More

    ಆರ್ಡರ್​ ಮಾಡಿದ್ದು ಚಿಕನ್​ ಫ್ರೈ, ಬಂದಿದ್ದು ಟವೆಲ್​ ಫ್ರೈ! ವಿಚಿತ್ರ ಅನುಭವ ಹಂಚಿಕೊಂಡ ಮಹಿಳೆ

    ಬೆಂಗಳೂರು: ಈಗ ಆನ್​ಲೈನ್​ನಲ್ಲಿ ಫುಡ್​ ಆರ್ಡರ್​ ಮಾಡುವುದು ಸಾಮಾನ್ಯವಾಗಿಬಿಟ್ಟಿದೆ. ಅದೆಷ್ಟೇ ಜನರು ಮನೆಯಲ್ಲಿ ಅಡುಗೆಯನ್ನೇ ಮಾಡದೆ ಆನ್​ಲೈನ್​ನಲ್ಲೇ ಫುಡ್​ ತರಿಸಿಕೊಂಡು ತಿನ್ನುವವರಿದ್ದಾರೆ. ಅದೇ ರೀತಿ ಹೊಟ್ಟೆ ಹಸಿವು ಎನ್ನುತ್ತಿದ್ದ ಮಗನಿಗಾಗಿ ಆನ್​ಲೈನ್​ನಲ್ಲಿ ಫುಡ್​ ಆರ್ಡರ್​ ಮಾಡಿದ ಮಹಿಳೆಯೊಬ್ಬಳು, ಬಾಕ್ಸ್​ನಲ್ಲಿ ಬಂದ ಫುಡ್ ನೋಡಿ ಶಾಕ್ ಆದ ಘಟನೆಯೊಂದು ನಡೆದಿದೆ.

    ವಿದೇಶದಲ್ಲಿ ನೆಲೆಸಿರುವ ಅಲಿಕ್ ಪೆರೆಜ್ ಹೆಸರಿನ ಮಹಿಳೆ ಆನ್​ಲೈನ್ ಫುಡ್​ ಡೆಲಿವರಿ ಆ್ಯಪ್​ ಒಂದರಲ್ಲಿ ಚಿಕನ್​ ಫ್ರೈಗೆ ಆರ್ಡರ್​ ಮಾಡಿದ್ದಳಂತೆ. ಆರ್ಡರ್​ ಮಾಡಿದೆ ಕೆಲ ಹೊತ್ತಿನಲ್ಲಿ ಆಕೆಯ ಮನೆ ಬಾಗಿಲಿಗೆ ಫುಡ್ ಬಂದಿದೆ. ಡೆಲಿವರಿ ಬಾಯ್ ಅದನ್ನು ಆಕೆಯ ಕೈಗಿತ್ತು ವಾಪಸಾಗಿದ್ದಾನೆ. ಇತ್ತ ಫುಡ್ ಬಾಕ್ಸ್​ ತೆಗೆದ ಅಲಿಕ್​ ಅದರಲ್ಲಿದ್ದ ಚಿಕನ್​ ಅನ್ನು ತಿನ್ನಲು ಮುಂದಾಗಿದ್ದಾಳೆ. ಅದೆಷ್ಟೇ ಕಚ್ಚಿದರೂ ಚಿಕನ್​ ತುಂಡಾಗಿಲ್ಲ.

    ತುಂಡಾಗದ ಚಿಕನ್​ ಅನ್ನು ಬಾಯಿಯಿಂದ ಹೊರಗೆ ತೆಗೆದು ಅದನ್ನು ಪರಿಶೀಲಿಸಿದ್ದಾಳೆ. ಆಗ ಅದು ಚಿಕನ್​ ಅಲ್ಲ, ಟವೆಲ್​ ಎನ್ನುವುದು ತಿಳಿದುಬಂದಿದೆ. ಚಿಕನ್​ ಬದಲಿಗೆ ಯಾವುದೋ ಸಣ್ಣ ಟವೆಲ್​ ಒಂದನ್ನು ಫ್ರೈ ಮಾಡಿ ಕಳುಹಿಸಿಕೊಡಲಾಗಿದೆ. ಈ ಕುರಿತಾಗಿ ಅಲಿಕ್​ ಫೇಸ್​ಬುಕ್​ನಲ್ಲಿ ಸಂಪೂರ್ಣ ಮಾಹಿತಿ ಹಂಚಿಕೊಂಡಿದ್ದಾಳೆ. ತಾನು ಮಾಡಿದ್ದ ಆರ್ಡರ್​ನ ಸ್ಕ್ರೀನ್​ಶಾಟ್​ ಹಾಗೂ ಬಂದಿರುವ ಫುಡ್​ನ ಫೋಟೋ ಮತ್ತು ವಿಡಿಯೋವನ್ನೂ ಹಂಚಿಕೊಂಡಿದ್ದಾಳೆ. (ಏಜೆನ್ಸೀಸ್​)

    ಭಾನುವಾರದ ಬಾಡೂಟಕ್ಕಾಗಿ ಕೋಳಿ ಮಾಂಸ ವಿತರಿಸಿದ ಕಾಂಗ್ರೆಸ್​ ನಾಯಕ!

    ಬಾಸ್​ ಮರ್ಮಾಂಗವನ್ನೇ ಕತ್ತರಿಸಿ ಪೊಲೀಸರಿಗೆ ಕರೆ ಮಾಡಿದ ಮಹಿಳೆ! ಕಾರಣ ಕೇಳಿ ಬೆಚ್ಚಿಬಿದ್ದ ಪೊಲೀಸ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts