

ನವದೆಹಲಿ: ವಾರ್ಷಿಕ 5ಕೋಟಿ ರೂಪಾಯಿಗಿಂತ ಹೆಚ್ಚಿನ ವ್ಯವಹಾರ ನಡೆಸುವ ಉದ್ದಿಮೆಗಳಿಗೆ B2B ವಹಿವಾಟಿಗೆ ಇ-ಇನ್ವಾಯ್ಸ್ ಸೃಷ್ಟಿಸುವುದು ಆಗಸ್ಟ್ 1ರಿಂದ ಕಡ್ಡಾಯಗೊಳಿಸಲಾಗಿದೆ.
ಹಾಲಿ ವಾರ್ಷಿಕ 10ಕೋಟಿಗಿಂತ ಹೆಚ್ಚಿನ ವ್ಯವಹಾರ ನಡೆಸುವ ಉದ್ದಿಮೆಗಳಿಗೆ B2B ವಹಿವಾಟಿಗೆ ಇ-ಇನ್ವಾಯ್ಸ್ ಸೃಷ್ಟಿಸುವುದನ್ನು ಕೇಂಡ್ರ ಹಣಕಾಸು ಸಚಿವಾಲಯ ಕಡ್ಡಾಯಗೊಳಿಸಿದೆ.
ಈ ಕುರಿತು ಆದೇಶ ಹೊರಡಿಸಿರುವ ಕೇಂದ್ರ ಹಣಕಾಸು ಸಚಿವಾಲಯವು ಇ-ಇನ್ವಾಯಸ್ ಮಿತಿಯನ್ನು 10 ಕೋಟಿಯಿಂದ 5 ಕೋಟಿ ರೂಪಾಯಿಗೆ ಕಡಿತಗೊಳಿಸಲಾಗಿದೆ.
ಈ ಮೊದಲು ವಾರ್ಷಿಕ 500 ಕೋಟಿ ರೂಪಾಯಿಗಿಂತ ಅಧಿಕ ಮತ್ತದ ವಹಿವಾಟುಗಳಿಗೆ ಇ-ಇನ್ವಾಯ್ಸ್ ಕಡ್ಡಾಯ ಮಾಡಲಾಗಿತ್ತು. ಮೂರು ವರ್ಷಗಳಲ್ಲಿ 5 ಕೋಟಿ ರೂಪಾಯಿಗೆ ಇಳಿಸಲಾಗಿದೆ ಎಂದು ತನ್ ಪ್ರಕಟಣೆಯಲ್ಲಿ ತಿಳಿಸಿದೆ.
ಇ-ಇನ್ವಾಯ್ಸ್ ಪ್ರಕ್ರಿಯೆಯನ್ನು ಹಂತಹಂತವಾಗಿ ಜಾರಿ ಮಾಡುತ್ತಿರುವುದರಿಂದ ತೊಡಕುಗಳು ಕಡಿಮೆ ಆಗಲಿವೆ. ನಿಯಮ ಅನುಸರಣೆಯಲ್ಲಿ ಸುಧಾರಣೆ ಕಂಡು ಬರಲಿದ್ದು ಆದಾಯ ಹೆಚ್ಚಾಗಲಿದೆ ಎಂದು ಹೇಳಲಾಗಿದೆ.