ಒಂದು ಕಾರು ಕೊಂಡರೆ ಮತ್ತೊಂದು ಫ್ರೀ..., ಲಾರಿ ಖರೀದಿಗೆ 13 ಸಾವಿರ ರೂ. ಡೌನ್​ಪೇಮೆಂಟ್​...!

cars
ಸಾಂದರ್ಭಿಕ ಚಿತ್ರ
Published on

ಕರೊನಾದಿಂದಾಗಿ ಉದ್ಯೋಗ ನಷ್ಟ, ಸಂಬಳ ಕಡಿತಕ್ಕೆ ಒಳಗಾಗಿರುವುದರಿಂದ ಜನರ ಬಳಿ ದುಡ್ಡೇ ಇಲ್ಲದಂತಾಗಿದೆ. ಇನ್ನು ಉಳಿತಾಯದ ಹಣವಿದ್ದವರು ಆಪತ್ಕಾಲಕ್ಕೆ ಬೇಕು ಎಂಬ ಕಾರಣಕ್ಕೆ ಖರ್ಚು ಮಾಡುತ್ತಿಲ್ಲ. ಇದರಿಂದಾಗಿ ಆರ್ಥಿಕತೆ ಕುಸಿಯುತ್ತಿದೆ.

ಅಂತೆಯೇ, ವಾಹನೋದ್ಯಮ ತೀರಾ ಸಂಕಷ್ಟದಲ್ಲಿದೆ. ಹೀಗಾಗಿ, ಗ್ರಾಹಕರನ್ನು ಸೆಳೆಯಲು ಕಂಪನಿಗಳು ಇನ್ನಿಲ್ಲದ ಕಸರತ್ತು ನಡೆಸುತ್ತಿವೆ. ಕಂಪನಿಗಳು ನೀಡುತ್ತಿರುವ ಕೆಲ ಆಫರ್​ಗಳ ಬಗ್ಗೆ ಕೇಳಿದರೆ ಅಚ್ಚರಿಯಾಗದೇ ಇರದು.

ಕೇವಲ 1,500 ರೂ. ಡೌನ್​ಪೇಮೆಂಟ್​ ನೀಡಿದರೆ ವಾಹನವನ್ನು ಮನೆಗೊಯ್ಯಬಹುದು. ಕಿಯಾ ಮೋಟರ್ಸ್​ನಂತೂ 1,353 ರೂ.ಗಳಿಗೆ ಕಾರು ನೀಡುತ್ತಿದೆ. ಟ್ರಕ್​ ಬೇಕೆಂದರೆ 13 ಸಾವಿರ ರೂ. ಡೌನ್​ ಪೇಮೆಂಟ್​ ನೀಡಿದರೆ ಸಾಕು.

ಹುಂಡೈನವರು ಹಿಂದೆ ಬಿದ್ದಿಲ್ಲ. ಸಂಟಾ ಫೆ ಕಾರು ಖರೀದಿಸಿದರೆ ಅಸೆಂಟ್​ ಅಥವಾ ರಿಯನ್ನಾ ಕಾರು ಉಚಿತವಾಗಿ ನೀಡುವುದಾಗಿ ಘೋಷಿಸಿದ್ದಾರೆ. ಇನ್ನು ಬಿಎಂಡಬ್ಲ್ಯೂ ಕಾರುಗಳ ಬೆಲೆಯನ್ನು ಮೂರನೇ ಒಂದರಷ್ಟು ಕಡಿಮೆ ಮಾಡಲಾಗಿದೆ.

ಇದೆಲ್ಲಾ ಎಲ್ಲಪ್ಪಾ ಅಂತೀರಾ... ಫಿಲಿಫೈನ್ಸ್​ನಲ್ಲಿ. ಕಳೆದ ಮೇನಲ್ಲಿ ಮನಿಲಾದಲ್ಲಿ ಮಾರಾಟವಾಗಿರುವ ವಾಹನಗಳ ಸಂಖ್ಯೆ ಕೇವಲ 133. ಕಳೆದ ವರ್ಷ ಇದೇ ಅವಧಿಯಲ್ಲಿ 4,788 ವಾಹನಗಳನ್ನು ಖರೀದಿಸಲಾಗಿತ್ತು. ಮಾರಾಟದಲ್ಲಿ ಭಾರಿ ಇಳಿಕೆ ಕಂಡುಬಂದಿರುವ ಕಾರಣ ಭರ್ಜರಿ ಆಫರ್​ಗಳನ್ನು ನೀಡುತ್ತಿದ್ದಾರೆ...! ಭಾರತದಲ್ಲೂ ಹೀಗಾದರೆ...!

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net