ಶ್ರೀನಗರ: ಜಮ್ಮು ಮತ್ತು ಕಾಶ್ಮೀರವನ್ನು ಕಾಂಗ್ರೆಸ್, ನ್ಯಾಷನಲ್ ಕಾನ್ಫರೆನ್ಸ್ ಮತ್ತು ಪಿಡಿಪಿ ವಂಶಾಡಳಿತಗಳು ಹಾಳುಮಾಡಿವೆ ಎಂದು ಪ್ರಧಾಇ ಮೋದಿ ಆರೋಪಿಸಿದರು.
ಇದನ್ನೂ ಓದಿ: ಪಾತ್ರಕ್ಕಾಗಿ ನಟಿಯರು ‘ಅಡ್ಜಸ್ಟ್’ ಆರೋಪ: ಕೇಸ್ ದಾಖಲಿಸಿದ ನಟಿ!
ಜಮ್ಮು ಮತ್ತು ಕಾಶ್ಮೀರದಲ್ಲಿ ವಿಧಾನಸಭಾ ಚುನಾವಣೆಯ ಪ್ರಚಾರಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಶನಿವಾರ (ಸೆಪ್ಟೆಂಬರ್ 14) ದೋಡಾದಲ್ಲಿ ಸಾರ್ವಜನಿಕ ಸಮಾವೇಶವನ್ನುದ್ದೇಶಿಸಿ ಮಾತನಾಡಿದರು.
ಈ ಮೂರು ಕುಟುಂಬಗಳು ಇಲ್ಲಿ ಭ್ರಷ್ಟಾಚಾರವನ್ನು ಉತ್ತೇಜಿಸಿದವು. ಭೂಗಳ್ಳರ ಗುಂಪುಗಳನ್ನು ಉತ್ತೇಜಿಸಿದರು. ನೀವು ಸಣ್ಣ ಸೌಕರ್ಯಗಳಿಗೆ ಹಂಬಲಿಸುತ್ತಿದ್ದೀರಿ. ಹಾಗಾಗಿ ಸುಭದ್ರ ರಾಜ್ಯ ಕಟ್ಟೋಣ ಎಂದರು.
ಈ ಮೂರು ಕುಟುಂಬಗಳು ಸೇರಿ ಕಣಿವೆ ರಾಜ್ಯದಲ್ಲಿ ಮಾಡಿದ್ದು ಪಾಪ ಕೃತ್ಯ. ದಶಕಗಳ ಕಾಲ ರಾಜ್ಯವನ್ನು ಹಾಳುಗೆಡವಲು ಮೂರು ಕುಟುಂಬಗಳು ಕಾಣಿಕೆ ನೀಡಿವೆ. ನೀವು ಮತ್ತು ನಾನು ಒಟ್ಟಾಗಿ ಸುರಕ್ಷಿತ ಕಾಶ್ಮೀರವನ್ನು ನಿರ್ಮಿಸೋಣ ಎಂದು ಜನತೆಗೆ ಕರೆ ನೀಡಿದರು.
ಕಾಂಗ್ರೆಸ್ಗೆ 20 ಸೀಟು ಬಂದಿದ್ದರೆ ಮೋದಿ ಸೇರಿದಂತೆ ನಾಯಕರೆಲ್ಲ ಜೈಲು ಪಾಲಾಗುತ್ತಿದ್ದರು ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಇತ್ತೀಚೆಗಷ್ಟೇ ಆರೋಪಿಸಿದ್ದಕ್ಕೆ ತಿರುಗೇಟು ಕೊಟ್ಟ ಮೋದಿ ನಾಯಕರನ್ನು ಜೈಲಿಗೆ ಕಳುಹಿಸಲು ನೀವು ಸರ್ಕಾರ ರಚಿಸಬೇಕಾ? ಅಥವಾ ಜನರ ಕಲ್ಯಾಣಕ್ಕಾಗಿ ನೀವು ಸರ್ಕಾರ ರಚಿಸಬೇಕಾ ಎಂದು ಪ್ರಶ್ನಿಸಿದರು.
ಕಾಶ್ಮೀರಿ ಪಂಡಿತರ ಮೇಲೆ ಅಂತ್ಯವಿಲ್ಲದ ಸರಣಿ ದೌರ್ಜನ್ಯಗಳು ನಡೆದಿವೆ. ಬಿಜೆಪಿ ಕಾಶ್ಮೀರಿ ಪಂಡಿತರ ಪರವಾಗಿ ಧ್ವನಿ ಎತ್ತಿ ಅವರನ್ನು ಬೆಂಬಲಿಸಿತು. ಇಲ್ಲಿ ನಮ್ಮ ಮಗಳು ಶಗುನ್ ವೇದಿಕೆಯ ಮೇಲೆ ಕುಳಿತಿದ್ದಾರೆ. ಅವರ ತಂದೆ ಮತ್ತು ಚಿಕ್ಕಪ್ಪ ಇಬ್ಬರನ್ನೂ ಭಯೋತ್ಪಾದಕರು ಕೊಂದರು. ಇದೀಗ ಭಯೋತ್ಪಾದನೆ ಸಂತ್ರಸ್ತ ಮಗಳಿಗೆ ಬಿಜೆಪಿ ಟಿಕೆಟ್ ನೀಡಿದೆ. ಶಗುನ್ ಕೇವಲ ಅಭ್ಯರ್ಥಿ ಅಲ್ಲ. ಇದು ಭಯೋತ್ಪಾದನೆಯನ್ನು ಕೊನೆಗಾಣಿಸುವ ಬಿಜೆಪಿಯ ಬಲವಾದ ಉದ್ದೇಶಗಳ ಜೀವಂತ ಚಿತ್ರವಾಗಿದೆ ಎಂದರು.
ಕಳೆದ 10 ವರ್ಷಗಳಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಆಗಿರುವ ಬದಲಾವಣೆ ಕನಸಿಗಿಂತ ಕಡಿಮೆಯಿಲ್ಲ. ಈ ಹಿಂದೆ ಪೊಲೀಸರು ಮತ್ತು ಪಡೆಗಳ ಮೇಲೆ ಕಲ್ಲೆಸೆಯಲು ಬಳಸುತ್ತಿದ್ದ ಕಲ್ಲುಗಳಿಂದ ಹೊಸ ಜಮ್ಮು ಮತ್ತು ಕಾಶ್ಮೀರ ರಚನೆಯಾಗುತ್ತಿದೆ. ಇದನ್ನೆಲ್ಲಾ ಮಾಡಿದ್ದು ಯಾರು? ಮೋದಿ ಇದನ್ನು ಮಾಡಲಿಲ್ಲ, ಜಮ್ಮು ಮತ್ತು ಕಾಶ್ಮೀರದ ಜನರು ಇದನ್ನು ಮಾಡಿದ್ದೀರಿ. ನಿಮ್ಮ ಈ ನಂಬಿಕೆಯನ್ನು ಮುಂದಿಟ್ಟುಕೊಂಡು ಜಮ್ಮು ಮತ್ತು ಕಾಶ್ಮೀರ ಬಿಜೆಪಿ ನಿಮಗಾಗಿ ಹಲವು ನಿರ್ಣಯಗಳನ್ನು ತೆಗೆದುಕೊಂಡಿದೆ ಎಂದರು.
ಈದ್ ಮಿಲಾದ್ ರಜೆ, ಮೆರವಣಿಗೆ ಬದಲಾವಣೆ: ‘ಮಹಾ’ ಸರ್ಕಾರದ ತೀರ್ಮಾನದ ಹಿಂದಿದೆ ಆ ಪ್ರಮುಖ ಕಾರಣ!