಿ 1916ಕ್ಕೆ ಕರೆ ಮಾಡಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net