

ನವದೆಹಲಿ: ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ಮತ್ತೊಮ್ಮೆ ಆಧಾರ್ ಕಾರ್ಡ್ ವಿವರಗಳನ್ನು ಉಚಿತವಾಗಿ ನವೀಕರಿಸಲು ಕೊನೆಯ ದಿನಾಂಕವನ್ನು ವಿಸ್ತರಿಸುವುದಾಗಿ ಘೋಷಿಸಿದೆ.
ಯುಐಡಿಎಐನ ಈ ಹಿಂದಿನ ಆದೇಶದಂತೆ ಆಧಾರ್ (ಆಧಾರ್ ಕಾರ್ಡ್) ಅನ್ನು ಉಚಿತವಾಗಿ ನವೀಕರಿಸುವ ಬಗ್ಗೆ ಶನಿವಾರ (ಸೆಪ್ಟೆಂಬರ್ 14) ಕೊನೆಯ ದಿನಾಂಕವಾಗಿತ್ತು. ಈಗ ಅದನ್ನು ಮೂರು ತಿಂಗಳ ಕಾಲ ವಿಸ್ತರಿಸಲಾಗಿದೆ.
ಈ ಆದೇಶದಲ್ಲಿ, ಆಧಾರ್ ಅನ್ನು ಉಚಿತವಾಗಿ ನವೀಕರಿಸಲು ಸರ್ಕಾರ ಮೂರು ತಿಂಗಳ ಗಡುವನ್ನು ವಿಸ್ತರಿಸಿದೆ. ಇದರಿಂದ ದೇಶದ ಕೋಟ್ಯಂತರ ಜನರಿಗೆ ಅನುಕೂಲವಾಗಲಿದೆ.