ಬೆಂಗಳೂರು: ಮಾನವನ ಅಂಗಾಂಗಗಳಲ್ಲಿ ಎಲ್ಲವೂ ಮುಖ್ಯವೇ ಆದರೂ ಕಣ್ಣುಗಳು ಪ್ರಮುಖ ಸ್ಥಾನ ಪಡೆದುಕೊಂಡಿವೆ. ಹೀಗಾಗಿಯೇ ಕಣ್ಣುಗಳು ಆರೋಗ್ಯವಾಗಿದ್ದು, ದೃಷ್ಟಿ ಉತ್ತಮವಾಗಿರಬೇಕು. ಆದರೆ ಇತ್ತೀಚೆಗೆ ಫೋನ್, ಟಿವಿ, ಕಂಪ್ಯೂಟರ್ ಮತ್ತಿತರ ಸಾಧನಗಳ ಮಿತಿಮೀರಿದ ಬಳಕೆಯಿಂದ ಅತ್ಯಮೂಲ್ಯವಾದ ಕಣ್ಣುಗಳನ್ನು ಶೀಘ್ರ ದೃಷ್ಟಿದೋಷವಾಗುವಂತೆ ಮಾಡಿಕೊಳ್ಳುತ್ತಿದ್ದೇವೆ. ಇದರ ಜೊತೆಗೆ ಕಣ್ಣಿನ ದೃಷ್ಟಿಗೆ ಬೇಕಾದ ಪೌಷ್ಟಿಕಾಂಶದ ಕೊರತೆಯಿಂದ ಕಣ್ಣಿನ ದೃಷ್ಟಿ ಮತ್ತಷ್ಟು ಬೇಗ ದುರ್ಬಲವಾಗಿರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ದೃಷ್ಟಿ ತೀಕ್ಷ್ಣವಾಗಿರಲು ಮತ್ತು ಹದ್ದಿನ ಕಣ್ಣಿನಂತಹ ದೃಷ್ಟಿ ಹೊಂದಲು ಉತ್ತಮ ಆಹಾರವನ್ನು ಸೇವಿಸಬೇಕು. ನಿಯಮಿತವಾಗಿ ನಿದ್ರೆಯನ್ನೂ ಮಾಡಬೇಕಾಗುತ್ತದೆ.
ಇದನ್ನೂ ಓದಿ: ಶುಭ ಸುದ್ದಿ: ಮತ್ತೆ ವಿಸ್ತರಣೆಯಾಯ್ತು ಆಧಾರ್ ಉಚಿತ ನವೀಕರಣ ದಿನಾಂಕ
ಇವುಗಳನ್ನು ತಪ್ಪದೆ ತಿನ್ನಿ: ಸೊಪ್ಪು, ತರಕಾರಿ, ಮೊಟ್ಟೆ, ಹಣ್ಣುಗಳನ್ನು ಆಹಾರದಲ್ಲಿ ತಪ್ಪದೆ ಅಳವಡಿಸಿಕೊಳ್ಳಬೇಕು. ಇವುಗಳ ನಿಯಮಿತ ಸೇವನೆಯಿಂದ ಕಣ್ಣಿನ ಆರೋಗ್ಯ ಸುಧಾರಿಸುತ್ತದೆ.
ಹೊನಗೊನ್ನೆ ಸೊಪ್ಪು ಸೇರಿದಂತೆ ಇತರೆ ಸೊಪ್ಪುಗಳನ್ನು ತಿನ್ನುವುದರಿಂದ ದೃಷ್ಟಿ ಸುಧಾರಿಸುತ್ತದೆ. ಹಸಿರು ತರಕಾರಿಗಳಲ್ಲಿ ಲುಟೀನ್ ಮತ್ತು ಜಿಯಾಕ್ಸಾಂಥಿನ್ ಎಂಬ ಉತ್ಕರ್ಷಣ ನಿರೋಧಕಗಳು ಕಂಡುಬರುತ್ತವೆ. ಇವು ಸೂರ್ಯನ ಹಾನಿಕಾರಕ ಕಿರಣಗಳಿಂದ ಕಣ್ಣುಗಳನ್ನು ರಕ್ಷಿಸಲು ಸಹಾಯ ಮಾಡುತ್ತವೆ.
ಇನ್ನು ವಾಲ್ ನಟ್ಸ್ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇವುಗಳಲ್ಲಿ ಒಮೆಗಾ -3 ಕೊಬ್ಬಿನಾಮ್ಲವಿರುತ್ತದೆ. ಇವು ಕಣ್ಣಿನ ಊತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ. ಇದು ರೆಟಿನಾಕ್ಕೆ ತುಂಬಾ ಪ್ರಯೋಜನಕಾರಿ. ನೆನೆಸಿದ ವಾಲ್ ನಟ್ಸ್ ಅನ್ನು ಪ್ರತಿದಿನ ಸೇವಿಸಿದರೆ ದೃಷ್ಟಿ ಬಲಗೊಳ್ಳುತ್ತದೆ. ಸದೇ ರೀತಿ ಸಿಹಿ ಆಲೂಗಡ್ಡೆಯಲ್ಲಿ ಬೀಟಾ ಕ್ಯಾರೋಟಿನ್ ಅನ್ನು ಹೊಂದಿರುತ್ತದೆ. ಇದು ಕಣ್ಣಿಗೆ ತುಂಬಾ ಒಳ್ಳೆಯದು. ಇದು ಒಣ ಕಣ್ಣುಗಳನ್ನು ಕಡಿಮೆ ಮಾಡುತ್ತದೆ. ದೃಷ್ಟಿ ಬಲವಾಗಿರಿಸುತ್ತದೆ.
ಅದೇ ರೀತಿ ಮೊಟ್ಟೆಯಲ್ಲಿ ವಿಟಮಿನ್-ಎ ಮತ್ತು ಜಿಂಕ್ ಜೊತೆಗೆ ಲುಟೀನ್ ಮತ್ತು ಜಿಯಾಕ್ಸಾಂಥಿನ್ ಇದ್ದು, ದೃಷ್ಟಿಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಕಿತ್ತಳೆಯಲ್ಲಿ ವಿಟಮಿನ್-ಸಿ ಸಮೃದ್ಧವಾಗಿದೆ. ಇದು ಕಣ್ಣಿನ ರಕ್ತನಾಳಗಳನ್ನು ಆರೋಗ್ಯವಾಗಿರಿಸುತ್ತದೆ. ಕಣ್ಣಿನ ಸಮಸ್ಯೆಗಳನ್ನು ತಡೆಯಲು ಸಹಾಯ ಮಾಡುತ್ತದೆ. ದೃಷ್ಟಿಯನ್ನು ಬಲವಾಗಿ ಬದಲಾಯಿಸುತ್ತದೆ. ಬಾದಾಮಿಯು ದೃಷ್ಟಿಯನ್ನು ಚುರುಕುಗೊಳಿಸುತ್ತದೆ. ಸ್ವತಂತ್ರ ರಾಡಿಕ್ಗಳಿಂದ ಉಂಟಾಗುವ ಹಾನಿಯಿಂದ ಕಣ್ಣಿನ ಕೋಶಗಳನ್ನು ರಕ್ಷಿಸಲು ಸಹಾಯ ಮಾಡುತ್ತದೆ. ಹೀಗಾಗಿ ಮೇಲೇಳಿದ ಆಹಾರಗಳನ್ನು ತಪ್ಪದೆ ಸೇವಿಸಬೇಕಾಗುತ್ತದೆ.
‘ತಲೈವರ್ ‘ಕಾಲ್’ ಮರೆಯಲಾಗದು’: ರಜನಿಕಾಂತ್ ಕುರಿತು ನಿರ್ದೇಶಕ ಲಿಂಗಸ್ವಾಮಿ ಭಾವುಕ ಮಾತು