ನವದೆಹಲಿ: ಕಚೇರಿಗಳಲ್ಲಿ ಅನೇಕ ಉದ್ಯೋಗಿಗಳು ಕೆಲಸದ ಮಧ್ಯದಲ್ಲಿ ವಾಷ್ರೂಂ, ಟೀ, ಕಾಫಿ, ಊಟಕ್ಕೆಂದು ಲ್ಯಾಪ್‌ಟಾಪ್ ಅನ್ನು ಆನ್ನಲ್ಲೇ ಇಟ್ಟು ಹೋಗುತ್ತಾರೆ. ಆದರೆ ಹೀಗೆ ಮಾಡಿದರೆ ಕೆಲವೊಮ್ಮೆ ಭಾರಿ ಬೆಲೆ ತೆರಬೇಕಾಗುತ್ತದೆ. ಇತ್ತೀಚೆಗಷ್ಟೇ ಝೊಮಾಟೊ ಉದ್ಯೋಗಿಯೊಬ್ಬರು ಇಂಥದ್ದೊಂದು ತಪ್ಪು ಮಾಡಿ, ಮುಜುಗರಕ್ಕೀಡಾಗಿದ್ದರು.

ಇದನ್ನೂ ಓದಿ: ಜ್ಯೂಸ್ ಗೆ ಮೂತ್ರ ಮಿಕ್ಸ್: ಬಾಯಿ ಚಪಲಕ್ಕೆ ಹೊರಗಿನ ಆಹಾರ ಸೇವಿಸುವ ಮುನ್ನ ಯೋಚಿಸದಿದ್ರೆ..?
ಝೊಮಾಟೊ ಮಹಿಳಾ ಉದ್ಯೋಗಿಯೊಬ್ಬರು ಇತ್ತೀಚೆಗಷ್ಟೇ ಇಂಥದ್ದೊಂದು ತಪ್ಪು ಮಾಡಿದ್ದಾರೆ. ಲ್ಯಾಪ್‌ಟಾಪ್ ಮುಚ್ಚದೆ ಬದಿಗೆ ಸರಿಸಿ ಬೇರೆ ಕಡೆ ಹೋಗಿದ್ದಾರೆ. ಆಗ ಆಕೆಯ ಸಹೋದ್ಯೋಗಿ ಯುವಕನೊಬ್ಬ ತಮಾಷೆಗೆಂದು ಆಕೆಯ ಅಕೌಂಟ್ನಿಂದ ಟ್ವೀಟ್ ಮಾಡಿದ್ದಾನೆ. ಇದೀಗ ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಝೊಮಾಟೊ ಉದ್ಯೋಗಿ ಇದನ್ನು ‘ಅಟ್ ನಿಹಾರಿಗೋಟ್’ ಎಂಬ ಖಾತೆಯಿಂದ ಟ್ವೀಟ್ ಮಾಡಿದ್ದಾರೆ.
ಉದ್ಯೋಗಿ ನಿಹಾರಿಕಾ ಆಫೀಸ್‌ನಲ್ಲಿದ್ದಾಗ ಲ್ಯಾಪ್‌ಟಾಪ್ ಮುಚ್ಚದೆ ಡೆಸ್ಕ್‌ನಿಂದ ಬೇರೆ ಕಡೆ ಹೋಗಿದ್ದರು. ಆಗ ಆಕೆಯ ಸಹೋದ್ಯೋಗಿ ನಿಹಾರಿಕಾ ಲ್ಯಾಪ್‌ಟಾಪ್‌ನಿಂದ ‘ಹೇ ಹುಡುಗರೇ, ನಾನು ಹೊಸಜೀವನಕ್ಕೆ ಹೆಜ್ಜೆ ಇಡುತ್ತಿದ್ದೇನೆ. ಫೆಬ್ರವರಿಯಲ್ಲಿ ನನ್ನ ಮದುವೆ. ಇಂದು ಸಂಜೆ ಐದು ಗಂಟೆಗೆ ಸಣ್ಣ ಪಾರ್ಟಿ ಇದೆ. ನೀವೆಲ್ಲ ಬಂದು ಹರಸಿ ನನ್ನನ್ನು ಸಂತೋಷಪಡಿಸಿ’ ಎಂದು ಟ್ವೀಟ್ ಮಾಡಿದ್ದಾರೆ.
ಆಕೆ ಬಂದು ಲ್ಯಾಪ್‌ಟಾಪ್ ನಲ್ಲಿ ಎಂದಿನಂತೆ ಕೆಲಸ ಮುಗಿಸಿ ಮನೆಗೆ ಹೋಗಿದ್ದಾರೆ. ಆದರೆ ಆ ವೇಳೆಗಾಗಲೇ ಟ್ವೀಟ್ ವೈರಲ್ ಆಗಿತ್ತು. ಆ ಟ್ವೀಟ್‌ನ ಸ್ಕ್ರೀನ್ ಶಾಟ್ ಅನ್ನು ನಿಹಾರಿಕಾ ಹಂಚಿಕೊಂಡಿದ್ದಾರೆ.
ಯಾವುದೇ ಕಚೇರಿಯಲ್ಲಿ ಲ್ಯಾಪ್ ಟಾಪ್, ಕಂಪ್ಯೂಟರ್ನಲ್ಲಿ ಕೆಲಸ ಮಾಡುವವರು ತಮ್ಮ ಸಾಮಾಜಿಕ ಮಾಧ್ಯಮದ ಅಕೌಂಟ್ ತೆರೆದಿರುವಾಗಲೇ ಹಾಗೆಯೇ ಬಿಟ್ಟು ಹೊರಹೋಗುವ ಮುನ್ನ ನೂರು ಬಾರಿ ಯೋಚಿಸಬೇಕಿದೆ. ಸದ್ಯಕ್ಕೆ ಇದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಹದ್ದಿನ ಕಣ್ಣಿನಂಥ ದೃಷ್ಟಿ ನಿಮ್ಮದಾಗಬೇಕಾ? ಇವು ನಿಮ್ಮ ಆಹಾರದಲ್ಲಿ ಇವೆಯೇ? ಚೆಕ್ ಮಾಡಿಕೊಳ್ಳಿ