ದೇವಸ್ಥಾನಕ್ಕೆ ಹೋಗಿ ಮರಳುತ್ತಿದ್ದಾಗ ಬಸ್ಸೇ ಪಲ್ಟಿ; ಆ ತಕ್ಷಣ ನಡೆದಿದ್ದೇ ಪವಾಡ..!

Bus
Published on

ಚಾಮರಾಜನಗರ: ದೇವಸ್ಥಾನಕ್ಕೆ ಹೋಗಿ ಮರಳುತ್ತಿದ್ದ, ಸುಮಾರು 30 ಜನರಿದ್ದ ಖಾಸಗಿ ಬಸ್​ ಪಲ್ಟಿಯಾಗಿದೆ. ಚಾಮರಾಜನಗರ ಜಿಲ್ಲೆ ಹನೂರು ಪಟ್ಟಣದ ಕೆಇಬಿ ಕಚೇರಿ ಬಳಿ ಈ ಅಪಘಾತ ಸಂಭವಿಸಿದೆ.

ಬಸ್​ನಲ್ಲಿದ್ದವರೆಲ್ಲರೂ ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳಿ ದೇವರ ದರ್ಶನ ಪಡೆದು ಮರಳುತ್ತಿದ್ದರು. ಈ ಅಪಘಾತದಲ್ಲಿ ಬಸ್​ ಪಲ್ಟಿಯಾದರೂ ಅಷ್ಟೂ ಜನರು ದೇವರ ಪವಾಡವೆಂಬಂತೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಬಸ್​ನಲ್ಲಿದ್ದ ಎಲ್ಲರೂ ಚನ್ನಪಟ್ಟಣದವರಾಗಿದ್ದು, ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಈ ಸಂಬಂಧ ಹನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net