

ಮುಂಬೈ: ಮಹಿಳಾ ಉದ್ಯಮಿಯೊಬ್ಬರು ಸೈಬರ್ ವಂಚಕರ ಬಲೆಗೆ ಬಿದ್ದು ಲಕ್ಷಾಂತರ ರೂ.ಕಳೆದುಕೊಂಡಿದ್ದಾರೆ. ಘಟನೆ ಮುಂಬೈನಲ್ಲಿ ನಡೆದಿದೆ.
ಇದನ್ನೂ ಓದಿ: ಜ್ಞಾನವಾಪಿ ಮಸೀದಿ ಅಲ್ಲ.. ಸಿಎಂ ಯೋಗಿ ಹೇಳಿಕೆ ವೈರಲ್
ಅಲ್ಯೂಮಿನಿಯಂ ವಸ್ತುಗಳ ತಯಾರಿಕಾ ಕಂಪನಿ ನಡೆಸುತ್ತಿರುವ ಮುಂಬೈ ಮೀರಾ ರೋಡ್ನ 49 ವರ್ಷದ ಮಹಿಳಾ ಉದ್ಯಮಿಗೆ ಷೇರು ವಿನಿಮಯ ಕೇಂದ್ರದಲ್ಲಿ ಹೂಡಿಕೆ ಮಾಡಲು ಸಲಹೆ ನೀಡುವುದಾಗಿ ವಾಟ್ಸಾಪ್ಗೆ ಸಂದೇಶ ಬಂದಿತ್ತು. ಅದಕ್ಕೆ ಅವರು ಕಾಲ್ ಮಾಡಿದಾಗ ಅವರಿಗೆ ಆನ್ಲೈನ್ನಲ್ಲಿ ಸಲಹೆ ನೀಡುವ ನೆಪದಲ್ಲಿ ಸೈಬರ್ ವಂಚಕರು 35 ದಿನಗಳಲ್ಲಿ 72.80 ಲಕ್ಷ ರೂ. ವಂಚಿಸಿದ್ದಾರೆ.
ವಿಶೇಷವೆಂದರೆ ಈ ಉದ್ಯಮಿ ಈಗಾಗಲೇ ಸ್ಟಾಕ್ ಟ್ರೇಡ್ ಹೂಡಿಕೆದಾರರಾಗಿದ್ದರು. ಆದರೂ 2024ರ ಆಗಸ್ಟ್ 4 ರಿಂದ ಸೆಪ್ಟೆಂಬರ್ 10 ರ ನಡುವೆ ಮೊತ್ತವನ್ನು ಕಳೆದುಕೊಂಡಿದ್ದಾರೆ.
ಕಾಶಿಗಾಂವ್ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಉದ್ಯಮಿ, ತಜ್ಞರ ಸಲಹೆಯ ಮೇರೆಗೆ ಸ್ಟಾಕ್ ಎಕ್ಸ್ಚೇಂಜ್ನಲ್ಲಿ ಹೂಡಿಕೆಯ ಮೇಲೆ ಲಾಭ ಪಡೆಯುವ ಸಲಹೆ ನೀಡುವುದಾಗಿ ಅಪರಿಚಿತ ಮೆಸೇಜ್ ಕಳೂಹಿಸಿದ್ದು, ಗುಂಪಿನಲ್ಲಿ ನೀಡಲಾಗುತ್ತಿರುವ ಟ್ಯುಟೋರಿಯಲ್ಗಳಿಗೆ ಹಾಜರಾದ ನಂತರ, ಹಣವನ್ನು ಹೂಡಿಕೆ ಮಾಡಲು ಮುಂದಾದೆ ಎಂದು ತಿಳಿಸಿದ್ದಾರೆ.