ಚೆನ್ನೈ: ಚೆಕ್ ಬೌನ್ಸ್ ಪ್ರಕರಣದಲ್ಲಿ ರಾಮ್ ವಾರಿಯರ್ ಸಿನಿಮಾ ನಿರ್ದೇಶಕ ಲಿಂಗಸ್ವಾಮಿಗೆ ಕೋರ್ಟ್ ಆರು ತಿಂಗಳ ಜೈಲು ಶಿಕ್ಷೆ ವಿಧಿಸಿದ್ದು ತಿಳಿದ ಸಂಗತಿಯೇ. ಇತ್ತೀಚೆಗಷ್ಟೇ ಈ ಕುರಿತು ಮಾತನಾಡಿರುವ ಲಿಂಗಸ್ವಾಮಿ, ರಜನಿಕಾಂತ್ ನಾನು ಏನಾದರೂ ಮಾಡಲೇ? ಎಂದು ಕರೆ ಮಾಡಿ ಕೇಳಿದ್ದರು ಎಂದು ಬಹಿರಂಗಪಡಿಸಿದ್ದಾರೆ
ಇದನ್ನೂ ಓದಿ: ಜಮ್ಮು, ಕಾಶ್ಮೀರವನ್ನು ಆ ಮೂರು ಕುಟುಂಬಗಳು ಹಾಳುಮಾಡಿದವು: ಪ್ರಧಾನಿ ಮೋದಿ
ಈ ಹಿಂದೆ ಲಿಂಗುಸ್ವಾಮಿ ನಿರ್ದೇಶನದ ‘ಉತ್ತಮ ವಿಲನ್’ ಡಿಸಾಸ್ಟರ್ ಫ್ಲಾಪ್ ಆಗಿತ್ತು. ಇದರಿಂದ ಅವರು ಆರ್ಥಿಕ ನಷ್ಟ ಅನುಭವಿಸಿದರು. ಆ ನಂತರ ಲಿಂಗಸ್ವಾಮಿ ‘ಇದಂ ಪೊರುಳ್ ಅವಳ್’ ಸಿನಿಮಾ ನಿರ್ದೇಶಿಸಿದ್ದರು. ಆದರೆ, ಪಿವಿಪಿ ಮತ್ತು ತಿರುಪತಿ ಬ್ರದರ್ಸ್ ನಡುವೆ ಹಣಕಾಸಿನ ವಿವಾದ ಕೋರ್ಟ್ ಮೆಟ್ಟಿಲೇರಿತ್ತು. ಸಾಲ ಮರುಪಾವತಿಸಲು ಪಿವಿಪಿ ಸಂಸ್ಥೆಗೆ ಲಿಂಗಸ್ವಾಮಿ ನೀಡಿದ್ದ ಚೆಕ್ ಬೌನ್ಸ್ ಆಗಿತ್ತು. ಈ ಪ್ರಕರಣದಲ್ಲಿ ಸೈದಾಪೇಟೆ ನ್ಯಾಯಾಲಯ ಲಿಂಗಸ್ವಾಮಿಗೆ ಆರು ತಿಂಗಳ ಜೈಲು ಶಿಕ್ಷೆ ವಿಧಿಸಿತ್ತು. ಇದನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದಾಗ ಅಲ್ಲಿಯೂ ಮನವಿ ತಿರಸ್ಕೃತವಾಗಿತ್ತು.
ಇದನ್ನು ತಿಳಿದ ರಜನೀಕಾಂತ್ ಅವರೇ ಲಿಂಗುಸಾಮಿಗೆ ಕರೆ ಮಾಡಿ ‘ನಾನೇನಾದರೂ ಮಾಡಬೇಕಾ? ಸಮಸ್ಯೆ ಏನು? ಅದು ಎಷ್ಟಾಗುತ್ತದೆ? ಎಂದಿದ್ದರು. ಆ ಸಮಯದಲ್ಲಿ ನಾನು ತುಂಬಾ ಭಾವುಕನಾಗಿದ್ದೆ. ಕೇಳುವುದರಲ್ಲಿ ತಪ್ಪೇನಿಲ್ಲ. ಆದರೆ, ಮೊತ್ತ ಜಾಸ್ತಿಯಾದರೆ ಇತ್ಯರ್ಥ ಮಾಡಿಕೊಳ್ಳೋಣ ಎಂಬ ತಲೈವರ್ ಮಾತು ಜೀವನದಲ್ಲಿ ಮರೆಯಲಾಗದ ಸಂಗತಿ ಎಂದು ಲಿಂಗುಸ್ವಾಮಿ ಇತ್ತೀಚೆಗೆ ಬಹಿರಂಗಪಡಿಸಿದ್ದಾರೆ.