ಈ ಆಮೆ ಖರೀದಿಸುವವರಿಗೆ ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಮನೆ ಗಿಫ್ಟ್!

house
Published on

ಲಂಡನ್​: ಯಾರಾದರೂ ಕೋಟ್ಯಂತರ ರೂಪಾಯಿಯ ಮನೆಯನ್ನು ನಿಮಗೆ ಫ್ರೀ ಆಗಿ ಕೊಡುತ್ತಾರೆ ಎಂದರೆ ನೀವು ನಂಬುತ್ತೀರಾ? ಆದರೆ ಈಗ ನಂಬಲೇಬೇಕು. ಆದರೆ ಉಚಿತವಾಗಿ ಮನೆ ಪಡೆಯುವುದಕ್ಕೆ ಒಂದೇ ಒಂದು ಕಂಡೀಷನ್​ ಇದೆ.

ನಿಮಗೆ ಉಚಿತವಾಗಿ ನೀಡಲಾಗುವ ಮನೆಯಲ್ಲಿ ಒಂದು ಆಮೆಯಿದೆ. 94 ವರ್ಷದ ಆ ಆಮೆಯನ್ನು ಕೊಂಡುಕೊಂಡೆ ಆ ಮನೆ ನಿಮಗೆ ಗಿಫ್ಟ್​. ಅಂದ ಹಾಗೆ ಆ ಆಮೆಯ ಬೆಲೆ ಕೇವಲ 8.54 ಕೋಟಿ ರೂಪಾಯಿ.

94 ವರ್ಷದ ಆಮೆಗೆ ಹರ್ಕುಲಸ್​ ಎನ್ನುವ ಹೆಸರಿದೆ. ಸುತ್ತ ಮುತ್ತಲಿನ ಊರಿಗೆಲ್ಲ ಈ ಆಮೆ ಬಹಳ ಫೇಮಸ್​ ಅಂತೆ. ಈಗ ಈ ಆಮೆಯನ್ನು ಮಾರಾಟ ಮಾಡಲು ಅದರ ಮಾಲೀಕ ಮುಂದಾಗಿದ್ದಾನೆ. ಅದನ್ನು ಕೊಳ್ಳುವವರಿಗೆ ದೊಡ್ಡ ಮನೆಯನ್ನು ಗಿಫ್ಟ್​ ಕೊಡುವುದಾಗಿಯೂ ತಿಳಿಸಲಾಗಿದೆ. ಮೂರು ಮಹಡಿ ಇರುವ ಮನೆಯಲ್ಲಿ ದೊಡ್ಡ ದೊಡ್ಡ ಲಿವಿಂಗ್​ ರೂಂಗಳಿವೆ. ನಾಲ್ಕು ರೂಂಗಳಿದ್ದು ಕೂಡು ಕುಟುಂಬ ಕೂಡ ಅರಾಮವಾಗಿ ಬದುಕಬಹುದಾಗಿದೆ.(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net